India vs England Test Series: ‘ಮೊಟೆರಾ ಪಿಚ್​ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿರಲಿಲ್ಲ’ ಟ್ರೋಲ್​ ಆಯ್ತು ಯುವರಾಜ್​ ಸಿಂಗ್ ಹೇಳಿಕೆ

|

Updated on: Feb 26, 2021 | 10:39 PM

ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.

India vs England Test Series: ‘ಮೊಟೆರಾ ಪಿಚ್​ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿರಲಿಲ್ಲ’ ಟ್ರೋಲ್​ ಆಯ್ತು ಯುವರಾಜ್​ ಸಿಂಗ್ ಹೇಳಿಕೆ
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕೆಲ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ಪಂಜಾಬ್ ಬಿಜೆಪಿ. ಅದರಂತೆ ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ದವಾಗುತ್ತಿದ್ದು, ಆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಹೆಸರು ಮುಂಚೂಣಿಯಲ್ಲಿರುವುದು ವಿಶೇಷ.
Follow us on

ಮೊಟೆರಾದ ನರೆಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿರುವ ಪಿಚ್ ಬಗ್ಗೆ ಎದ್ದಿರುವ ವಾದ-ವಿವಾದಗಳು ಕೊನೆಗಾಣುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವರು ಅದನ್ನು ವಹಿಸಿಕೊಂಡು ಮಾತಾಡಿದರೆ ಇನ್ನೂ ಕೆಲವರು ಅದು ಟೆಸ್ಟ್​ ಕ್ರಿಕೆಟ್​ಗೆ ಯೋಗ್ಯವಾದ ಪಿಚ್ ಅಗಿರಲಿಲ್ಲ ಅಂತ ಹೇಳುತ್ತಿದ್ದಾರೆ. ಇಂಗ್ಲೆಂಡ್​ನ ಮಾಜಿ ಮತ್ತು ಹಾಲಿ ಅಟಗಾರರು ಪಿಚ್​ ಸ್ವರೂಪವನ್ನು ಟೀಕಿಸಿದರೆ ಅದನ್ನು ಭಾರತೀಯರು ಒಪ್ಪಬಹುದು, ಅದರೆ ಭಾರತದ ಒಬ್ಬ ಮಾಜಿ ಆಟಗಾರ ಪಿಚ್​ ಅನ್ನು ಟೀಕಿಸಿ ಟ್ರೋಲ್​ಗಳಗಾಗಿದ್ದಾರೆ. ತಾವಾಡುತ್ತಿದ್ದ ದಿನಗಳಲ್ಲಿ ಯುವರಾಜ್ ಸಿಂಗ್ ಕೇವಲ ಭಾರತ ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಹೆಸರುವಾಸಿ ಆಟಗಾರನಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಜೊತೆ ಉಪಯುಕ್ತ ಎಡಗೈ ಸ್ಪಿನ್ನರ್ ಆಗಿದ್ದ ಯುವಿಗೆ ಮೊಟೆರಾದ ಸ್ಟೇಡಿಯಂ ಸರಿಯೆನಿಸುತ್ತಿಲ್ಲ. ಹಾಗೆಯೇ ಅವರು ಮಾಡಿರುವ ಟೀಕೆ ಭಾರತದಲ್ಲಿನ ಕ್ರಿಕೆಟ್​ ಪ್ರೇಮಿಗಳಿಗೆ ಸರಿಯೆನಿಸುತ್ತ್ತಿಲ್ಲ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್ ಎರಡನೇ ದಿನವೇ ಕೊನೆಗೊಂಡಿದ್ದು ಈಗ ಇತಿಹಾಸ. ಈ ಟೆಸ್ಟ್​ನಲ್ಲಿ ಅತಿಥೇಯರ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಸ್ಪಿನ್ ಜೋಡಿಯು ಪ್ರವಾಸಿಗರ 20 ವಿಕೆಟ್​ಗಳ ಪೈಕಿ 18 ಅನ್ನು ಹಂಚಿಕೊಂಡರು. ಇಂಗ್ಲೆಂಡ್​ ತಂಡದ ಬ್ಯಾಟ್ಸ್​ಮನ್​ಗಳು ಎರಡೂ ಇನ್ನಿಂಗ್ಸ್​ಗಳಲ್ಲಿ ಸೇರಿ 200 ರನ್ ಸಹ ಗಳಿಸಲು ವಿಫಲರಾದರು. ಮೊದಲ ಇನ್ನಿಂಗ್ಸ್​ನಲ್ಲಿ ಅವರು 112 ರನ್ ಗಳಿಸಿದರೆ ಎರಡನೆಯದರಲ್ಲಿ ಕೇವಲ 81 ರನ್​ಗಳಿಗೆ ಅಲೌಟ್​ ಆದರು. ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ 81 ರನ್​ಗಳ ಮೊತ್ತ ಭಾರತದ ವಿರುದ್ಧ ಇದುವರೆಗಿನ ಅತಿ ಕಡಿಮೆ ಸ್ಕೋರ್ ಅಗಿದೆ. ಅಲ್ಲದೆ ಅವರು ಎರಡನೇ ದಿನದಾಟದಲ್ಲಿ ಕೇವಲ ಒಂದು ಸೆಷನ್​ನಲ್ಲಿ ಎಲ್ಲ ವಿಕೆಟ್​ಗಳನ್ನು ಒಪ್ಪಿಸಿದರು.

ಈ ಟೆಸ್ಟ್​ನಲ್ಲಿ 11 ವಿಕೆಟ್​ಗಳನ್ನು ಪಡೆದ ಪಟೇಲ್ ಅಹರ್ನಿಶಿ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾದರು. ಅಶ್ವಿನ್ 7 ವಿಕೆಟ್​ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಟೆಸ್ಟ್​ ಕರೀಯರ್​ನಲ್ಲಿ 400 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆಗೆ ಮೊಟೆರಾದಂಥ ಪಿಚ್​ಗಳು ದೊರಕಿದ್ದರೆ ಅವರು ಕ್ರಮವಾಗಿ 800 ಮತ್ತು 1,000 ವಿಕೆಟ್​ಗಳನ್ನು ಪಡೆದು ರಿಟೈರಾಗುತ್ತಿದ್ದರು ಎಂದು ಯುವಿ ಹೇಳಿದ್ದಾರೆ.

3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ​

‘ಎರಡೇ ದಿನಗಳಲ್ಲಿ ಪಂದ್ಯ ಮುಗಿದಿದೆ, ಈ ಪಿಚ್ ಟೆಸ್ಟ್ ಕ್ರಿಕೆಟ್​ಗೆ ಯೋಗ್ಯವಾಗಿತ್ತೆನ್ನುವ ಬಗ್ಗೆ ಸಂಶಯ ಹುಟ್ಟಿದೆ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್​ ಸಿಂಗ್ ಇಂಥ ಪಿಚ್​ಗಳ ಮೇಲೆ ಬೌಲ್ ಮಾಡಿದ್ದರೆ, ಸಾವಿರ ಮತ್ತು 800 ವಿಕೆಟ್​ ಗಳಿಸಿರುತ್ತಿದ್ದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದರೆ, ಈ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನಗಳನ್ನು ನೀಡಿದ ಅಕ್ಷರ್ ಮತ್ತು ಅಶ್ವಿನ್ ಅವರನ್ನು ಅಭಿನಂದಿಸುವುದನ್ನು ಯುವಿ ಮರೆತಿಲ್ಲ. ‘ಅಕ್ಷರ್​ಗೆ ಅಭಿನಂದನೆಗಳು, ಎಂಥ ಸ್ಪೆಲ್! ಅಶ್ವಿನ್​ ಅವರಿಗೂ ನನ್ನ ಅಭಿನಂದನೆಗಳು’ ಎಂದು ಯುವಿ ಟ್ವೀಟ್ ಮಾಡಿದ್ದಾರೆ,

ಆದರೆ, ಯುವಿಯ ಟ್ವೀಟ್ ಕ್ರಿಕೆಟ್​ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಅವರು ಸಹ ಟ್ವೀಟ್​ಗಳ ಮೂಲಕ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆಯುಶ್ ಶುಕ್ಲಾ ಹೆಸರಿನ ಅಭಿಮಾನಿಯೊಬ್ಬರು, ’ಯುವಿ ಭಾಯ್, ಬಾರತ ಮತ್ತು ಅಸ್ಟ್ರೇಲಿಯಾ ಮಧ್ಯೆ 2004ರಲ್ಲಿ ಮುಂಬೈಯಲ್ಲಿ ನಡೆದ ಒಂದು ಟೆಸ್ಟ್ ಕೇವಲ ಎರಡೂವರೆ ದಿನಗಳಲ್ಲಿ ಮುಗಿದಿತ್ತು ಎನ್ನುವುದನ್ನು ಮರೆಯಬೇಡಿ. ಆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಕೇವಲ 9 ರನ್ ನೀಡಿ 6 ವಿಕೆಟ್ ಪಡೆದ ಮೈಕೆಲ್ ಕ್ಲಾರ್ಕ್. ಆ ಪಂದ್ಯದಲ್ಲಿ ಕುಂಬ್ಳೆ ಮತ್ತು ಹರ್ಭಜನ್ ಸಹ ಆಡಿದ್ದರು’ ಅಂತ ಟ್ವೀಟ್ ಮಾಡಿದ್ದಾರೆ.

ವಾಸು ಮಿಶ್ರಾ ಹೆಸರಿನ ಮತ್ತೊಬ್ಬ ಅಭಿಮಾನಿ, ‘ಪಾಜಿ ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ಅದರೆ ನಿಮ್ಮ ಈ ಟ್ವೀಟ್​ನ ಅವಶ್ಯಕತೆಯಿರಲಿಲ್ಲ. ಮೊದಲು ವಿರಾಟ್-ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್-ಸೆಹ್ವಾಗ್ ಮಧ್ಯೆ ಹೋಲಿಕೆಗಳನ್ನು ಮಾಡಿದಾಗ ರಿಟೈರ್​ ಅಗಿರುವ ನಿಮ್ಮಂಥ ಆಟಗಾರರು ಹೋಲಿಕೆ ಮಾಡುವುದು ಸರಿಯಲ್ಲ ಅಂತ ಹೇಳುತ್ತೀರಿ ಮತ್ತು ಸಮಯ ಬಂದಾಗ ನೀವೇ ಹೋಲಿಕೆ ಮಾಡಲಾರಂಭಿಸುತ್ತೀರಿ’ ಎಂದು ಟ್ವೀಟ್ ಮಾಡಿದ್ದಾರೆ.

ಸುಮ್ಮನಿರದೆ ಏನೋ ಮಾಡಿಕೊಂಡರು ಅಂತ ಹೇಳುತ್ತಾರಲ್ಲ, ಹಾಗಾಗಿದೆ ಯುವಿಯ ಸ್ಥಿತಿ.

ಇದನ್ನೂ ಓದಿ: India vs England Test Series: ಪಿಂಕ್​ ಬಾಲ್​ನೊಂದಿಗೆ ಇಳಿಸಂಜೆಯಲ್ಲಿ ಬ್ಯಾಟ್​ ಮಾಡುವುದು ಕಷ್ಟ: ವಿರಾಟ್​ ಕೊಹ್ಲಿ

Published On - 7:56 pm, Fri, 26 February 21