IND vs SL: ಭಾರತ-ಶ್ರೀಲಂಕಾ ನಡುವಣ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ! ಜುಲೈ 18 ರಿಂದ ಸರಣಿ ಆರಂಭ.. ಹೊಸ ವೇಳಾಪಟ್ಟಿ ಹೀಗಿದೆ

IND vs SL: ಈ ಮೊದಲು ಜುಲೈ 13 ರಿಂದ ಪ್ರಾರಂಭವಾಗಿದ್ದ ಏಕದಿನ ಸರಣಿ ಈಗ ಜುಲೈ 18 ರಿಂದ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ ಟಿ 20 ಸರಣಿಯನ್ನು ಜುಲೈ 25 ರಿಂದ ಆಡಲಾಗುವುದು.

IND vs SL: ಭಾರತ-ಶ್ರೀಲಂಕಾ ನಡುವಣ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ! ಜುಲೈ 18 ರಿಂದ ಸರಣಿ ಆರಂಭ.. ಹೊಸ ವೇಳಾಪಟ್ಟಿ ಹೀಗಿದೆ
ಭಾರತ-ಶ್ರೀಲಂಕಾ
Follow us
TV9 Web
| Updated By: ಪೃಥ್ವಿಶಂಕರ

Updated on:Jul 10, 2021 | 2:38 PM

ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸದ ಮೇಲೆ ಕೊರೊನಾ ತನ್ನ ಪರಿಣಾಮ ಬೀರಿದೆ. ಇಂಗ್ಲೆಂಡ್‌ನಿಂದ ಹಿಂದಿರುಗಿದ ಶ್ರೀಲಂಕಾ ತಂಡದ ಶಿಬಿರದಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದ ನಂತರ ಪ್ರವಾಸದ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭಾರತ-ಶ್ರೀಲಂಕಾ ಸರಣಿಯ ಪ್ರಾರಂಭವನ್ನು ಈಗ 5 ದಿನಗಳು ಮುಂದಕ್ಕೆ ತಳ್ಳಲಾಗಿದೆ. ಈ ಮಾಹಿತಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೇ ಶಾ ಇಬ್ಬರೂ ನೀಡಿದ್ದಾರೆ. ಈ ಮೊದಲು ಜುಲೈ 13 ರಿಂದ ಪ್ರಾರಂಭವಾಗಿದ್ದ ಏಕದಿನ ಸರಣಿ ಈಗ ಜುಲೈ 18 ರಿಂದ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ ಟಿ 20 ಸರಣಿಯನ್ನು ಜುಲೈ 25 ರಿಂದ ಆಡಲಾಗುವುದು. ಹಳೆಯ ವೇಳಾಪಟ್ಟಿಯ ಪ್ರಕಾರ ಈ ಸರಣಿಯನ್ನು ಜುಲೈ 21 ರಿಂದ ಪ್ರಾರಂಭಿಸಬೇಕಿತ್ತು.

ಶ್ರೀಲಂಕಾ ತಂಡದ ಸಹಾಯಕ ಸಿಬ್ಬಂದಿ ಕೊರೊನಾ ಪಾಸಿಟಿವ್ ಎಂದು ಕಂಡುಬಂದ ನಂತರ ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊದಲ ಬ್ಯಾಟಿಂಗ್ ತರಬೇತುದಾರ ಗ್ರಾಂಟ್ ಫ್ಲವರ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಅವರ ನಂತರ ಅವರ ವೀಡಿಯೊ ಡೇಟಾ ವಿಶ್ಲೇಷಕರಿಗೆ ಕೊರೊನಾ ತಗುಲಿತ್ತು. ಈ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಸರಣಿಯನ್ನು ಮುಂದೂಡಲು ನಿರ್ಧರಿಸಲಾಯಿತು. ಶ್ರೀಲಂಕಾ ತಂಡದ ಶಿಬಿರದಲ್ಲಿ ಕೊರೊನಾ ವೈರಸ್ ಕಂಡು ಬಂದಿರುವುದರಿಂದ ಸರಣಿಯನ್ನು 5 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಶನಿವಾರ ಹೇಳಿದ್ದಾರೆ. ಏಕದಿನ ಸರಣಿ ಈಗ ಜುಲೈ 18 ರಿಂದ ಪ್ರಾರಂಭವಾಗಲಿದೆ.

ಶ್ರೀಲಂಕಾ ಪ್ರವಾಸದ ಹೊಸ ವೇಳಾಪಟ್ಟಿ ಹೊಸ ವೇಳಾಪಟ್ಟಿಯ ಪ್ರಕಾರ, ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಈ ಮೊದಲು ಜುಲೈ 13, ಜುಲೈ 16 ಮತ್ತು ಜುಲೈ 18 ರಂದು ಆಡಲು ನಿರ್ಧರಿಸಲಾಗಿತ್ತು. ಆದರೆ ಇವುಗಳನ್ನು ಈಗ 18, 20 ಮತ್ತು 23 ರಂದು ಆಡಲಾಗುವುದು. ಅದೇ ಸಮಯದಲ್ಲಿ, ಜುಲೈ 21 ರಿಂದ ಜುಲೈ 25 ರವರೆಗೆ ನಡೆಯಬೇಕಿದ್ದ ಟಿ 20 ಸರಣಿ ಈಗ ಜುಲೈ 25 ಮತ್ತು 29 ರ ನಡುವೆ ನಡೆಯಲಿದೆ. ಆದಾಗ್ಯೂ, ಈ ಎಲ್ಲಾ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

Published On - 2:32 pm, Sat, 10 July 21

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ