ಭಾರತದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ (Hockey World Cup) ಶುಕ್ರವಾರದಿಂದ ಆರಂಭವಾಗಲಿದೆ. 15ನೇ ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ ವಿಶ್ವದ 16 ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದು ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿ. ಕಳೆದ ಬಾರಿ 2018ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಿದ್ದವು. ಈ ಬಾರಿ ಟೂರ್ನಿಯಲ್ಲಿ 44 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಜನವರಿ 29 ರಂದು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ. 16 ತಂಡಗಳನ್ನು ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ ತಂಡಗಳು ಪೂಲ್ ಎ. ಪೂಲ್ ಬಿಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ. ಪೂಲ್ ಸಿಯಲ್ಲಿ ನೆದರ್ಲೆಂಡ್ಸ್, ಚಿಲಿ, ಮಲೇಷ್ಯಾ, ನ್ಯೂಜಿಲೆಂಡ್ ತಂಡಗಳಿವೆ. ಭಾರತ ತಂಡ ಡಿ ಗುಂಪಿನಲ್ಲಿದ್ದು, ಇದರೊಂದಿಗೆ ವೇಲ್ಸ್, ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಜನವರಿ 13 ರಂದು ನಡೆಯುವ ಪಂದ್ಯಗಳು
ಅರ್ಜೆಂಟೀನಾ vs ದಕ್ಷಿಣ ಆಫ್ರಿಕಾ, ಭುವನೇಶ್ವರ, ಮಧ್ಯಾಹ್ನ 1 ಗಂಟೆ
ಆಸ್ಟ್ರೇಲಿಯಾ vs ಫ್ರಾನ್ಸ್, ಭುವನೇಶ್ವರ, ಮಧ್ಯಾಹ್ನ 3 ಗಂಟೆ
ಇಂಗ್ಲೆಂಡ್ vs ವೇಲ್ಸ್, ರೂರ್ಕೆಲಾ, ಸಂಜೆ 5 ಗಂಟೆ
ಭಾರತ vs ಸ್ಪೇನ್, ರೂರ್ಕೆಲಾ, ಸಂಜೆ 7 ಗಂಟೆ
Hockey World Cup: ಅದ್ಧೂರಿಯಾಗಿ ಉದ್ಘಾಟನೆಗೊಂಡ ಹಾಕಿ ವಿಶ್ವಕಪ್! ರಂಜಿಸಿದ ರಣವೀರ್, ದಿಶಾ ಪಟಾನಿ; ಫೋಟೋ ನೋಡಿ
ಜನವರಿ 14 ರಂದು ನಡೆಯುವ ಪಂದ್ಯಗಳು
ನ್ಯೂಜಿಲೆಂಡ್ vs ಚಿಲಿ, ರೂರ್ಕೆಲಾ, ಮಧ್ಯಾಹ್ನ 1 ಗಂಟೆಗೆ
ನೆದರ್ಲ್ಯಾಂಡ್ಸ್ vs ಮಲೇಷ್ಯಾ, ರೂರ್ಕೆಲಾ, ಮಧ್ಯಾಹ್ನ 3 ಗಂಟೆಗೆ
ಬೆಲ್ಜಿಯಂ vs ಕೊರಿಯಾ, ಭುವನೇಶ್ವರ, ಮಧ್ಯಾಹ್ನ 5 ಗಂಟೆಗೆ
ಜರ್ಮನಿ vs ಜಪಾನ್, ಭುವನೇಶ್ವರ, ಸಂಜೆ 7 ಗಂಟೆಗೆ
ಜನವರಿ 15 ರಂದು ನಡೆಯುವ ಪಂದ್ಯಗಳು
ಸ್ಪೇನ್ vs ವೇಲ್ಸ್, ರೂರ್ಕೆಲಾ, ಸಂಜೆ 5:00 ಗಂಟೆಗೆ
ಇಂಗ್ಲೆಂಡ್ vs ಭಾರತ, ರೂರ್ಕೆಲಾ ಸಂಜೆ 7:00 ಗಂಟೆಗೆ
ಜನವರಿ 16 ರಂದು ನಡೆಯುವ ಪಂದ್ಯಗಳು
ಮಲೇಷ್ಯಾ vs ಚಿಲಿ, ರೂರ್ಕೆಲಾ, ಮಧ್ಯಾಹ್ನ 1:00 ಗಂಟೆಗೆ
ನ್ಯೂಜಿಲೆಂಡ್ vs ನೆದರ್ಲ್ಯಾಂಡ್ಸ್, ರೂರ್ಕೆಲಾ, ಮಧ್ಯಾಹ್ನ 3:00 ಗಂಟೆಗೆ
ಫ್ರಾನ್ಸ್ vs ದಕ್ಷಿಣ ಆಫ್ರಿಕಾ, ಭುವನೇಶ್ವರ, ಸಂಜೆ 5:00 ಗಂಟೆಗೆ
ಅರ್ಜೆಂಟೀನಾ vs ಆಸ್ಟ್ರೇಲಿಯಾ, ಭುವನೇಶ್ವರ, ರಾತ್ರಿ 7:00 ಗಂಟೆಗೆ
ಜನವರಿ 17 ರಂದು ನಡೆಯುವ ಪಂದ್ಯಗಳು
ಕೊರಿಯಾ vs ಜಪಾನ್, ಭುವನೇಶ್ವರ, ಸಂಜೆ 5:00 ಗಂಟೆಗೆ
ಜರ್ಮನಿ vs ಬೆಲ್ಜಿಯಂ, ಭುವನೇಶ್ವರ, ಸಂಜೆ 7:00 ಗಂಟೆಗೆ
ಜನವರಿ 19 ರಂದು ನಡೆಯುವ ಪಂದ್ಯಗಳು
ಮಲೇಷ್ಯಾ vs ನ್ಯೂಜಿಲೆಂಡ್, ಭುವನೇಶ್ವರ, ಮಧ್ಯಾಹ್ನ 1:00 ಗಂಟೆಗೆ
ನೆದರ್ಲ್ಯಾಂಡ್ಸ್ vs ಚಿಲಿ, ಭುವನೇಶ್ವರ, ಮಧ್ಯಾಹ್ನ 3:00 ಗಂಟೆಗೆ
ಸ್ಪೇನ್ vs ಇಂಗ್ಲೆಂಡ್, ಭುವನೇಶ್ವರ, ಸಂಜೆ 5:00 ಗಂಟೆಗೆ
ಭಾರತ vs ವೇಲ್ಸ್, ಭುವನೇಶ್ವರ, ಸಂಜೆ 7:00 ಗಂಟೆಗೆ
ಜನವರಿ 20 ರಂದು ನಡೆಯುವ ಪಂದ್ಯಗಳು
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರೂರ್ಕೆಲಾ, ಮಧ್ಯಾಹ್ನ 1:00 ಗಂಟೆಗೆ
ಫ್ರಾನ್ಸ್ vs ಅರ್ಜೆಂಟೀನಾ, ರೂರ್ಕೆಲಾ, ಮಧ್ಯಾಹ್ನ 3:00 ಗಂಟೆಗೆ
ಬೆಲ್ಜಿಯಂ vs ಜಪಾನ್, ರೂರ್ಕೆಲಾ, ಸಂಜೆ 5:00 ಗಂಟೆಗೆ
ಕೊರಿಯಾ vs ಜರ್ಮನಿ, ರೂರ್ಕೆಲಾ, – ಸಂಜೆ 7:00 ಗಂಟೆಗೆ
ಜನವರಿ 24 ರಂದು ನಡೆಯುವ ಪಂದ್ಯಗಳು
ಭುವನೇಶ್ವರದಲ್ಲಿ ಮೊದಲ ಕ್ವಾರ್ಟರ್ ಫೈನಲ್, ಮಧ್ಯಾಹ್ನ 4:30 ಗಂಟೆಗೆ
ಭುವನೇಶ್ವರದಲ್ಲಿ ಎರಡನೇ ಕ್ವಾರ್ಟರ್ ಫೈನಲ್, ಸಂಜೆ 7 ಗಂಟೆಗೆ
ಜನವರಿ 25 ರಂದು ನಡೆಯುವ ಪಂದ್ಯಗಳು
3 ನೇ ಕ್ವಾರ್ಟರ್ ಫೈನಲ್ ಭುವನೇಶ್ವರದಲ್ಲಿ, ಮಧ್ಯಾಹ್ನ 4:30 ಗಂಟೆಗೆ
4 ನೇ ಕ್ವಾರ್ಟರ್ ಫೈನಲ್ ಭುವನೇಶ್ವರದಲ್ಲಿ, ಸಂಜೆ 7 ಗಂಟೆಗೆ
ಜನವರಿ 26 ರಂದು ನಡೆಯುವ ಪಂದ್ಯಗಳು
ಪ್ಲೇಸ್‌ಮೆಂಟ್ ಪಂದ್ಯಗಳು (9ನೇ-16ನೇ)
ಜನವರಿ 27 ರಂದು ನಡೆಯುವ ಪಂದ್ಯಗಳು
ಮೊದಲ ಸೆಮಿಫೈನಲ್, ಭುವನೇಶ್ವರ, ಸಂಜೆ 4:30 ಕ್ಕೆ
ಎರಡನೇ ಸೆಮಿಫೈನಲ್, ಭುವನೇಶ್ವರ, ರಾತ್ರಿ 7 ಗಂಟೆಗೆ
ಜನವರಿ 29 ರಂದು ನಡೆಯುವ ಪಂದ್ಯ
ಕಂಚಿನ ಪದಕದ ಪಂದ್ಯ – ಮಧ್ಯಾಹ್ನ 4:30 ಗಂಟೆಗೆ
ಚಿನ್ನದ ಪದಕದ ಪಂದ್ಯ- ಸಂಜೆ 7 ಗಂಟೆಗೆ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ