ಭಜ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ; ಹರ್ಭಜನ್ ಸಿಂಗ್-ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ

| Updated By: ಪೃಥ್ವಿಶಂಕರ

Updated on: Jul 10, 2021 | 3:33 PM

ಹರ್ಭಜನ್ ಅವರ ಪತ್ನಿ ಗೀತಾ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರಿಗೂ ಈಗಾಗಲೇ ಮಗಳು ಇದ್ದಾಳೆ.

ಭಜ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ; ಹರ್ಭಜನ್ ಸಿಂಗ್-ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ
ಹರ್ಭಜನ್ ಸಿಂಗ್ ಕುಟುಂಬ
Follow us on

ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಅವರ ಪತ್ನಿ ಗೀತಾ ಬಸ್ರಾ ಅವರ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಹರ್ಭಜನ್ ಅವರ ಪತ್ನಿ ಗೀತಾ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರಿಗೂ ಈಗಾಗಲೇ ಮಗಳು ಇದ್ದಾಳೆ. ಹರ್ಭಜನ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪತ್ನಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹರ್ಭಜನ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

ಆರೋಗ್ಯವಂತ ಮಗನಾಗಿ ನಮ್ಮನ್ನು ಆಶೀರ್ವದಿಸಿದ ದೇವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಗೀತಾ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ ಮತ್ತು ನಮ್ಮ ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಹರ್ಭಜನ್ ಬರೆದಿದ್ದಾರೆ. ಗೀತಾ ಮತ್ತು ಹರ್ಭಜನ್ ಅವರು 29 ಅಕ್ಟೋಬರ್ 2015 ರಂದು ವಿವಾಹವಾದರು. 2016 ರಲ್ಲಿ ಗೀತಾ ಮಗಳಿಗೆ ಜನ್ಮ ನೀಡಿದರು. ದಂಪತಿಗಳು ತಮ್ಮ ಮಗಳಿಗೆ ಹಿನಯಾ ಎಂದು ಹೆಸರಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರ
ಹರ್ಭಜನ್ ಸಿಂಗ್ ಅವರ ಕುಟುಂಬದಿಂದ ಸಿಹಿಸುದ್ದಿ ಹೊರಬಂದಾಗಿನಿಂದಲೂ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಅಭಿನಂದನೆಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ. ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸುತ್ತಿರುವ ಶಿಖರ್ ಧವನ್ ಹರ್ಭಜನ್ ಅವರನ್ನು ಅಭಿನಂದಿಸಿದ್ದಾರೆ. ಪಾಜಿ ಬಹಳ ಮುಬಾರಕನ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ವಿಶ್ ಮಾಡಿದ್ದಾರೆ. ಇದಲ್ಲದೆ ಅವರ ಅನೇಕ ಅಭಿಮಾನಿಗಳು ಸಹ ಅವರನ್ನು ಅಭಿನಂದಿಸುತ್ತಿದ್ದಾರೆ.

ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಭಜ್ಜಿ
ಭಾರತೀಯ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್ ಅವರ ಸಾಧನೆ ತುಂಬಾ ದೊಡ್ಡದಾಗಿದೆ. ದೇಶಕ್ಕಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಕ್ರಿಕೆಟಿಗ ಇವರು. ಅವರು ಇನ್ನೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನ 14 ನೇ ಋತುವಿನ ಎರಡನೇ ಹಂತದಲ್ಲಿ, ಅವರು ಎರಡು ಬಾರಿ ಐಪಿಎಲ್ ವಿಜೇತ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಲಿದ್ದಾರೆ.

ಗೀತಾ ಅವರ ಚಲನಚಿತ್ರ ವೃತ್ತಿಜೀವನ
ಗೀತಾ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೊದಲು 2006 ರಲ್ಲಿ ಇಮ್ರಾನ್ ಹಶ್ಮಿ ಜೊತೆಗೆ ದಿಲ್ ಡಿ ದಿಯಾದಲ್ಲಿ ಕಾಣಿಸಿಕೊಂಡರು. ಇಮ್ರಾನ್ ಜೊತೆಗೆ, ಅವರು 2007 ರಲ್ಲಿ ದಿ ಟ್ರೈನ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಅವರು ಅನೇಕ ಮ್ಯೂಸಿಕ್ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.