ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 17ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಎರಡನೇ ಅಭ್ಯಾಸ ಪಂದ್ಯದ ವೇಳೆ ನಡೆದ ಘಟನೆಯೊಂದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮ್ಯಾಚ್ನಲ್ಲಿ ಅಂಪೈರ್ ಮಾಡಿದ ತಪ್ಪಿನಿಂದ ಭಾರತ ವಿಕೆಟ್ ಕಳೆದುಕೊಳ್ಳುವಂತಾಯಿತು ಎಂದು ಎಲ್ಲರೂ ಆಕ್ರೋಶ ಹೊರ ಹಾಕಿದ್ದಾರೆ.
ಎರಡನೇ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 108 ರನ್ಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ಶುಭ್ ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಅದ್ಭುತವಾಗಿ ಆಟವಾಡುತ್ತಿದ್ದರು. ಅರ್ಧ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಗಿಲ್ 65 ರನ್ ಸಿಡಿಸಿದ್ದರು. ಈ ವೇಳೆ ಅಂಪೈರ್ ಮಾಡಿದ ಎಡವಟ್ಟಿನಿಂದ ಶುಭ್ ಮನ್ ಗಿಲ್ ಔಟ್ ಆದರು.
ಸ್ವೆಪ್ಸನ್ ಎಸೆದ ಬಾಲ್ ನೇರವಾಗಿ ಪ್ಯಾಡ್ಗೆ ತಾಗಿ ಸ್ಲಿಪ್ನಲ್ಲಿದ್ದ ಸಿಯಾನ್ ಅಬಾಟ್ ಕೈ ಸೇರಿತ್ತು. ಮೊದಲು ಸ್ವೆಪ್ಸನ್ ಲೆಗ್ ಬಿಪೋರ್ ವಿಕೆಟ್ಗೆ (LBW) ಅಪೀಲ್ ಮಾಡಿದ್ದರು. ಆದರೆ, ಅಂಪೈರ್ ಔಟ್ ನೀಡಲಿಲ್ಲ. ನಂತರ ಇದು ಕ್ಯಾಚ್ ಎಂದು ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದರು. ಈ ವೇಳೆ ಅಂಪೈರ್ ಕೂಡ ಔಟ್ ಕೊಟ್ಟರು.
ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಲೆಗ್ ಬಿಪೋರ್ ವಿಕೆಟ್ ಇರಲಿಲ್ಲ. ಬಾಲ್ ಪ್ಯಾಡ್ಗೆ ತಾಗಿದ್ದರಿಂದ ಕ್ಯಾಚ್ ಎನ್ನುವ ಮಾತೇ ಇಲ್ಲ. ಹೀಗಿರುವಾಗ ಅಂಪೈರ್ ಔಟ್ ಕೊಟ್ಟಿದ್ದೇಕೆ? ಇವರೆಲ್ಲ ಎಲ್ಲಿಂದ ಬರುತ್ತಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
Gill given out caught, and what a catch it was too!
What’s your call? #AUSAvIND pic.twitter.com/fDFwB7IUBU
— cricket.com.au (@cricketcomau) December 12, 2020
ಇನ್ನು, ಭಾರತದ ಮಾಜಿ ಓಪನರ್ ಆಕಾಶ್ ಚೋಪ್ರಾ ಕೂಡ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಶುಭ್ ಮನ್ ಗಿಲ್ ಔಟ್ ಆಗಿದ್ದು ಹೇಗೆ? ಇದು ಎಲ್ಬಿಡಬ್ಲ್ಯು ಆಗಿರಲಿಲ್ಲ. ಕ್ಯಾಚ್ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.
How was Shubman out? Definitely not LBW….and there was zero evidence to suggest he was caught at slips. #AUSAvIND
— Aakash Chopra (@cricketaakash) December 12, 2020
LBW: ❌ bcoz of hght
Caught : ❌ seems to me clearly pad.
Where are ths umpires coming from? What cheap thrill are they doing now days?
?
Anyways
Umpire called it out, so its out.
—no way u can counter—Also
Nice take by Abbott ??— Shuvajit Acharya (@shuvajit1411) December 12, 2020