ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡ ಪ್ರಾಬಲ್ಯ ಸಾಧಿಸಿದೆ. ತಂಡವು ಎಲ್ಲಾ ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ, ಆದರೆ ಐಸಿಸಿ ನಡೆಸಿಕೊಡುವ ಒಂದು ಪಂದ್ಯಾವಳಿಗಳಲ್ಲೂ ಇನ್ನೂ ಪ್ರಶಸ್ತಿ ಗೆದ್ದಿಲ್ಲ. 2013 ರ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತ ತಂಡವು ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಈಗ ಭಾರತ ಮತ್ತೊಂದು ಪ್ರಶಸ್ತಿಗೆ ಹತ್ತಿರವಾಗಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಗಿದೆ. ಕಳೆದ 3-4 ವರ್ಷಗಳಲ್ಲಿ ಭಾರತ ತಂಡವು ಈ ಸ್ವರೂಪದಲ್ಲಿ ಪ್ರಬಲವಾಗಿದೆ ಮತ್ತು ಎಂತಹ ಪರಿಸ್ಥಿತಿಯಲ್ಲಿ ಫೈನಲ್‌ನಲ್ಲೂ ಪ್ರಶಸ್ತಿಯನ್ನ ಗೆಲ್ಲುವ ಸಾಮರ್ಥ್ಯ ಈ ತಂಡಕ್ಕಿದೆ. ಭಾರತೀಯ ಅಭಿಮಾನಿಗಳಂತೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಟೀಮ್ ಇಂಡಿಯಾ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಮತ್ತು ಈ ಪಂದ್ಯದಲ್ಲಿ ಭಾರತ ಏನು ಮಾಡಬೇಕೆಂಬುದನ್ನು ವಿವರಿಸಿದ್ದಾರೆ. ಜೊತೆಗೆ ಟಾಸ್ ಗೆದ್ದ ನಂತರ ತಂಡ ಮೊದಲು ಬ್ಯಾಟಿಂಗ್ ಮಾಡಬೇಕು ಎಂದಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಭಾರತದ ಮಾಜಿ ನಾಯಕ, ಇದು ನಮ್ಮೆಲ್ಲರಿಗೂ ಒಂದು ದೊಡ್ಡ ಅವಕಾಶವಾಗಿದೆ. ಟೀಂ ಇಂಡಿಯಾ ಇಲ್ಲಿಗೆ ಬರಲು ಎರಡು ವರ್ಷಗಳ ಕಾಲ ಶ್ರಮವಹಿಸಿದ್ದರಿಂದ ತಂಡಕ್ಕೆ ಶುಭ ಹಾರೈಸುತ್ತೇನೆ ಮತ್ತು ಅವರು ಈ ಪಂದ್ಯವನ್ನು ಗೆಲ್ಲುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದರು. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಆರು ಸರಣಿಗಳನ್ನು ಭಾರತ ಆಡಿದೆ. ಇದರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ ಸೋಲನ್ನು ಎದುರಿಸಬೇಕಾಯಿತು ಉಳಿದ ಐದು ಸರಣಿಗಳನ್ನು ತಂಡವು ಗೆದ್ದುಕೊಂಡಿತು ಎಂದಿದ್ದಾರೆ.
ರೋಹಿತ್-ಶುಬ್ಮನ್ ಚೆನ್ನಾಗಿ ಪ್ರಾರಂಭಿಸಬೇಕು
ಬಿಸಿಸಿಐ ಅಧ್ಯಕ್ಷರು ಟೀಮ್ ಇಂಡಿಯಾವನ್ನು ಸಮತೋಲಿತ ಎಂದು ಬಣ್ಣಿಸಿದರು ಮತ್ತು ಭಾರತೀಯ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಟವನ್ನು ಆಡುತ್ತಾರೆ ಎಂದು ಆಶಿಸಿದರು. ಗಂಗೂಲಿ ನಿರ್ದಿಷ್ಟವಾಗಿ ಆರಂಭಿಕರ ಪಾತ್ರದ ಬಗ್ಗೆ ಮಾತನಾಡುತ್ತಾ, ಆರಂಭಿಕರು ನ್ಯೂಜಿಲೆಂಡ್‌ನ ವೇಗದ ದಾಳಿಯನ್ನು ಮೊದಲಿನಿಂದಲೂ ತಡೆಯಬೇಕಾಗಿದೆ ಎಂದು ಹೇಳಿದರು. ರೋಹಿತ್ ಮತ್ತು ಶುಬ್ಮನ್ ಉತ್ತಮ ಆರಂಭವನ್ನು ನೀಡಬೇಕಾಗಿದೆ. ಅವರು ಕನಿಷ್ಠ 20 ಓವರ್‌ಗಳಾದರೂ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಇದು ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರು ಸಿದ್ಧಪಡಿಸಿದ ವೇದಿಕೆಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದಾಗ ವಿದೇಶಗಳಲ್ಲಿ ಪಂದ್ಯಗಳನ್ನು ಗೆಲ್ಲುವುದು ಸುಲಭ
ಪಂದ್ಯದ ದಿನದಂದು ಹವಾಮಾನ ಏನೇ ಇರಲಿ, ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಲು ಪ್ರಯತ್ನಿಸಬೇಕು. ಏಕೆಂದರೆ ವಿದೇಶಗಳಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಸ್ಥಾನದಲ್ಲಿ ಜಯಗಳಿಸಿದೆ ಎಂದು ಗಂಗೂಲಿ ಹೇಳಿದ್ದಾರೆ. ನೀವು ದಾಖಲೆಗಳನ್ನು ನೋಡಿದರೆ ಮತ್ತು ವಿದೇಶದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನಗಳನ್ನು ನೋಡಿದರೆ (2020-2021ರಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಹೊರತುಪಡಿಸಿ), ನಾವು ಮೊದಲು ಬ್ಯಾಟಿಂಗ್ ಮಾಡಿದಾಗ ಮಾತ್ರ ನಾವು ಯಾವಾಗಲೂ ಪಂದ್ಯಗಳನ್ನು ಗೆದ್ದಿದ್ದೇವೆ ಎಂದು ನಿಮಗೆ ತಿಳಿಯುತ್ತದೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿ ಎಂದಿದ್ದಾರೆ.