AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey World Cup: ಅದ್ಧೂರಿಯಾಗಿ ಉದ್ಘಾಟನೆಗೊಂಡ ಹಾಕಿ ವಿಶ್ವಕಪ್! ರಂಜಿಸಿದ ರಣವೀರ್, ದಿಶಾ ಪಟಾನಿ; ಫೋಟೋ ನೋಡಿ

Hockey World Cup 2023: ಹಲವು ತಿಂಗಳುಗಳ ಕಾಯುವಿಕೆಯ ನಂತರ, ಪುರುಷರ ಹಾಕಿ ವಿಶ್ವಕಪ್‌ನ ಆಕ್ಷನ್ ಪ್ರಾರಂಭವಾಗಲಿದೆ. ಜನವರಿ 13 ರಿಂದ ವಿಶ್ವದ 16 ಅತ್ಯುತ್ತಮ ತಂಡಗಳು ಒಡಿಶಾದಲ್ಲಿ ಸೆಣಸಲಿವೆ.

TV9 Web
| Edited By: |

Updated on: Jan 12, 2023 | 10:38 AM

Share
ಹಲವು ತಿಂಗಳುಗಳ ಕಾಯುವಿಕೆಯ ನಂತರ, ಪುರುಷರ ಹಾಕಿ ವಿಶ್ವಕಪ್‌ನ ಆಕ್ಷನ್ ಪ್ರಾರಂಭವಾಗಲಿದೆ. ಜನವರಿ 13 ರಿಂದ ವಿಶ್ವದ 16 ಅತ್ಯುತ್ತಮ ತಂಡಗಳು ಒಡಿಶಾದಲ್ಲಿ ಸೆಣಸಲಿವೆ. ಈ ಸ್ಪರ್ಧೆ ಪ್ರಾರಂಭವಾಗುವ ಎರಡು ದಿನಗಳ ಮೊದಲು, ಎಫ್‌ಐಹೆಚ್ ವಿಶ್ವಕಪ್‌ನ ಅದ್ಧೂರಿ ಉದ್ಘಾಟನೆ ನಡೆಯಿತು.

1 / 11
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಎಫ್‌ಐಎಚ್ ಅಧ್ಯಕ್ಷ ಟೈಬ್ ಇಕ್ರಮ್ ಮತ್ತು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಜನವರಿ 11 ರಂದು ಬುಧವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳ ಸದಸ್ಯರನ್ನು ಸ್ವಾಗತಿಸಲು ಸಮಾರಂಭದಲ್ಲಿ ಉಪಸ್ಥಿತರಿದ್ದರು.

2 / 11
ಹಾಕಿ ವಿಶ್ವಕಪ್ ಪಂದ್ಯಗಳು ಜನವರಿ 13 ರಿಂದ ಜನವರಿ 29 ರವರೆಗೆ ಎರಡು ಸ್ಥಳಗಳಲ್ಲಿ ನಡೆಯಲಿವೆ. ರೂರ್ಕೆಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಮತ್ತು ಭುವನೇಶ್ವರದ ಕಳಿಂಗ ಕ್ರೀಡಾಂಗಣ ಈ ವಿಶ್ವಕಪ್​ಗೆ ಆತಿಥ್ಯವಹಿಸಲಿವೆ. ರೂರ್ಕೆಲಾದಲ್ಲಿ 20 ಪಂದ್ಯಗಳು ನಡೆದರೆ, ಫೈನಲ್ ಸೇರಿದಂತೆ 24 ಪಂದ್ಯಗಳು ಭುವನೇಶ್ವರದಲ್ಲಿ ನಡೆಯಲಿವೆ.

3 / 11
ಈ ಈವೆಂಟ್‌ನಲ್ಲಿ ಹತ್ತಾರು ಬಾಲಿವುಡ್ ಗಾಯಕರು ಮತ್ತು ಸ್ಥಳೀಯ ಕಲಾವಿದರು ಸಂಗೀತ ನಿರ್ದೇಶಕ ಪ್ರೀತಮ್ ಸಂಯೋಜಿಸಿದ ಹಾಕಿ ವಿಶ್ವಕಪ್ ಥೀಮ್ ಹಾಡನ್ನು ಹಾಡಿದರು. ಮತ್ತೊಂದೆಡೆ, ಬಾಲಿವುಡ್ ಸೂಪರ್‌ಸ್ಟಾರ್ ರಣವೀರ್ ಸಿಂಗ್ ಕೂಡ ತಮ್ಮ ಎನರ್ಜಿಟಿಕ್ ಅಭಿನಯದಿಂದ ಗಮನ ಸೆಳೆದರು.

4 / 11
ರಣಬೀರ್ ಸಿಂಗ್ ಜೊತೆಗೆ ಬಾಲಿವುಡ್ ತಾರೆ ದಿಶಾ ಪಟಾನಿ ಹಾಕಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯನ್ನು ಅಲಂಕರಿಸಿದರು.

5 / 11
ಒಂದು ಗಂಟೆ ಕಾಲ ನಡೆದ ಉದ್ಘಾಟನಾ ಸಮಾರಂಭದ ಮೊದಲು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲಿ ಒಡಿಶಾ ರಾಜ್ಯದ ಶ್ರೇಷ್ಠ ಬುಡಕಟ್ಟು ನೃತ್ಯವನ್ನು ಪ್ರಸ್ತುತಪಡಿಸಲಾಯಿತು. ಒಡಿಶಾದ ಸೆಲೆಬ್ರಿಟಿ ಜೋಡಿಯಾದ ಸಬ್ಯಸಾಚಿ ಮಿಶ್ರಾ ಮತ್ತು ಅರ್ಚಿತಾ ಸಾಹು ಉದ್ಘಾಟನಾ ವೇದಿಕೆಯನ್ನು ಅಲಂಕರಿಸಿದರು.

6 / 11
ಉದ್ಘಾಟನಾ ಸಮಾರಂಭದಲ್ಲಿ, ಬಾಲಿವುಡ್‌ನ ಹಲವಾರು ಗಾಯಕರು ಮತ್ತು ಒಡಿಶಾದ ಹಲವಾರು ಗಾಯಕರು ಒಟ್ಟಾಗಿ ಹಾಕಿ ವಿಶ್ವಕಪ್ ಥೀಮ್ ಹಾಡನ್ನು ಹಾಡಿದರು. ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಪ್ರೀತಮ್ ಕೂಡ ಉಪಸ್ಥಿತರಿದ್ದರು.

7 / 11
ಹಾಕಿ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲೂ ಜನಪ್ರಿಯ ಗಾಯಕಿ ನೀತಿ ಮೋಹನ್ ಅವರ ಸುಮಧುರ ಕಂಠ ಕೇಳಿಬಂದಿತ್ತು.

8 / 11
ನೀತಿ-ಪ್ರೀತಮ್ ಜೊತೆಗೆ ಜನಪ್ರಿಯ ಗಾಯಕ ಬೆನ್ನಿ ದಯಾಳ್ ಕೂಡ ಹಾಕಿ ವಿಶ್ವಕಪ್ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ತಮ್ಮ ಮಧುರ ಕಂಠದ ಮಾಂತ್ರಿಕತೆಯನ್ನು ಪಸರಿಸಿದರು. ಬೆನ್ನಿ ಅವರ ಜನಪ್ರಿಯ ಗೀತೆ ‘ಬಡ್ತಮೀಜ್ ದಿಲ್’ ಕೂಡ ಹಾಡಿದ್ದಾರೆ.

9 / 11
ಜನಪ್ರಿಯ ಕೊರಿಯನ್ ಪಾಪ್ ಬ್ಯಾಂಡ್ 'ಬ್ಲ್ಯಾಕ್ ಸ್ವಾನ್' ಸಹ ಬಾರಾಬತಿ ಸ್ಟೇಡಿಯಂನಲ್ಲಿ ಪ್ರದರ್ಶನ ನೀಡಿತು.

10 / 11
ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಮಾತ್ರವಲ್ಲದೆ, ಒಡಿಶಾದ ಸ್ಥಳೀಯ ತಾರೆಯರು ಸಹ ಪ್ರದರ್ಶನ ನೀಡಿದರು.

11 / 11
Web contact
Web contact

TV9 Kannada

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!