MI vs RCB Highlights IPL 2023: ಸತ್ವ ಇಲ್ಲದ ಬೌಲಿಂಗ್; ಮುಂಬೈಗೆ ಸುಲಭ ತುತ್ತಾದ ಆರ್ಸಿಬಿ
Mumbai Indians vs Royal Challengers Bangalore IPL 2023 Highlights in Kannada: ಐಪಿಎಲ್ನ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಲೀಗ್ನಲ್ಲಿ 6ನೇ ಗೆಲುವು ದಾಖಲಿಸಿದೆ.
ಐಪಿಎಲ್ನ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಲೀಗ್ನಲ್ಲಿ 6ನೇ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ವಾಂಖೆಡೆಯಲ್ಲಿ ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕಗಳ ನೆರವಿನಿಂದ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯ ಹಾಗೂ ವದೇರಾ ಅವರ ಸ್ಫೋಟಕ ಜೊತೆಯಾಟದಿಂದಾಗಿ 17ನೇ ಓವರ್ನಲ್ಲೇ ಗೆಲುವಿನ ದಡ ಸೇರಿತು.
LIVE NEWS & UPDATES
-
ನಾಲ್ಕನೇ ವಿಕೆಟ್ ಪತನ
ಟಿಮ್ ಡೇವಿಡ್ (0) ಮೊದಲ ಎಸೆತದಲ್ಲೇ ಔಟಾದರು. ಸೂರ್ಯ ನಂತರ ಕ್ರೀಸ್ಗೆ ಬಂದ ಡೇವಿಡ್ ಕೂಡ ವಿಜಯಕುಮಾರ್ ವೈಶಾಕ್ ಓವರ್‌ನಲ್ಲಿ ಪೆವಿಲಿಯನ್ಗೆ ಮರಳಬೇಕಾಯಿತು.
-
ಸೂರ್ಯ ಔಟ್
ಕೇವಲ 35 ಎಸೆತಗಳಲ್ಲಿ 83 ರನ್ ಬಾರಿಸಿದ್ದ ಸೂರ್ಯ 16ನೇ ಓವರ್‌ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ ಕ್ಯಾಚಿತ್ತು ಔಟಾದರು.
-
21 ರನ್ ಕೊಟ್ಟ ಹಸರಂಗ
15ನೇ ಓವರ್‌ನಲ್ಲಿ ಹಸರಂಗ 21 ರನ್ ಬಿಟ್ಟುಕೊಟ್ಟರು. ಇದರಲ್ಲಿ ಸೂರ್ಯ 2 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರೆ, ವದೇರಾ ಕೂಡ ಬೌಂಡರಿ ಹೊಡೆದರು.
ಸೂರ್ಯಕುಮಾರ್ ಅರ್ಧಶತಕ
ಸಿರಾಜ್ ಬೌಲ್ ಮಾಡಿದ 14ನೇ ಓವರ್‌ನಲ್ಲಿ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ ಸೂರ್ಯ ತಮ್ಮ ಅರ್ಧಶತಕ ಪೂರೈಸಿದರು.
ಹರ್ಷಲ್ ಮತ್ತೆ ದುಬಾರಿ
13ನೇ ಓವರ್ ಬೌಲ್ ಮಾಡಿದ ಹರ್ಷಲ್ 1 ನೋ ಬಾಲ್ ಸೇರಿದಂತೆ 17 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ 3 ಬೌಂಡರಿ ಬಂದವು.
ಹಸರಂಗಗೆ 2 ಸಿಕ್ಸ್
11ನೇ ಓವರ್ ಬೌಲ್ ಮಾಡಿದ ಹಸರಂಗ 2 ಸಿಕ್ಸರ್ ನೀಡಿದರು. ಇದರೊಂದಿಗೆ ಮುಂಬೈ ತಂಡ ಶತಕ ಪೂರೈಸಿದರೆ, ವದೇರಾ ಹಾಗೂ ಸೂರ್ಯ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿದೆ.
10 ಓವರ್ ಅಂತ್ಯ
10ನೇ ಓವರ್ ಎಸೆದ ಹರ್ಷಲ್ ಬೌಂಡರಿ ಸೇರಿದಂತೆ 8 ರನ್ ಬಿಟ್ಟುಕೊಟ್ಟರು.
ವೈಶಾಕ್ಗೆ ಬೌಂಡರಿ
ವೈಶಾಕ್ ಬೌಲ್ ಮಾಡಿದ 8ನೇ ಓವರ್‌ನ 2ನೇ ಎಸೆತವನ್ನು ಸೂರ್ಯ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಹರ್ಷಲ್ ದುಬಾರಿ
ಹರ್ಷಲ್ ಎಸೆದ 7ನೇ ಓವರ್‌ನಲ್ಲಿ 2 ಬೌಂಡರಿ ಜೊತೆಗೆ 12 ರನ್ ಬಂದವು
ವದೇರಾ ಸಿಕ್ಸ್, ಪವರ್ ಪ್ಲೇ ಅಂತ್ಯ
ವೈಶಾಕ್ ಬೌಲ್ ಮಾಡಿದ 6ನೇ ಓವರ್‌ನಲ್ಲಿ ವದೇರಾ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
ರೋಹಿತ್ ಶರ್ಮಾ ಔಟ್
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (7) ಕೂಡ ಔಟಾದ ಬಳಿಕ ಮರಳಿದ್ದಾರೆ. ಹಸರಂಗ ಇಬ್ಬರೂ ಆರಂಭಿಕರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದರು.
ಮೊದಲ ವಿಕೆಟ್ ಪತನ
ಮುಂಬೈಗೆ ಮೊದಲ ಹೊಡೆತ ಬಿದ್ದಿದ್ದು, ಇಶಾನ್ ಕಿಶನ್ (42) ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿದೆ.
50 ರನ್ ಪೂರ್ಣ
ಮುಂಬೈ ಸ್ಫೋಟಕ ಆರಂಭವನ್ನು ಮಾಡಿದ್ದು ಐದನೇ ಓವರ್‌ನಲ್ಲಿಯೇ 50 ರನ್ ಪೂರೈಸಿದೆ. ವನಿಂದು ಹಸರಂಗ ಅವರ ಓವರ್‌ನಲ್ಲಿ ಇಶಾನ್ ಕಿಶನ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು.
ಕಿಶನ್ ಸಿಕ್ಸರ್
ಸಿರಾಜ್ ಬೌಲ್ ಮಾಡಿದ 3ನೇ ಓವರ್‌ನ 4 ಮತ್ತು 5ನೇ ಎಸೆತದಲ್ಲಿ ಕಿಶನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದರು.
ರೋಹಿತ್ ಬೌಂಡರಿ
ಹೇಜಲ್ವುಡ್ ಬೌಲ್ ಮಾಡಿದ 2ನೇ ಓವರ್‌ನ ಮೊದಲ ಎಸೆತದಲ್ಲೇ ರೋಹಿತ್ ಬೌಂಡರಿ ಹೊಡೆದರೆ, 5 ಮತ್ತು 6ನೇ ಎಸೆತದಲ್ಲಿ ಕಿಶನ್ ಬೌಂಡರಿ ಬಾರಿಸಿದರು.
ಮುಂಬೈ ಬ್ಯಾಟಿಂಗ್ ಆರಂಭ
ಮುಂಬೈ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೈದಾನಕ್ಕೆ ಬಂದಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಇಶಾನ್ ಬೌಂಡರಿ ಬಾರಿಸಿದರು.
200 ರನ್ ಟಾರ್ಗೆಟ್
20ನೇ ಓವರ್‌ನಲ್ಲಿ ಕೇವಲ 6 ರನ್ ಬಂದವು. ಅಂತಿಮವಾಗಿ ಆರ್ಸಿಬಿ ತಂಡ 6 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿದೆ.
ಹಸರಂಗ ಬೌಂಡರಿ
19ನೇ ಓವರ್‌ನಲ್ಲಿ ಡಿಕೆ ವಿಕೆಟ್ ಬಳಿಕ ಬಂದ ಹಸರಂಗ ಓವರ್‌ನಲ್ಲಿ 2 ಬೌಂಡರಿ ಬಾರಿಸಿದರು.
ಈ ಓವರ್‌ನಲ್ಲಿ 8 ರನ್ ಬಂದವು.
ಡಿಕೆ ಔಟ್
19ನೇ ಓವರ್ ಬೌಲ್ ಮಾಡಿದ ಜೋರ್ಡಾನ್ ಮೊದಲ ಎಸೆತದಲ್ಲೇ ಡಿಕೆ ವಿಕೆಟ್ ಉರುಳಿಸಿದರು
ಡಿಕೆ 18 ಎಸೆತದಲ್ಲಿ 30 ರನ್ ಬಾರಿಸಿದರು.
ಆರ್ಸಿಬಿ 6ನೇ ವಿಕೆಟ್ ಪತನ
ಡಿಕೆ ಸಿಕ್ಸರ್
ಕಾರ್ತಿಕೇಯ ಬೌಲ್ ಮಾಡಿದ 18ನೇ ಓವರ್‌ನಲ್ಲಿ 2 ಬೌಂಡರಿ 1 ಸಿಕ್ಸರ್ ಬಂದವು
ಈ 3 ಬೌಂಡರಿಗಳು ಡಿಕೆ ಬ್ಯಾಟ್ನಿಂದ ಬಂದವು
ಈ ಓವರ್‌ನಲ್ಲಿ 15 ರನ್ ಬಂತು.
ಡಿಕೆಗೆ ಜೀವದಾನ
17ನೇ ಓವರ್‌ನ 3ನೇ ಎಸೆತದಲ್ಲಿ ಡಿಕೆ ಎಕ್ಸ್ಟ್ರಾ ಕವರ್ನಲ್ಲಿ ಬೌಂಡರಿ ಬಾರಿಸಿದರು.
ಈ ಓವರ್‌ನಲ್ಲಿ ಡಿಕೆಗೆ ಜೀವದಾನವೂ ಸಿಕ್ಕಿತು
ಗ್ರೀನ್ ಸುಲಭ ಕ್ಯಾಚ್ ಕೈಚೆಲ್ಲಿದರು.
ಡಿಕೆ ಬೌಂಡರಿ
ಕಾರ್ತಿಕೇಯ ಬೌಲ್ ಮಾಡಿದ 16ನೇ ಓವರ್‌ನ ಮೊದಲ ಎಸೆತದಲ್ಲಿ ಡಿಕೆ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು.
ಫಾಫ್ ಕೂಡ ಔಟ್
41 ಎಸೆತಗಳಲ್ಲಿ 65 ರನ್ ಬಾರಿಸಿದ್ದ ಫಾಫ್ ಶಾರ್ಟ್ ಫೈನ್ ಲೆಗ್ನಲ್ಲಿ ಕ್ಯಾಚಿತ್ತು ಔಟಾದರು.
ಲೊಮ್ರೋರ್ ಔಟ್
14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಹಿಪಾಲ ಕ್ಲೀನ್ ಬೌಲ್ಡ್ ಆದರು.
ಕೇವಲ 1 ರನ್ ಗಳಿಸಿದ ನಂತರ ಮಹಿಪಾಲ್ ಮರಳಿದರು.
ಮ್ಯಾಕ್ಸ್‌ವೆಲ್ ಔಟ್
68 ರನ್ ಸಿಡಿಸಿ ಮ್ಯಾಕ್ಸ್‌ವೆಲ್ ಔಟ್
ಜೇಸನ್ ಬೌಲಿಂಗ್ನಲ್ಲಿ ನಿರ್ಗಮಿಸಿದ ಮ್ಯಾಕ್ಸಿ
ಆರ್ಸಿಬಿ: 136-3 (12.3 ಓವರ್)
ಫಾಫ್ ಅರ್ಧಶತಕ
30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್
ಫಾಫ್ ಕಡೆಯಿಂದ 5 ಫೋರ್, 2 ಸಿಕ್ಸ್ ಬಂದಿದೆ
10.4 ಓವರ್ ಅಂತ್ಯಕ್ಕೆ ಆರ್ಸಿಬಿ: 112-2
ಮ್ಯಾಕ್ಸ್‌ವೆಲ್ ಅರ್ಧಶತಕ
ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್
ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮ್ಯಾಕ್ಸಿ
ಮ್ಯಾಕ್ಸ್‌ವೆಲ್ ಕಡೆಯಿಂದ 6 ಫೋರ್, 4 ಸಿಕ್ಸರ್
9.2 ಓವರ್ ಅಂತ್ಯಕ್ಕೆ ಆರ್ಸಿಬಿ: 92-2
ಅರ್ಧಶತಕದ ಜೊತೆಯಾಟ
ಮ್ಯಾಕ್ಸ್‌ವೆಲ್-ಫಾಫ್ ಅರ್ಧಶತಕದ ಜೊತೆಯಾಟ
7ನೇ ಓವರ್ ಕ್ರಿಸ್ ಜಾರ್ಡನ್ ಬೌಲಿಂಗ್ನಲ್ಲಿ 2 ಸಿಕ್ಸ್
ಮೊದಲ ಮತ್ತು 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಮ್ಯಾಕ್ಸ್‌ವೆಲ್
7 ಓವರ್ ಅಂತ್ಯಕ್ಕೆ ಆರ್ಸಿಬಿ: 72-2
6ನೇ ಓವರ್‌ನಲ್ಲಿ 12 ರನ್ಸ್
6ನೇ ಓವರ್‌ನ ಪಿಯೂಷ್ ಚಾವ್ಲಾ ಬೌಲಿಂಗ್ನಲ್ಲಿ 12 ರನ್ಸ್
ಮ್ಯಾಕ್ಸ್ವೆಲ್ರಿಂದ ಮೊದಲ ಎಸೆತದಲ್ಲಿ ಸಿಕ್ಸ್
ಎರಡನೇ ಎಸೆತದಲ್ಲಿ ಫೋರ್
6 ಓವರ್ ಅಂತ್ಯಕ್ಕೆ ಆರ್ಸಿಬಿ: 56-2
ಫಾಫ್-ಮ್ಯಾಕ್ಸಿ ಜೊತೆಯಾಟ
ಆರ್ಸಿಬಿ ತಂಡಕ್ಕೆ ಫಾಫ್-ಮ್ಯಾಕ್ಸ್‌ವೆಲ್ ಆಸರೆ
ಕೊಹ್ಲಿ-ರಾವತ್ ನಿರ್ಗಮನದ ಬಳಿಕ ಫಾಫ್-ಮ್ಯಾಕ್ಸಿ ಜೊತೆಯಾಟ
5ನೇ ಓವರ್‌ನ ಜೇಸನ್ ಅವರ ಕೊನೆಯ ಎಸೆತದಲ್ಲಿ ಫಾಫ್ರಿಂದ ಭರ್ಜರಿ ಸಿಕ್ಸ್
5 ಓವರ್ ಅಂತ್ಯಕ್ಕೆ ಆರ್ಸಿಬಿ:45-2
ಕೊಹ್ಲಿ-ರಾವತ್ ಔಟ್
ಆರ್ಸಿಬಿಗೆ ಆರಂಭದಲ್ಲೇ ದೊಡ್ಡ ಆಘಾತ ಉಂಟಾಗಿದೆ
ವಿರಾಟ್ ಕೊಹ್ಲಿ (1) ಹಾಗೂ ಅನುಜ್ ರಾವತ್ (6) ಔಟಾಗಿದ್ದಾರೆ
4.3 ಓವರ್ ಅಂತ್ಯಕ್ಕೆ ಆರ್ಸಿಬಿ: 34-2
ಆರ್ಸಿಬಿ ಮೊದಲು ಬ್ಯಾಟಿಂಗ್
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - May 09,2023 6:58 PM