AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ ನ್ಯೂಸ್; ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾನೆ ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್!

ಟೀಮ್ ಇಂಡಿಯಾದ ಆಲ್‌ರೌಂಡರ್ ಮತ್ತು ಐಪಿಎಲ್‌ನ ಹಲವು ತಂಡಗಳ ಪರ ಆಡಿರುವ ಯೂಸುಫ್ ಪಠಾಣ್ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗುಡ್ ನ್ಯೂಸ್; ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾನೆ ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್!
ಟೀಂ ಇಂಡಿಯಾ ಆಟಗಾರರು
ಪೃಥ್ವಿಶಂಕರ
|

Updated on: Jul 03, 2021 | 2:50 PM

Share

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಇತ್ತೀಚೆಗೆ ನಿವೃತ್ತರಾದ ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ಮತ್ತೆ ಮೈದಾನಕ್ಕೆ ಮರಳಲು ನಿರ್ಧರಿಸಿದ್ದಾರೆ. ಅವರು ಕ್ರಿಕೆಟ್ ಬದುಕಿನ 2ನೇ ಇನ್ನಿಂಗ್ಸ್ ಶ್ರೀಲಂಕಾ ಮೈದಾನದಿಂದ ಆಗಲಿದೆ. ನಾವು ಮಾತನಾಡುತ್ತಿರುವ ಅದ್ಭುತ ಆಟಗಾರ ಬ್ಯಾಟ್‌ನೊಂದಿಗೆ ಅಬ್ಬರಿಸಿದ್ದಲ್ಲದೆ, ಬೌಲಿಂಗ್​ನಲ್ಲೂ ಮ್ಯಾಜಿಕ್ ಮಾಡಿದ್ದಾನೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ, ಈ ಆಟಗಾರ ಅಬ್ಬರದ ಶತಕ ಕೂಡ ಬಾರಿಸಿದ್ದಾನೆ. ಬನ್ನಿ, ಮೈದಾನದಲ್ಲಿ ಮತ್ತೊಮ್ಮೆ ಬ್ಯಾಟ್‌ನಿಂದ ಮ್ಯಾಜಿಕ್ ಮಾಡಲು ಹೊರಟಿರುವ ಆ ಆಟಗಾರ ಯಾರೆಂಬುದನ್ನು ನೋಡೋಣ.

ಯೂಸುಫ್ ಪಠಾಣ್ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಾಸ್ತವವಾಗಿ, ಟೀಮ್ ಇಂಡಿಯಾದ ಆಲ್‌ರೌಂಡರ್ ಮತ್ತು ಐಪಿಎಲ್‌ನ ಹಲವು ತಂಡಗಳ ಪರ ಆಡಿರುವ ಯೂಸುಫ್ ಪಠಾಣ್ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಪ್ರಾರಂಭವಾಗಲಿರುವ ಲಂಕಾ ಪ್ರೀಮಿಯರ್ ಲೀಗ್‌ಗಾಗಿ ಅವರು ತಮ್ಮನ್ನು ತಾವು ನೋಂದಾಯಿಸಿಕೊಂಡಿದ್ದಾರೆ. ಯೂಸುಫ್ ಮಾತ್ರವಲ್ಲ, ಇತರ ಅನೇಕ ಅನುಭವಿ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡಲು ಒಪ್ಪಿಗೆ ನೀಡಿದ್ದಾರೆ. ಯೂಸುಫ್ ಪಠಾಣ್ ಈ ವರ್ಷ ಫೆಬ್ರವರಿ 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಇದರ ನಂತರ ಯೂಸುಫ್ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಭಾಗವಹಿಸಿದರು. ಇಂಡಿಯಾ ಲೆಜೆಂಡ್ಸ್ ಪರ ಆಡಿದ ಅವರು, ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿದರು. ಈಗ ಮತ್ತೊಮ್ಮೆ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯೂಸುಫ್ ಸಹೋದರ ಇರ್ಫಾನ್ ಪಠಾಣ್ ಈ ಲೀಗ್‌ನಲ್ಲಿ ಕ್ಯಾಂಡಿ ಟಸ್ಕರ್ಸ್ ಪರ ಆಡುತ್ತಾರೆ. ಲಂಕಾ ಪ್ರೀಮಿಯರ್ ಲೀಗ್‌ನ ಈ ಆವೃತ್ತಿಯೂ ಜುಲೈ ಕೊನೆಯಲ್ಲಿ ಪ್ರಾರಂಭವಾಗಲಿದೆ.

ಈ ದೇಶಗಳ ಈ ಆಟಗಾರರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಲಿಟಾನ್ ದಾಸ್, ಸೌಮ್ಯಾ ಸರ್ಕಾರ್, ಮಹಮದುಲ್ಲಾ.

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಬೆನ್ ಡಂಕ್, ಕ್ಯಾಲಮ್ ಫರ್ಗುಸನ್, ಜೇಮ್ಸ್ ಫಾಕ್ನರ್ ಮತ್ತು ಬೆನ್ ಕಟಿಂಗ್.

ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್, ಶೆಲ್ಡನ್ ಕಾಟ್ರೆಲ್, ರಾಯಡ್ ಎಮ್ರಿಟ್, ರವಿ ರಾಂಪಾಲ್, ಡ್ವೇನ್ ಸ್ಮಿತ್, ಡೆನೇಶ್ ರಾಮ್ಡಿನ್, ಜಾನ್ಸನ್ ಚಾರ್ಲ್ಸ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್.

ಪಾಕಿಸ್ತಾನ: ಹರಿಸ್ ಸೊಹೈಲ್, ವಕಾಸ್ ಮಕ್ಸೂದ್, ಮುಹಮ್ಮದ್ ಹಸ್ನೈನ್, ಮೊಹಮ್ಮದ್ ಇರ್ಫಾನ್, ಶೋಯೆಬ್ ಮಕ್ಸೂದ್, ಶಾನ್ ಮಸೂದ್, ಅನ್ವರ್ ಅಲಿ ಮತ್ತು ಅಮ್ಮದ್ ಬಟ್.

ದಕ್ಷಿಣ ಆಫ್ರಿಕಾ: ರಿಲೆ ರೊಸ್ಸೌ, ಡೇವಿಡ್ ವೈಜ್, ಜಾನ್ ಟ್ರೆವರ್ ಸ್ಮಟ್ಸ್, ಮೊರ್ನೆ ಮೊರ್ಕೆಲ್, ರಾಸಿ ವ್ಯಾನ್ ಡೆರ್ ಡುಸೆನ್, ಕೇಶವ್ ಮಹಾರಾಜ್, ತಬ್ರೆಜ್ ಶಮ್ಸಿ, ಹಾರ್ಡಸ್ ವಿಲ್ಜೋಯೆನ್.

ಅಫ್ಘಾನಿಸ್ತಾನ: ಅಸ್ಗರ್ ಅಫಘಾನ್, ಮೊಹಮ್ಮದ್ ಶಹಜಾದ್, ನಜೀಬುಲ್ಲಾ ಖಾದ್ರಾನ್, ನವೀನ್ ಉಲ್ ಹಕ್, ಉಸ್ಮಾನ್ ಶಿನ್ವಾರಿ, ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ, ಖೈಸ್ ಅಹ್ಮದ್.

ಇದನ್ನೂ ಓದಿ:ಶ್ರೀಲಂಕಾ ಪ್ರವಾಸದಲ್ಲಿ ಮಿಂಚಿ ಟೀಂ ಇಂಡಿಯಾ ಕದ ತಟ್ಟಲು ಸಿದ್ಧರಾಗಿರುವ 5 ಯುವ ಕ್ರಿಕೆಟಿಗರು ಇವರೇ!