News9 Plus Corporate Cup: ಯಶಸ್ವಿಯಾಗಿ ಜರುಗಿದ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್

| Updated By: ಝಾಹಿರ್ ಯೂಸುಫ್

Updated on: May 09, 2023 | 6:50 PM

News9 Plus Corporate Cup: ಕಾರ್ಪೊರೇಟ್ ಪಂದ್ಯಾವಳಿಯಲ್ಲಿ ಮಹಿಳೆಯರು ಕೂಡ ಭಾಗವಹಿಸಲಿದ್ದಾರೆ. ಅವರೂ ಗೆದ್ದರೆ ನಮ್ಮ ಸಂತೋಷ ಕೂಡ ಇಮ್ಮಡಿಯಾಗಲಿದೆ. ವಿಶ್ವಕಪ್ ಮತ್ತು ಒಲಿಂಪಿಕ್ಸ್‌ನಂತಹ ವಿಶ್ವ ಕ್ರೀಡೆಗಳಲ್ಲಿ ಭಾರತ ಮಿಂಚಬಹುದು ಎಂದು ನಾನು ಬಲವಾಗಿ ನಂಬುತ್ತೇನೆ.

News9 Plus Corporate Cup: ಯಶಸ್ವಿಯಾಗಿ ಜರುಗಿದ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್
News9 Plus Corporate Cup
Follow us on

News9 Plus Corporate Cup: ಕಾರ್ಪೊರೇಟ್ ಕ್ಷೇತ್ರವೇ ಸ್ಪರ್ಧಾತ್ಮಕ ಜಗತ್ತು.. ಸದಾ ಸಡಗರದ ಬದುಕು.. ಇದೆಲ್ಲದಕ್ಕೂ ಹೊಸ ವ್ಯಾಖ್ಯಾನವನ್ನು ಹೇಳಿಕೊಟ್ಟಿದೆ ಭಾರತದ ಅತಿದೊಡ್ಡ ಟೆಲಿವಿಷನ್ ನೆಟ್​ವರ್ಕ್​ TV9. ಟಿವಿ9 ನೆಟ್‌ವರ್ಕ್ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ಫುಟ್​ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಉದ್ಯಮದ ಪ್ರಮುಖರು ಅತ್ಯುತ್ಸಹದಿಂದ ಇದರಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದರು. ಬಹು ನಿರೀಕ್ಷಿತ ಇಂಡಿಯಾ ಇಂಕ್ ಕಾರ್ಪೊರೇಟ್ ಟೂರ್ನಮೆಂಟ್ ಅನ್ನು ಕಾರ್ಪೊರೇಟ್ ಸಿಬ್ಬಂದಿಗಳು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಪುಣೆಯಲ್ಲಿ ಉತ್ಸಾಹಭರಿತ ವಾತಾವರಣದಲ್ಲಿ ನಡೆದ ಕಾರ್ಪೊರೇಟ್ ಕಪ್ ಮೂರು ದಿನಗಳ ಸಂಭ್ರಮದ ನಂತರ ಭಾನುವಾರ ಮುಕ್ತಾಯಗೊಂಡಿತು. ಮುಂಬರುವ ವರ್ಷ ಹೇಗೆ ನಡೆಯಲಿದೆ ಎಂಬ ಉತ್ಸಾಹ ಮತ್ತು ನಿರೀಕ್ಷೆ ಈಗ ಇಮ್ಮಡಿಯಾಗಿದೆ.

ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್‌ನ ಭಾಗವಾಗಿರುವ ತಮ್ಮ ಅನುಭವವನ್ನು ಹಂಚಿಕೊಂಡ ಬುಂಡೆಸ್ಲಿಗಾ ಹಿರಿಯ ಸಲಹೆಗಾರ ಬುಲ್ಲಿಶ್ ಪೀಟರ್ ಲೀಬ್ಲ್, ಎಲ್ಲರಿಂದಲೂ ಬ್ರ್ಯಾಂಡಿಂಗ್, ಪ್ರಯತ್ನಗಳು, ಸಮರ್ಪಣೆ ಮತ್ತು ಬದ್ಧತೆ ತುಂಬಾ ಚೆನ್ನಾಗಿತ್ತು ಎಂದು ತಿಳಿಸಿದ್ದಾರೆ.

ಇನ್ನು ಈ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ, ಸಿಇಒ ಬರುನ್ ದಾಸ್, ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ಕಾರ್ಪೊರೇಟ್ ನಾಯಕರಿಗೆ ಅಪ್ರತಿಮ ರೋಮಾಂಚಕಾರಿ ವಾತಾವರಣವನ್ನು ಒದಗಿಸಿದೆ ಎಂಬುದು ಸಂತೋಷಕರ ವಿಷಯ. ಉದ್ಘಾಟನಾ ಪಂದ್ಯಾವಳಿಯ ಯಶಸ್ಸಿಗೆ ಪ್ರಮುಖವಾಗಿ ಅಗ್ರ ಕಾರ್ಪೊರೇಟ್‌ಗಳ ಅತ್ಯುತ್ತಮ ಬೆಂಬಲ ಮತ್ತು ಭಾಗವಹಿಸುವಿಕೆ ಕಾರಣ. ಮುಂದಿನ ವರ್ಷ, ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ಉತ್ಸಾಹವನ್ನು ಹೆಚ್ಚಿಸುತ್ತದೆ. ನಾವು ಅದನ್ನು ಮತ್ತಷ್ಟು ಅದ್ಧೂರಿಯಾಗಿ ಆಯೋಜಿಸಲಿದ್ದೇನೆ ಬರುನ್ ದಾಸ್ ಹೇಳಿದರು.

ಬರುನ್ ದಾಸ್, ಎಂಡಿ & ಸಿಇಒ, TV9 ನೆಟ್​ವರ್ಕ್

ಮುಂದಿನ ನ್ಯೂಸ್9 ಪ್ಲಸ್ ಕಾರ್ಪೊರೇಟ್ ಪಂದ್ಯಾವಳಿಯಲ್ಲಿ ಮಹಿಳೆಯರು ಕೂಡ ಭಾಗವಹಿಸಲಿದ್ದಾರೆ. ಅವರೂ ಗೆದ್ದರೆ ನಮ್ಮ ಸಂತೋಷ ಕೂಡ ಇಮ್ಮಡಿಯಾಗಲಿದೆ. ವಿಶ್ವಕಪ್ ಮತ್ತು ಒಲಿಂಪಿಕ್ಸ್‌ನಂತಹ ವಿಶ್ವ ಕ್ರೀಡೆಗಳಲ್ಲಿ ಭಾರತ ಮಿಂಚಬಹುದು ಎಂದು ನಾನು ಬಲವಾಗಿ ನಂಬುತ್ತೇನೆ. ಫುಟ್ಬಾಲ್ ಕೇವಲ ಕ್ರೀಡೆಯಾಗಿರದೆ ಪ್ರಪಂಚದಾದ್ಯಂತದ ಯುವಕರಿಗೆ ಮಾರ್ಗದರ್ಶಿಯಾಗಿದೆ. ನಮ್ಮ ರಾಷ್ಟ್ರೀಯ ಆಕಾಂಕ್ಷೆಗಳನ್ನು ಸಾಧಿಸಲು, ನಾವು 50 ಪ್ರತಿಶತ ಮಹಿಳಾ ಶಕ್ತಿಯನ್ನು ಒಳಗೊಂಡಂತೆ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾಗಿದೆ.  ಉದಾಹರಣೆಗೆ, ಜಾಗತಿಕವಾಗಿ 57ನೇ ಶ್ರೇಯಾಂಕ..ಏಷ್ಯಾದಲ್ಲಿ 11ನೇ ಸ್ಥಾನದಲ್ಲಿರುವ ಭಾರತೀಯ ಮಹಿಳಾ ಫುಟ್ಬಾಲ್ ತಂಡವು ಪುರುಷರ ತಂಡಕ್ಕಿಂತ ಮುಂದೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವನ್ನು ಹೊಂದಿದೆ ಎಂದು ದಾಸ್ ಹೇಳಿದರು.

ಎಚ್‌ಡಿಎಫ್‌ಸಿ ಕಂಪನಿಯ ಕ್ರೀಡಾ ವಿಭಾಗದ ಮುಖ್ಯಸ್ಥ ಹಿರಿಯ ವಿಪಿ ಸುಕೇಶ್ ಶಾಸ್ತ್ರಿ, ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಇಡೀ ಟಿವಿ9 ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಅದಕ್ಕೆ ಎಲ್ಲರಿಂದಲೂ ಅಪಾರ ಶ್ರಮ ಬೇಕು. ಈವೆಂಟ್ ಅನ್ನು ಉತ್ತಮವಾಗಿ ಆಯೋಜಿಸಲಾಗಿದೆ. ನಿರ್ವಹಣೆ, ವಸತಿ, ಆಹಾರದಿಂದ ರೆಫರಿಗಳು, ಜೆರ್ಸಿಗಳು, ಮೈದಾನದ ಸೌಲಭ್ಯಗಳು ಇತ್ಯಾದಿಗಳನ್ನು ಪ್ರತಿ ನಿಮಿಷವೂ ಸಮರ್ಥವಾಗಿ ನೋಡಿಕೊಳ್ಳಲಾಯಿತು. ಕಳೆದ 25 ವರ್ಷಗಳಲ್ಲಿ ನಾವು ಇದೇ ಮೊದಲ ಬಾರಿಗೆ ಅತ್ಯುತ್ತಮವಾದ ಸಂಘಟಿತ ಕಾರ್ಯಕ್ರಮವನ್ನು ನೋಡಿದ್ದೇವೆ. ಭಾರತಕ್ಕೆ ಇದು ಅಗತ್ಯವಿದೆ. ಇಂತಹದೊಂದು ದೊಡ್ಡ ಹೆಜ್ಜೆಯನ್ನಿಟ್ಟಿದ್ದಕ್ಕಾಗಿ TV9 ಗೆ ಧನ್ಯವಾದಗಳು ತಿಳಿಸಿದರು.

ನ್ಯೂಸ್ 9 ಕಾರ್ಪೊರೇಟ್ ಕಪ್ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಲೆಜೆಂಡ್ಸ್ ಫುಟ್ಬಾಲ್ ತಂಡದ ಕ್ಯಾಪ್ಟನ್ ಅಲ್ವಿಟೊ ಡಿ’ಕುನ್ಹಾ, ಈ ಕಾರ್ಯಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ನಾನು ಬರುನ್ ಮತ್ತು ಪೀಟರ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಲ್ಲಿ ಆಟದೊಂದಿಗೆ, ಹವಾಮಾನವು ಉತ್ತಮವಾಗಿತ್ತು. ನಾವು ಅದನ್ನು ನಿಜವಾಗಿಯೂ ಆನಂದಿಸಿದ್ದೇವೆ. ಭವಿಷ್ಯದಲ್ಲಿ ನಾವು ಖಂಡಿತವಾಗಿಯೂ ಈ ಕಾರ್ಯಕ್ರಮದ ಭಾಗವಾಗಲು ಬಯಸುತ್ತೇವೆ ಎಂದು ತಿಳಿಸಿದರು.

ಪ್ರಶಸ್ತಿ ವಿಜೇತರಾಗಿ.. HDFC ತಂಡ

ಮೂರು ದಿನಗಳ ಪಂದ್ಯಾವಳಿಯ ಮುಕ್ತಾಯದ ನಂತರ, HDFC Team 1 ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ಫೋಸಿಸ್, ಟೆಲಿಪರ್ಫಾರ್ಮೆನ್ಸ್ ಮತ್ತು ಎಚ್‌ಡಿಎಫ್‌ಸಿ 2 ರನ್ನರ್ ಅಪ್ ಆಗಿ ಹೊರಹೊಮ್ಮಿತು. ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಮಾತನಾಡಿದ ಎಚ್‌ಡಿಎಫ್‌ಸಿ ಟೀಮ್ 1 ತಂಡದ ನಾಯಕ ಕಿಶೋರ್ ನಾಯರ್,ನಮಗೆ ಈ ಮೈದಾನದಲ್ಲಿ ಆಡಲು ಅವಕಾಶ ಸಿಕ್ಕಿರುವುದು ನಮಗೆ ಸಂತೋಷವಾಗಿದೆ. ನಾವು ಬಂದಿದ್ದನ್ನು ನಾವು ಸಾಧಿಸಿದ್ದೇವೆ. ನಮ್ಮ ಮೆಂಟರ್ ಸುಕೇಶ್ ಶಾಸ್ತ್ರಿ ದೇವರಿಗೆ ಧನ್ಯವಾದಗಳು! ತಂಡವಾಗಿ ಹೇಗೆ ಹೋರಾಡಬೇಕು ಮತ್ತು ಕೊನೆಯ ಕ್ಷಣದವರೆಗೂ ಶಾಂತವಾಗಿರುವುದು ಹೇಗೆ ಎಂಬುದನ್ನು ಅವರು ನಮಗೆ ಕಲಿಸಿದರು.. ಪುಣೆ ಮತ್ತು ಮುಂಬೈನಲ್ಲಿ ತಂಡವು ಈ ವಿಜಯವನ್ನು ಆಚರಿಸುತ್ತದೆ..” ಎಂದರು.

ಇನ್ಫೋಸಿಸ್ ಫುಟ್ಬಾಲ್ ತಂಡದ ನಾಯಕ (ರನ್ನರ್ ಅಪ್) ಅನುಪ್ ನಾಯರ್, ಇದೊಂದು ಅದ್ಭುತ ಅನುಭವ. ನಾವು ನಿಜವಾಗಿಯೂ ಪಂದ್ಯಾವಳಿಯ ಪೋಸ್ಟರ್ ಅನ್ನು ಪಡೆದಾಗ, ಇದು ಈ ಮಟ್ಟದಲ್ಲಿ ನಡೆಯಲಿದೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಬೇಯರ್ನ್‌ಗೆ ತಂಡವನ್ನು ಅಲ್ಲಿ ಪಂದ್ಯವನ್ನು ವೀಕ್ಷಿಸಲು ಕಳುಹಿಸುತ್ತೇವೆ ಎಂದು ಹೇಳಿದಾಗ ನಾವು ತಮಾಷೆ ಎಂದು ಭಾವಿಸಿದ್ದೇವೆ. ಆದರೆ ಇದೀಗ ಎಲ್ಲವೂ ನಿಜವಾಗುತ್ತಿದೆ ಎಂದರು.

ನ್ಯೂಸ್9 ಪ್ಲಸ್ ಕಾರ್ಪೊರೇಟ್ ಕಪ್:

U GRO ಕ್ಯಾಪಿಟಲ್ ಸಹಭಾಗಿತ್ವದಲ್ಲಿ News9 ಪ್ಲಸ್ ಕಾರ್ಪೊರೇಟ್ ಕಪ್ ಆಯೋಜಿಸಿದೆ. ಮಹಾರಾಷ್ಟ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ಸೇವೆಗಳ ನಿರ್ದೇಶನಾಲಯವು ಈ ಪಂದ್ಯಾವಳಿಗೆ ಬೆಂಬಲ ಸೂಚಿಸಿತು. ಈ ಕಪ್‌ಗೆ ವಿಶೇಷ ಪಾಲುದಾರರಾಗಿ ವರದ್ ಪ್ರಾಪರ್ಟಿ ಸೊಲ್ಯೂಷನ್ಸ್, ರಾಜಯೋಗ್ ಪೇಂಟ್ಸ್, ವಿದ್ಯಾ ಆರಾಧನಾ ಅಕಾಡೆಮಿ; ಹಾಸ್ಪಿಟಾಲಿಟಿ ಪಾರ್ಟ್ನರ್.. ದಿ ಆರ್ಕಿಡ್ ಹೋಟೆಲ್, ಪುಣೆ.. ಕ್ರೀಡಾ ಸಲಕರಣೆ ಪಾಲುದಾರ NIVIA; ಪಾನೀಯ ಪಾಲುದಾರ ಲಿಮ್ಕಾ ಕ್ರೀಡೆ; ರೇಡಿಯೊ ಪಾಲುದಾರ Red FM 93.5; ಸಹವರ್ತಿ ಪಾಲುದಾರರೊಂದಿಗೆ ಉದ್ಯಮ NEET ಅಕಾಡೆಮಿ, ಬೆಂಗಳೂರು; ಸ್ವರ್ಗಸೀಮಾ ಸ್ಯಾಂಡಲ್​ವುಡ್ ಫಾರ್ಮ್​; ನಾರಾಯಣ ವಿದ್ಯಾ ಸಂಸ್ಥೆ, ಲಲಿತಾ ಜ್ಯುವೆಲ್ಲರಿ ಮಾರ್ಟ್ ಉದ್ಘಾಟನಾ ಪಂದ್ಯಾವಳಿಯನ್ನು ಅದ್ಧೂರಿಯಾಗಿ ನಡೆಸಲು ನೆರವಾಗಿದ್ದವು.

TV9 ನೆಟ್‌ವರ್ಕ್ ಭಾರತದಲ್ಲಿ ಕಾರ್ಪೊರೇಟ್ ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ. News9 ಕಾರ್ಪೊರೇಟ್ ಕಪ್‌ನ ಅದ್ಭುತ ಯಶಸ್ಸಿನೊಂದಿಗೆ, TD9 ನೆಟ್‌ವರ್ಕ್ ಕಾರ್ಪೊರೇಟ್ ತೊಡಗಿಸಿಕೊಳ್ಳುವಿಕೆಗೆ ಹೊಸ ಮಾನದಂಡಗಳನ್ನು ಕಂಡುಕೊಂಡಿದೆ. ನೆಟ್‌ವರ್ಕ್‌ನ ಬದ್ಧತೆ ಮತ್ತು ಸಮರ್ಪಣೆ ಅಚಲವಾಗಿದ್ದು, ಮುಂಬರುವ ಆವೃತ್ತಿಗಳಲ್ಲಿ ಇನ್ನಷ್ಟು ರೋಮಾಂಚಕಾರಿ ಕ್ರೀಡಾಕೂಟಗಳನ್ನು ಆಯೋಜಿಸಲಿದೆ ಎಂದು ಟಿವಿ9 ನೆಟ್‌ವರ್ಕ್ ಭರವಸೆ ನೀಡಿದೆ.