Happy Birthday Smriti Mandhana: ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಸ್ಮೃತಿ ಮಂಧಾನಾಗೆ ಹುಟ್ಟುಹಬ್ಬದ ಸಂಭ್ರಮ

| Updated By: Vinay Bhat

Updated on: Jul 18, 2021 | 7:59 AM

Smriti Mandhana Birthday: ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್​ವುಮೆನ್ ಎನಿಸಿಕೊಂಡಿರುವ ಮಂಧಾನ, 2018ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 178 ರನ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

Happy Birthday Smriti Mandhana: ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಸ್ಮೃತಿ ಮಂಧಾನಾಗೆ ಹುಟ್ಟುಹಬ್ಬದ ಸಂಭ್ರಮ
Smriti Mandhana
Follow us on

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಬಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಇಂದು (ಜುಲೈ 18) 25ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1996ನೇ ಇಸವಿಯಲ್ಲಿ ಮುಂಬಯಿಯಲ್ಲಿ ಜನಿಸಿರುವ ಮಂಧಾನಾ 2013ರಲ್ಲಿ ಏಕದಿನ ಹಾಗೂ ಟ್ವೆಂಟಿ-20 ಮತ್ತು 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ್ದರು. ಅಲ್ಲದೆ ಕೆಲವೇ ವರ್ಷಗಳಲ್ಲಿ ಮೈದಾನದ ಒಳಗೂ ಹೊರಗೂ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.

ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್​ವುಮೆನ್ ಎನಿಸಿಕೊಂಡಿರುವ ಮಂಧಾನ, 2018ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 178 ರನ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

59 ಏಕದಿನ ಪಂದ್ಯಗಳನ್ನಾಡಿರುವ ಮಂಧಾನಾ 41.72ರ ಸರಾಸರಿಯಲ್ಲಿ 2253 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಹಾಗೆಯೇ 81 ಟ್ವೆಂಟಿ-20 ಪಂದ್ಯಗಳಲ್ಲಿ 13 ಅರ್ಧಶತಕಗಳು ಸೇರಿದಂತೆ 1901 ರನ್ ಗಳಿಸಿದ್ದಾರೆ. 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು 2 ಅರ್ಧಶತಕ ಸಹಿತ 167 ರನ್ ಬಾರಿಸಿದ್ದಾರೆ.

ಸ್ಮೃತಿ ತಂದೆ ಹಾಗೂ ಅಣ್ಣ ಜಿಲ್ಲಾ ವಲಯದ ಕ್ರಿಕೆಟ್ ಆಟಗಾರರಾಗಿದ್ದರು. ತನ್ನ ಅಣ್ಣ ಅಂಡರ್-16 ರಲ್ಲಿ ಬ್ಯಾಟ್ ಬೀಸುವುದನ್ನು ನೋಡಿದ ಮಂದಾನ ತಾನೂ ಕ್ರಿಕೆಟ್ ಆಟಗಾರ್ತಿ ಆಗಬೇಕೆಂಬ ಕನಸು ಕಟ್ಟಿಕೊಂಡವರಂತೆ. ಸ್ಮೃತಿ ಅವರಿಗೆ ಸ್ಪೂರ್ತಿ ಶ್ರೀಲಂಕಾ ಕ್ರಿಕೆಟಿಗ ಕುಮಾರ್ ಸಂಗಕ್ಕಾರ. ಸಂಗಕ್ಕಾರ ಬ್ಯಾಟಿಂಗ್ ಮಾಡುವುದನ್ನು ನೋಡಿ ಅವರ ಸ್ಟೈಲ್​ನಲ್ಲೆ ಬ್ಯಾಟಿಂಗ್ ಮಾಡಲು ಕಲಿತೆ ಎಂದು ಈ ಹಿಂದೆ ಹೇಳಿದ್ದರು.

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಪ್ರಥಮ ಆಟಗಾರ್ತಿ ಸ್ಮೃತಿ ಮಂಧಾನ. ಗುಜಾರಾತ್ ವಿರುದ್ಧ ಮಹರಾಷ್ಟ್ರ ತಂಡದ ಸ್ಮೃತಿ 150 ಎಸೆತಗಳಲ್ಲಿ 224 ರನ್ ಚಚ್ಚಿದ್ದರು. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಂದಾನ ಅವರ ಆಟ ನೋಡಿ ತಮ್ಮ ವಿಶೇಷ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿರುವುದು ವಿಶೇಷ.

ಫೆಬ್ರವರಿ 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಮಂಧಾನ ನಾಯಕಿಯಾಗಿ ಆಯ್ಕೆಯಾದರು. ಈ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಎಂದೇ ಫೇಮಸ್ ಆಗಿರುವ ಸ್ಮೃತಿ ಮಂಧಾನಾಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

India vs Sri lanka: ಇಂದು ಲಂಕಾ ವಿರುದ್ಧ ಮೊದಲ ಏಕದಿನ: ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಈ ಆಟಗಾರ?

ಟೀಮ್ ಇಂಡಿಯಾದಲ್ಲಿ ಸೋಲರಿಯದ ದಿಟ್ಟತನವನ್ನು ಹುಟ್ಟಿಸಿದ್ದು ಸೌರವ್ ಗಂಗೂಲಿ: ಬ್ರಾಡ್ ಹಾಗ್

(Happy Birthday Smriti Mandhana Here is the greatest records held by the Indian opener)