AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡು ಬಡತನ.. ತಮ್ಮ, ತಂದೆಯ ಅಕಾಲಿಕ ಮರಣ; ಟೆಂಪೋ ಡ್ರೈವರ್ ಮಗ ಟೀಂ ಇಂಡಿಯಾದ ಕದ ತಟ್ಟಿದ ಕತೆಯಿದು

IND vs SL: ಈ ದಿನವನ್ನು ನೋಡಲು ನನ್ನ ತಂದೆ ಜೀವಂತವಾಗಿದ್ದಾರೆ ಎಂದು ನಾನು ಬಯಸುತ್ತೇನೆ. ಅವರು ನಾನು ಟೀಂ ಇಂಡಿಯಾದಲ್ಲಿ ಆಡುವುದನ್ನ ನೋಡಬೇಕೆಂದು ಬಯಸಿದ್ದರು.

ಕಡು ಬಡತನ.. ತಮ್ಮ, ತಂದೆಯ ಅಕಾಲಿಕ ಮರಣ; ಟೆಂಪೋ ಡ್ರೈವರ್ ಮಗ ಟೀಂ ಇಂಡಿಯಾದ ಕದ ತಟ್ಟಿದ ಕತೆಯಿದು
ಚೇತನ್ ಸಕಾರಿಯಾ
ಪೃಥ್ವಿಶಂಕರ
|

Updated on: Jun 11, 2021 | 4:51 PM

Share

ಆತ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ಆತನ ತಂದೆ ಅವನ ಆಟವನ್ನು ನೋಡಿ ಖುಷಿಪಟ್ಟಿದ್ದರು. ಆತ ಐಪಿಎಲ್‌ನಲ್ಲಿ ಕೋಟಿಗೆ ಮಾರಾಟವಾದಾಗ ಆತನ ತಂದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆ ಆಟಗಾರನ ಅತಿದೊಡ್ಡ ಕನಸು ನನಸಾದಾಗ, ಇದನ್ನು ನೋಡಲು ಆತನ ತಂದೆ ಬದುಕಿಲ್ಲ. ಕೆಲವು ತಿಂಗಳುಗಳ ಹಿಂದೆ, ಕೊರೊನಾದ ಎರಡನೇ ಅಲೆಯೂ ಈ ಆಟಗಾರ ತಂದೆಯನ್ನು ಬಲಿ ಪಡೆಯಿತು. ಈಗ ಈ ಆಟಗಾರನನ್ನು ಮೊದಲ ಬಾರಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಿದಾಗ ಆತನ ನೋವಿನ ಕಟ್ಟೆ ಹೊಡೆದಿತ್ತು. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ 23 ವರ್ಷದ ಚೇತನ್ ಸಕರಿಯಾ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಇಂದು ಇಲ್ಲಿದ್ದರೆ ನನ್ನನ್ನು ಟೀಮ್ ಇಂಡಿಯಾದ ಜರ್ಸಿಯಲ್ಲಿ ನೋಡಬಹುದಿತ್ತು ಎಂದು ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ 20 ಹೆಸರುಗಳನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 5 ಹೊಸ ಮುಖಗಳನ್ನು ಸೇರಿಸಲಾಗಿದೆ. ಅವುಗಳಲ್ಲಿ ಒಂದು ಚೇತನ್ ಸಕಾರಿಯಾ. ಇವರಲ್ಲದೆ ರಿತುರಾಜ್ ಗಾಯಕವಾಡ್, ದೇವದತ್ ಪಡಿಕ್ಕಲ್, ನಿತೀಶ್ ರಾಣಾ ಮತ್ತು ಕೃಷ್ಣಪ್ಪ ಗೌತಮ್ ಅವರ ಹೆಸರುಗಳು ಸೇರಿವೆ. ಜುಲೈನಲ್ಲಿ ಏಕದಿನ ಮತ್ತು ಟಿ 20 ಸರಣಿಗಾಗಿ ಶ್ರೀಲಂಕಾ ಪ್ರವಾಸ ನಡೆಯಲಿದ್ದು, ತಂಡದ ನಾಯಕನಾಗಿ ಶಿಖರ್ ಧವನ್ ಮತ್ತು ಉಪನಾಯಕನಾಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ರಾಹುಲ್ ದ್ರಾವಿಡ್ ಈ ತಂಡದ ಕೋಚ್ ಆಗಿರುತ್ತಾರೆ.

ಕಳೆದ 1 ವರ್ಷ ಏರಿಳಿತಗಳಿಂದ ತುಂಬಿವೆ ಹೊಸ ಮುಖಗಳಲ್ಲಿ, ಟೀಮ್ ಇಂಡಿಯಾವನ್ನು ತಲುಪುವ ಸಕಾರಿಯಾ ಅವರ ಪ್ರಯಾಣವು ನೋವಿನ ಸರಮಾಲೆಯಿಂದ ಕೂಡಿದೆ. ಕಳೆದ ಒಂದು ವರ್ಷ ಅವರ ಜೀವನದಲ್ಲಿ ಪ್ರಕ್ಷುಬ್ಧವಾಗಿದೆ. ಅವರು ಮೊದಲು ತನ್ನ ಕಿರಿಯ ಸಹೋದರನನ್ನು ಕಳೆದುಕೊಳ್ಳಬೇಕಾಯಿತು. ನಂತರ ಐಪಿಎಲ್ 2021 ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 1.2 ಕೋಟಿ ಬಿಡ್ ಮಾಡಿ ಕೊಂಡುಕೊಂಡಿತ್ತು. ಅದೇ ಸಮಯದಲ್ಲಿ, ಈ ಯುವ ಸೌರಾಷ್ಟ್ರ ಬೌಲರ್ ಐಪಿಎಲ್ 2021 ರಲ್ಲಿ ಕೊರೊನಾ ಕಾರಣದಿಂದಾಗಿ ತಂದೆಯನ್ನು ಕಳೆದುಕೊಳ್ಳಬೇಕಾಯಿತು.

ಚೇತನ್ ಸಕಾರಿಯಾ ಭಾವನಾತ್ಮಕ ನುಡಿ ಈಗ ಚೇತನ್ ಸಕಾರಿಯಾ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸಕಾರಿಯಾ ಮನಬಿಚ್ಚಿ ಮಾತನಾಡಿದ್ದಾರೆ. 23 ವರ್ಷದ ಬೌಲರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, “ಈ ದಿನವನ್ನು ನೋಡಲು ನನ್ನ ತಂದೆ ಜೀವಂತವಾಗಿದ್ದಾರೆ ಎಂದು ನಾನು ಬಯಸುತ್ತೇನೆ. ಅವರು ನಾನು ಟೀಂ ಇಂಡಿಯಾದಲ್ಲಿ ಆಡುವುದನ್ನ ನೋಡಬೇಕೆಂದು ಬಯಸಿದ್ದರು. ಇಂದು ನಾನು ಅವರನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ಒಂದು ವರ್ಷ ಇದು ನನ್ನ ಜೀವನದಲ್ಲಿ ಏರಿಳಿತಗಳಲ್ಲಿ ಒಂದಾಗಿದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣವಾಗಿದೆ. ನನ್ನ ದಿವಂಗತ ತಂದೆ ಮತ್ತು ನನ್ನ ತಾಯಿಗಾಗಿ ನಾನು ಕ್ರಿಕೆಟ್ ಆಡಬೇಕೆಂದು ಬಯಸಿದ್ದೆ ಎಂದು ಸಕಾರಿಯಾ ಹೇಳಿಕೊಂಡಿದ್ದಾರೆ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು