India vs Sri Lanka 1st ODI Result: 36.4 ಓವರ್​ಗಳಲ್ಲೇ ಗುರಿ ತಲುಪಿದ ಭಾರತ; ಶ್ರೀಲಂಕಾಗೆ ಹೀನಾಯ ಸೋಲು!

| Updated By: ganapathi bhat

Updated on: Jul 18, 2021 | 10:24 PM

IND vs SL First ODI Score Updates: ತಂಡದ ಪರವಾಗಿ ನಾಯಕ ಶಿಖರ್ ಧವನ್ 86, ಇಶಾನ್ ಕಿಶನ್ 59, ಪೃಥ್ವಿಶಾ 43 ರನ್ ಪೇರಿಸಿ, ವೇಗದ ಹಾಗೂ ಸ್ಫೋಟಕ ಆಟದ ಕೊಡುಗೆ ನೀಡಿದ್ದಾರೆ.  ಕೇವಲ 36.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಲು ಕಾರಣವಾಗಿದ್ದಾರೆ.

India vs Sri Lanka 1st ODI Result: 36.4 ಓವರ್​ಗಳಲ್ಲೇ ಗುರಿ ತಲುಪಿದ ಭಾರತ; ಶ್ರೀಲಂಕಾಗೆ ಹೀನಾಯ ಸೋಲು!
ಇಶಾನ್ ಕಿಶನ್

ಶ್ರೀಲಂಕಾ ಹಾಗೂ ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ತಂಡ ಆಲ್​ರೌಂಡ್ ಪ್ರದರ್ಶನ ತೋರಿ ಗೆಲುವಿನ ಶುಭಾರಂಭ ಮಾಡಿದೆ.  ತಂಡದ ಪರವಾಗಿ ನಾಯಕ ಶಿಖರ್ ಧವನ್ 86, ಇಶಾನ್ ಕಿಶನ್ 59, ಪೃಥ್ವಿಶಾ 43 ರನ್ ಪೇರಿಸಿ, ವೇಗದ ಹಾಗೂ ಸ್ಫೋಟಕ ಆಟದ ಕೊಡುಗೆ ನೀಡಿದ್ದಾರೆ.  ಕೇವಲ 36.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಲು ಕಾರಣವಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್​ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 262 ರನ್ ದಾಖಲಿಸಿತ್ತು. ಈ ಮೂಲಕ ಭಾರತ ತಂಡಕ್ಕೆ 263 ರನ್​ಗಳ ಟಾರ್ಗೆಟ್ ನೀಡಿತ್ತು. ಶ್ರೀಲಂಕಾ ಪರ ಬಹುತೇಕ ಆಟಗಾರರು 30 ರನ್ ದಾಖಲಿಸುವಷ್ಟರಲ್ಲಿ ಸುಸ್ತಾಗಿದ್ದರು. ಭಾರತದ ಪರ ದೀಪಕ್ ಚಹರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಕಬಳಿಸಿದ್ದರು. ಕ್ರುನಾಲ್ ಪಾಂಡ್ಯ ಅತಿ ಕಡಿಮೆ ರನ್ ಬಿಟ್ಟುಕೊಟ್ಟು ಶ್ರೀಲಂಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಸಹಕರಿಸಿದ್ದರು. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ಸಂಪೂರ್ಣ ಅಪ್ಡೇಟ್​ಗಳು ಈ ಕೆಳಗಿದೆ.

LIVE NEWS & UPDATES

The liveblog has ended.
  • 18 Jul 2021 10:23 PM (IST)

    ಭಾರತಕ್ಕೆ ಭರ್ಜರಿ ಗೆಲುವು; ಸ್ಫೋಟಕ ಆಟಕ್ಕೆ ಶರಣಾದ ಶ್ರೀಲಂಕಾ!

    ಟೀಂ ಇಂಡಿಯಾ ಗೆಲುವಿನೊಂದಿಗೆ ಶ್ರೀಲಂಕಾ ಪ್ರವಾಸವನ್ನು ಪ್ರಾರಂಭಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಜಯಗಳಿಸಿದೆ. ಭಾರತದ ಸ್ಫೋಟಕ ಆರಂಭ, ಹಾಗೂ ಜವಾಬ್ದಾರಿಯುತ ನಾಯಕನ ಆಟಕ್ಕೆ ಶ್ರೀಲಂಕಾ ಬೌಲರ್​ಗಳು ಸೋಲೊಪ್ಪಿಕೊಳ್ಳಬೇಕಾಗಿ ಬಂದಿದೆ.

  • 18 Jul 2021 10:03 PM (IST)

    ಭಾರತ ಗೆಲ್ಲಲು 18 ರನ್ ಬೇಕು

    ಭಾರತ ತಂಡದ ಗೆಲುವಿಗೆ 18 ರನ್ ಬೇಕಿದೆ. 34 ಓವರ್​ಗಳ ಅಂತ್ಯಕ್ಕೆ ಭಾರತ 245 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಭಾರತದ ಶಿಖರ್ ಧವನ್ 77 ರನ್ ದಾಖಲಿಸಿದ್ದಾರೆ. ಸೂರ್ಯಕುಮಾರ್ ಯಾದವ್ 11 ಬಾಲ್​ಗೆ 22 ರನ್ ಪೇರಿಸಿದ್ದಾರೆ. ಕೊನೆಯ ಓವರ್​ನಲ್ಲಿ ಸೂರ್ಯಕುಮಾರ್ ಯಾದವ್ ಮೂರು ಬೌಂಡರಿ ಬಾರಿಸಿದ್ದಾರೆ.

  • 18 Jul 2021 09:46 PM (IST)

    ಮನೀಶ್ ಪಾಂಡೆ ಔಟ್

    ಮನೀಶ್ ಪಾಂಡೆ 40 ಬಾಲ್​ಗೆ 26 ರನ್ ಗಳಿಸಿ ಔಟ್ ಆಗಿದ್ದಾರೆ. ಧನಂಜಯ ಡಿ ಸಿಲ್ವಾ ಬಾಲ್​ಗೆ ಶನಕ ಕ್ಯಾಚ್ ಪಡೆದಿದ್ದಾರೆ. ಭಾರತ 31 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 217 ರನ್ ದಾಖಲಿಸಿದೆ. ನಾಯಕ ಶಿಖರ್ ಧವನ್ ಜೊತೆಗೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Jul 2021 09:29 PM (IST)

    200 ರನ್ ದಾಖಲಿಸಿದ ಭಾರತ

    ಶ್ರೀಲಂಕಾ ವಿರುದ್ಧ ಭಾರತ 2 ವಿಕೆಟ್ ಕಳೆದುಕೊಂಡು 28 ಓವರ್​ಗಳಲ್ಲಿ 200 ರನ್ ದಾಖಲಿಸಿದೆ. ಗೆಲ್ಲಲು ಕೇವಲ 62 ರನ್ ಬೇಕಿದೆ. ಶಿಖರ್ ಧವನ್ ಹಾಗೂ ಮನೀಶ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Jul 2021 09:17 PM (IST)

    ಶಿಖರ್ ಧವನ್ ಅರ್ಧಶತಕ

    ಭಾರತ 25 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿದೆ. ನಾಯಕ ಶಿಖರ್ ಧವನ್ ಜವಾಬ್ದಾರಿಯುತ ಆಟ ಆಡಿ ಅರ್ಧಶತಕ ಪೂರೈಸಿದ್ದಾರೆ.

  • 18 Jul 2021 09:10 PM (IST)

    ಭಾರತ ಗೆಲ್ಲಲು 100 ರನ್ ಬೇಕು

    ಭಾರತ ತಂಡ ಗೆಲುವಿಗೆ 100 ರನ್ ಬೇಕಿದೆ. ಇನ್ನೂ 37 ಓವರ್​ಗಳು ಬಾಕಿ ಇದೆ. ಸದ್ಯ 23 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡಿರುವ ಭಾರತ 163 ರನ್ ದಾಖಲಿಸಿದೆ. ಶಿಖರ್ ಧವನ್ ಮತ್ತು ಮನೀಶ್ ಪಾಂಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 7.09 ರನ್ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿರುವ ದಾಂಡಿಗರು ಗುರಿ ತಲುಪಲು ಇನ್ನು 3.70 ರನ್ ಸರಾಸರಿಯಲ್ಲಿ ಆಟ ಆಡಿದರೆ ಗೆಲುವು ಸಾಧಿಸಬಹುದಾಗಿದೆ.

  • 18 Jul 2021 08:57 PM (IST)

    ಭಾರತ 153-2 (20 ಓವರ್)

    ಭಾರತ ತಂಡ 20 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 153 ರನ್ ದಾಖಲಿಸಿದೆ. ಭಾರತ ಗೆಲ್ಲಲು 110 ರನ್ ಬೇಕಿದೆ. ಶಿಖರ್ ಧವನ್ 50 ಬಾಲ್​ಗೆ 35 ರನ್ ಪೇರಿಸಿ ಜವಾಬ್ದಾರಿಯುತ ಆಟ ಆಡುತ್ತಿದ್ದಾರೆ.

  • 18 Jul 2021 08:49 PM (IST)

    ಇಶಾನ್ ಕಿಶನ್ ಔಟ್

    ಅರ್ಧಶತಕ ಸಿಡಿಸಿ ಆಟ ಆಡುತ್ತಿದ್ದ ಇಶಾನ್ ಕಿಶನ್ 42 ಬಾಲ್​ಗೆ 59 ರನ್ ಗಳಿಸಿ ಔಟ್ ಆಗಿದ್ದಾರೆ. ನಾಯಕ ಶಿಖರ್ ಧವನ್​ಗೆ ಮನೀಶ್ ಪಾಂಡೆ ಜೊತೆಯಾಗಿದ್ದಾರೆ. ಲಕ್ಷಣ್ ಸಂದಕನ್ ಬೌಲಿಂಗ್​ಗೆ ಭಾನುಕಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 18 Jul 2021 08:45 PM (IST)

    ಭಾರತ 140-1 (17 ಓವರ್)

    ಭಾರತ ತಂಡ 17 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 140 ರನ್ ದಾಖಲಿಸಿದೆ. ತಂಡ ಗೆಲ್ಲಲು ಇನ್ನು 123 ರನ್ ಬೇಕಿದೆ. ಶಿಖರ್ ಧವನ್ 38 ಬಾಲ್​ಗೆ 25 ರನ್ ಪೇರಿಸಿದ್ದಾರೆ. ಇಶಾನ್ ಕಿಶನ್ 40 ಬಾಲ್​ಗೆ 59 ರನ್ ದಾಖಲಿಸಿದ್ದಾರೆ.

  • 18 Jul 2021 08:39 PM (IST)

    ಅರ್ಧಶತಕ ಪೂರೈಸಿದ ಇಶಾನ್ ಕಿಶನ್

    ಭಾರತ 15 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 127 ರನ್ ದಾಖಲಿಸಿದೆ. ಇಶಾನ್ ಕಿಶನ್ 34 ಬಾಲ್​ಗೆ 53 ರನ್ ಬಾರಿಸಿದ್ದಾರೆ. 8 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ಭಾರತ ಸುಮಾರು 8 ರನ್ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದೆ. ಹಾಗೂ ಸುಮಾರು 4 ರನ್ ಸರಾಸರಿಯಲ್ಲಿ ಮುಂದೆ ಬ್ಯಾಟ್ ಮಾಡಿದರೆ ಗುರಿ ಮುಟ್ಟಬಹುದಾಗಿದೆ. ಇದೇ ವೇಗದಲ್ಲಿ ಭಾರತ ಆಟ ಆಡಿದರೆ ಇನ್ನು 15 ರಿಂದ 20 ಓವರ್​ಗಳಲ್ಲಿ ಭಾರತ ಗೆಲುವು ಸಾಧಿಸುವ ಸಾಧ್ಯತೆ ಇದೆ. ಆದರೆ ವೇಗದ ಆಟದ ನಡುವೆ ವಿಕೆಟ್ ಉಳಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.

  • 18 Jul 2021 08:26 PM (IST)

    ಭಾರತ 109-1 (13 ಓವರ್)

    ಭಾರತ ತಂಡ 13 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ. ವೇಗವಾದ ಆರಂಭ ಪಡೆದುಕೊಂಡ ಭಾರತ 100 ರನ್ ಗಡಿದಾಟಿ ಮುನ್ನುಗ್ಗುತ್ತಿದೆ.

  • 18 Jul 2021 08:20 PM (IST)

    ಭಾರತ ಗೆಲ್ಲಲು 172 ರನ್ ಬೇಕು

    ಭಾರತ ತಂಡ 10 ಓವರ್ ಅಂತ್ಯಕ್ಕೆ 91 ರನ್ ದಾಖಲಿಸಿದೆ. 1 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ದೀಪಕ್ ಚಹಾರ್ ಬ್ಯಾಟಿಂಗ್​ ಮಾಡಲು ಬಾಕಿ ಇದ್ದಾರೆ.

  • 18 Jul 2021 08:07 PM (IST)

    ಭಾರತ 84-1 (8 ಓವರ್)

    ಭಾರತ 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 84 ರನ್ ದಾಖಲಿಸಿದೆ. ನಾಯಕ ಶಿಖರ್ ಧವನ್ 13 ಬಾಲ್​ಗೆ 11 ರನ್ ದಾಖಲಿಸಿದ್ದಾರೆ. ಇಶಾನ್ ಕಿಶನ್ 11 ಬಾಲ್​ಗೆ 23 ರನ್ ಪೇರಿಸಿದ್ದಾರೆ. ಪೃಥ್ವಿ ಶಾ ಬಳಿಕ ಇಶಾನ್ ಕಿಶನ್ ವೇಗದ ಆಟಕ್ಕೆ ಮುಂದಾಗಿದ್ದಾರೆ. 4 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ ಆಟ ಆಡುತ್ತಿದ್ದಾರೆ.

  • 18 Jul 2021 07:54 PM (IST)

    ಸ್ಫೋಟಕ ಆಟ ಆಡುತ್ತಿದ್ದ ಪೃಥ್ವಿ ಶಾ ಔಟ್

    ಭಾರತದ ಪರ ಓಪನಿಂಗ್ ಬ್ಯಾಟಿಂಗ್​ಗೆ ಇಳಿದು, ಸ್ಫೋಟಕ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಔಟ್ ಆಗಿದ್ದಾರೆ. 24 ಬಾಲ್​ಗೆ 43 ರನ್ ಗಳಿಸಿ ನಿರ್ಗಮಿಸಿದ್ದಾರೆ. ಧನಂಜಯ್ ಡಿ ಸಿಲ್ವಾ ಬೌಲಿಂಗ್​ಗೆ ಅವಿಷ್ಕ ಫರ್ನಾಂಡೊಗೆ ಕ್ಯಾಚ್ ನೀಡಿ ಪೃಥ್ವಿ ಶಾ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಶಿಖರ್ ಧವನ್​ಗೆ ಇಶಾನ್ ಕಿಶನ್ ಜೊತೆಯಾಗಿದ್ದಾರೆ.

  • 18 Jul 2021 07:48 PM (IST)

    ಅರ್ಧಶತಕ ಪೂರೈಸಿದ ಭಾರತ

    ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಲಂಕನ್ನರ ಬೌಲಿಂಗ್ ದಾಳಿಗೆ ಬ್ಯಾಟ್ ಬೀಸಿ ಉತ್ತರ ಕೊಡುತ್ತಿದೆ. 5 ಓವರ್​ಗಳ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 57 ರನ್ ದಾಖಲಿಸಿದೆ. ಪೃಥ್ವಿ ಶಾ 23 ಬಾಲ್​ಗೆ 9 ಬೌಂಡರಿ ಸಹಿತ 43 ರನ್ ದಾಖಲಿಸಿದ್ದಾರೆ. ಧವನ್ 7 ಬಾಲ್​ಗೆ 7 ರನ್ ಗಳಿಸಿದ್ದಾರೆ. 11. 4 ರನ್ ಸರಾಸರಿಯಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದೆ.

  • 18 Jul 2021 07:37 PM (IST)

    ಭಾರತ ವೇಗದ ಆಟ; 31-0 (3 ಓವರ್)

    ಭಾರತ ವೇಗದ ಆರಂಭ ಪಡೆದುಕೊಂಡಿದೆ. 3 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 31 ರನ್ ದಾಖಲಿಸಿದೆ. 10.33 ರನ್​ ಸರಾಸರಿಯಲ್ಲಿ ಭಾರತ ಬ್ಯಾಟ್ ಬೀಸುತ್ತಿದೆ. ಪೃಥ್ವಿ ಶಾ 12 ಬಾಲ್​ಗೆ 22 ಹಾಗೂ ಶಿಖರ್ ಧವನ್ 7 ಬಾಲ್​ಗೆ 7 ರನ್ ಗಳಿಸಿದ್ದಾರೆ. ಶಾ 4 ಬೌಂಡರಿ ಹಾಗೂ ಧವನ್ 1 ಬೌಂಡರಿ ಸಿಡಿಸಿದ್ದಾರೆ.

  • 18 Jul 2021 07:27 PM (IST)

    ಬ್ಯಾಟಿಂಗ್ ಆರಂಭಿಸಿದ ಭಾರತ

    ಪೃಥ್ವಿ ಶಾ ಹಾಗೂ ಶಿಖರ್ ಧವನ್ ಭಾರತದ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 9 ರನ್ ದಾಖಲಿಸಿದೆ. ದುಶ್ಮಂತ ಚಮೀರ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. ಪೃಥ್ವಿ ಶಾ ಮೊದಲನೇ ಓವರ್​ನಲ್ಲೇ ಎರಡು ಬೌಂಡರಿ ಸಿಡಿಸಿದ್ದಾರೆ.

  • 18 Jul 2021 06:54 PM (IST)

    ಭಾರತಕ್ಕೆ 263 ರನ್ ಗುರಿ

    ಶ್ರೀಲಂಕಾ 50 ಓವರ್​ಗಳನ್ನು ಆಡಿ 9 ವಿಕೆಟ್​ಗಳನ್ನು ಕಳೆದುಕೊಂಡು 262 ರನ್ ದಾಖಲಿಸಿದೆ. ಕೊನೆಯ ಓವರ್​ನಲ್ಲಿ ಚಮೀರ ರನ್ ಔಟ್ ಆಗಿದ್ದಾರೆ. 5.24 ರನ್ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಶ್ರೀಲಂಕಾ ಭಾರತಕ್ಕೆ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದೆ. ಶ್ರೀಲಂಕಾ ಬೌಲರ್​​ಗಳ ಜಾಲಕ್ಕೆ ಸಿಲುಕದೆ, ಗುರಿ ಬೆನ್ನತ್ತುವತ್ತ ಭಾರತೀಯ ದಾಂಡಿಗರು ಯಶಸ್ವಿಯಾಗಬೇಕಿದೆ.

  • 18 Jul 2021 06:37 PM (IST)

    ಶ್ರೀಲಂಕಾದ 8 ವಿಕೆಟ್ ಪತನ

    ಇಸುರು ಉಡಾನ 9 ಬಾಲ್​ಗೆ 8 ರನ್ ಗಳಿಸಿ ಔಟ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ದೀಪಕ್ ಚಹರ್ ಕ್ಯಾಚ್​ಗೆ ಉಡಾನ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಮೊತ್ತ 48 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 230 ಆಗಿದೆ. 4.79 ರನ್ ಸರಾಸರಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡಿದೆ.

  • 18 Jul 2021 06:17 PM (IST)

    ಶ್ರೀಲಂಕಾ 205-7 (44 ಓವರ್)

    ಶ್ರೀಲಂಕಾ ತಂಡ 44 ಓವರ್​ಗಳ ಅಂತ್ಯಕ್ಕೆ 205 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ನಾಯಕ ದಸುನ್ ಶನಕ 50 ಬಾಲ್​ಗೆ 39 ರನ್ ಗಳಿಸಿ ಕೊನೆಯ ಓವರ್​ನಲ್ಲಿ ವಿಕೆಟ್ ನೀಡಿದ್ದಾರೆ. ಯಜುವೇಂದ್ರ ಚಹಾಲ್ ಬೌಲಿಂಗ್​ಗೆ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಚಮಿಕಾ ಕರುಣರತ್ನೆ ಹಾಗೂ ಇಸುರು ಉಡಾನ ಕ್ರೀಸ್​ನಲ್ಲಿದ್ದಾರೆ.

  • 18 Jul 2021 06:00 PM (IST)

    ಹಸರಂಗ ಔಟ್

    ವನಿಂದು ಹಸರಂಗ 7 ಬಾಲ್​ಗೆ 8 ರನ್ ಗಳಿಸಿ ಔಟ್ ಆಗಿದ್ದಾರೆ. ದೀಪಕ್ ಚಹರ್ ಬೌಲಿಂಗ್​ಗೆ ಶಿಖರ್ ಧವನ್ ಕ್ಯಾಚ್ ಪಡೆದಿದ್ದಾರೆ. ನಾಯಕ ದಸುನ್ ಶನಕ ಒಂದೆಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಚಮಿಕ ಕರುಣರತ್ನೆ ಕ್ರಿಸ್​ಗೆ ಇಳಿದಿದ್ದಾರೆ. 40 ಓವರ್​ಗೆ ಶ್ರೀಲಂಕಾ ತಂಡ 6 ವಿಕೆಟ್ ಕಳೆದುಕೊಂಡು 186 ರನ್ ದಾಖಲಿಸಿದೆ. ಭಾರತದ ಪರ ದೀಪಕ್ ಚಹರ್ 2 ಹಾಗೂ ಕುಲ್ದೀಪ್ ಯಾದವ್ 2 ವಿಕೆಟ್ ಪಡೆದಿದ್ದಾರೆ.

  • 18 Jul 2021 05:46 PM (IST)

    5 ವಿಕೆಟ್ ಕಳೆದುಕೊಂಡ ಶ್ರೀಲಂಕಾ

    65 ಬಾಲ್​ಗೆ 38 ರನ್ ಗಳಿಸಿ ಆಟವಾಡುತ್ತಿದ್ದ ಚರಿತ್ ಅಸ್ಲಂಕ ಔಟ್ ಆಗಿದ್ದಾರೆ. ದೀಪಕ್ ಚಹರ್ ಬೌಲಿಂಗ್​ಗೆ ಇಶಾನ್ ಕಿಶನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಾಯಕ ದಸುನ್ ಶನಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ವನಿಂದು ಹಸರಂಗ ಕ್ರಿಸ್​ಗೆ ಇಳಿದಿದ್ದಾರೆ. 38 ಓವರ್​ಗೆ ಶ್ರೀಲಂಕಾ ಸ್ಕೋರ್ 169-5 ಆಗಿದೆ. 4.45 ರನ್ ಸರಾಸರಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದೆ.

  • 18 Jul 2021 05:35 PM (IST)

    150 ರನ್ ದಾಖಲಿಸಿದ ಶ್ರೀಲಂಕಾ

    ಶ್ರೀಲಂಕಾ ತಂಡದ ಮೊತ್ತ 35 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 151 ರನ್ ಪೇರಿಸಿದೆ. ಚರಿತ್ ಅಸ್ಲಂಕಾ 57 ಬಾಲ್​ಗೆ 29 ಹಾಗೂ ದಸುನ್ ಶನಕ 26 ಬಾಲ್​ಗೆ 13 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 4.31 ರನ್ ಸರಾಸರಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದೆ. ಕ್ರುನಾಲ್ ಪಾಂಡ್ಯ 8 ಓವರ್​ಗಳನ್ನು ಬೌಲಿಂಗ್ ಮಾಡಿದ್ದಾರೆ. 1 ಮೇಡನ್ ಓವರ್ ಹಾಗೂ 1 ವಿಕೆಟ್ ಪಡೆದು ಕಡಿಮೆ ರನ್ ಬಿಟ್ಟುಕೊಟ್ಟಿದ್ದಾರೆ.

  • 18 Jul 2021 05:21 PM (IST)

    ಶ್ರೀಲಂಕಾ 139-4 (31 ಓವರ್)

    ಶ್ರೀಲಂಕಾ ತಂಡ 31 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 139 ರನ್ ದಾಖಲಿಸಿದೆ. ನಾಯಕ ದಸುನ್ ಶನಕ 21 ಬಾಲ್​ಗೆ 10, ಚರಿತ್ ಅಸ್ಲಾಂಕ 42 ಬಾಲ್​ಗೆ 20 ರನ್ ಗಳಿಸಿದ್ದಾರೆ.

  • 18 Jul 2021 05:09 PM (IST)

    ಶ್ರೀಲಂಕಾ 126-4 (28 ಓವರ್)

    28 ಓವರ್​ಗಳ ಅಂತ್ಯಕ್ಕೆ ಶ್ರೀಲಂಕಾ ತಂಡ 126 ರನ್ ದಾಖಲಿಸಿ 4 ವಿಕೆಟ್ ಕಳೆದುಕೊಂಡಿದೆ. 4.4 ರ ಸರಾಸರಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದೆ. ಇನ್ನೂ 22 ಓವರ್​ಗಳು ಬಾಕಿ ಉಳಿದಿವೆ. ವಿಕೆಟ್ ಕಳೆದುಕೊಳ್ಳದೆ ಬ್ಯಾಟಿಂಗ್ ಮಾಡುವ ಅಗತ್ಯ ಶ್ರೀಲಂಕಾಗಿದೆ.

  • 18 Jul 2021 04:57 PM (IST)

    ಶ್ರೀಲಂಕಾದ ಮತ್ತೊಂದು ವಿಕೆಟ್ ಪತನ

    ಶ್ರೀಲಂಕಾದ ಧನಂಜಯ್ ಡಿ ಸಿಲ್ವಾ ಕ್ರುನಾಲ್ ಪಾಂಡ್ಯ ಬೌಲಿಂಗ್​ಗೆ ಭುವನೇಶ್ವರ್ ಕುಮಾರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಡಿ ಸಿಲ್ವಾ 27 ಬಾಲ್​ಗೆ 14 ರನ್ ನೀಡಿ ಔಟ್ ಆಗಿದ್ದಾರೆ. ಚರಿತ್ ಅಸ್ಲಂಕ ಹಾಗೂ ನಾಯಕ ದಸುನ್ ಶನಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದ ಮೊತ್ತ 25 ಓವರ್​ಗೆ 117/4 ಆಗಿದೆ. ಭಾರತದ ಪರವಾಗಿ ಕುಲ್ದೀಪ್ ಯಾದವ್ 2, ಯಜುವೇಂದ್ರ ಚಹಾಲ್ 1 ಹಾಗೂ ಕ್ರುನಾಲ್ ಪಾಂಡ್ಯ 1 ವಿಕೆಟ್ ಪಡೆದಿದ್ದಾರೆ.

  • 18 Jul 2021 04:45 PM (IST)

    100 ರನ್ ಪೂರೈಸಿದ ಶ್ರೀಲಂಕಾ

    ಮೂರು ವಿಕೆಟ್ ಕಳೆದುಕೊಂಡ ಬಳಿಕವೂ ಶ್ರೀಲಂಕಾ 22 ಓವರ್​ಗಳ ಅಂತ್ಯಕ್ಕೆ 108 ರನ್ ದಾಖಲಿಸಿದೆ. 4.91 ರನ್ ಸರಾಸರಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದೆ. ಚರಿತ್ ಅಸ್ಲಂಕಾ 7 ರನ್ ಹಾಗೂ ಧನಂಜಯ್ ಡಿ ಸಿಲ್ವಾ 11 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

  • 18 Jul 2021 04:37 PM (IST)

    ಶ್ರೀಲಂಕಾದ ರನ್ ವೇಗಕ್ಕೆ ಕಡಿವಾಣ

    ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಮೊದಲಿಗೆ ವೇಗದ ಆಟವನ್ನು ಆರಂಭಿಸಿತ್ತು. ಆದರೆ, ಬಳಿಕ ಒಂದೊಂದೇ ವಿಕೆಟ್ ಕಳೆದುಕೊಳ್ಳುತ್ತಿರುವಂತೆ ರನ್ ವೇಗ ಇಳಿಕೆಯಾಗಿತ್ತು. ಇದೀಗ, 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಶ್ರೀಲಂಕಾ 96 ರನ್ ಪೇರಿಸಿದೆ. ಲಂಕಾ ನಾಯಕ ದಸುನ್ ಶನಕ, ವನಿಂದು ಹಸರಂಗ, ಚಮಿಕಾ ಕರುಣರತ್ನೆ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 18 Jul 2021 04:30 PM (IST)

    ಮಿನೊದ್ ಭಾನುಕಾ ಔಟ್

    ಕುಲ್ದೀಪ್ ಯಾದವ್ ಬೌಲಿಂಗ್​ಗೆ ಶ್ರೀಲಂಕಾದ ಮತ್ತೊಂದು ವಿಕೆಟ್ ಪತನವಾಗಿದೆ. 44 ಬಾಲ್​ಗೆ 27 ರನ್ ದಾಖಲಿಸಿದ್ದ ಮಿನೊದ್ ಭಾನುಕಾ ಔಟ್ ಆಗಿದ್ದಾರೆ. ಧನಂಜಯ್ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್ ಮಾಡುತ್ತಿದ್ದಾರೆ. 17 ಓವರ್ ಅಂತ್ಯಕ್ಕೆ ಶ್ರೀಲಂಕಾ ತಂಡ 3 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದೆ.

  • 18 Jul 2021 04:25 PM (IST)

    ಭಾನುಕಾ ರಾಜಪಕ್ಸೆ ಔಟ್

    ಶ್ರೀಲಂಕಾದ ಎರಡನೇ ವಿಕೆಟ್ ಪತನವಾಗಿದೆ. ಬೌಂಡರಿ ಸಿಕ್ಸರ್ ಸಹಿತ ವೇಗದ ಆಟವಾಡುತ್ತಿದ್ದ ಭಾನುಕಾ ರಾಜಪಕ್ಸೆ ಕುಲ್ದೀಪ್ ಯಾದವ್ ಬೌಲಿಂಗ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಧನಂಜಯ ಡಿಸಿಲ್ವಾ ಬ್ಯಾಟಿಂಗ್​ಗೆ ಇಳಿದಿದ್ದಾರೆ.

  • 18 Jul 2021 04:20 PM (IST)

    ಶ್ರೀಲಂಕಾ 82-1 (15 ಓವರ್)

    ಶ್ರೀಲಂಕಾ ತಂಡ 15 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 82 ರನ್ ದಾಖಲಿಸಿದೆ. 5.47 ರನ್​ ಸರಾಸರಿಯಲ್ಲಿ ಲಂಕನ್ನರು ಬ್ಯಾಟ್ ಬೀಸುತ್ತಿದ್ದಾರೆ. ಮಿನೊದ್ ಭಾನುಕಾ 21 ಹಾಗೂ ಭಾನುಕಾ ರಾಜಪಕ್ಸೆ 24 ರನ್ ದಾಖಲಿಸಿದ್ದಾರೆ. ಭಾನುಕಾ ರಾಜಪಕ್ಸೆ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.

  • 18 Jul 2021 04:08 PM (IST)

    ಶ್ರೀಲಂಕಾ 68-1 (13 ಓವರ್)

    ಶ್ರೀಲಂಕಾ ತಂಡದ ಮೊತ್ತ 13 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 68 ರನ್ ಆಗಿದೆ. ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್ ಬೌಲಿಂಗ್ ಮಾಡಿದ್ದಾರೆ.

  • 18 Jul 2021 03:59 PM (IST)

    ಅರ್ಧಶತಕ ಪೂರೈಸಿದ ಶ್ರೀಲಂಕಾ

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 50 ರನ್​ಗಳ ಗಡಿದಾಟಿದೆ. ತಂಡದ ಮೊತ್ತ 11 ಓವರ್​ನ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 58 ರನ್ ಆಗಿದೆ. ಮಿನೊದ್ ಭಾನುಕಾ 25 ಬಾಲ್​ಗೆ 14 ರನ್ ದಾಖಲಿಸಿದ್ದಾರೆ. ಭಾನುಕಾ ರಾಜಪಕ್ಸೆ 7 ಬಾಲ್​ಗೆ 7 ರನ್ ಪೇರಿಸಿ ಆಡುತ್ತಿದ್ದಾರೆ.

  • 18 Jul 2021 03:51 PM (IST)

    ಶ್ರೀಲಂಕಾದ ಮೊದಲ ವಿಕೆಟ್ ಪತನ

    ಶ್ರೀಲಂಕಾ ತಂಡದ ಪರವಾಗಿ ಉತ್ತಮ ಹಾಗೂ ವೇಗದ ಆರಂಭ ನೀಡಿದ್ದ ಅವಿಷ್ಕಾ ಫರ್ನಾಂಡೊ ಔಟ್ ಆಗಿದ್ದಾರೆ. ಆ ಮೂಲಕ ಶ್ರೀಲಂಕಾದ ಮೊದಲ ವಿಕೆಟ್ ಪತನವಾಗಿದೆ. ಯಜುವೇಂದ್ರ ಚಹಾಲ್ ಬೌಲಿಂಗ್​ಗೆ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ಫರ್ನಾಂಡೊ ವಿಕೆಟ್ ಒಪ್ಪಿಸಿದ್ದಾರೆ. 35 ಬಾಲ್​ಗೆ 32 ರನ್ ಗಳಿಸಿ ಅವರು ನಿರ್ಗಮಿಸಿದ್ದಾರೆ. ಇದೀಗ ಮಿನೊದ್ ಭಾನುಕಾ ಜೊತೆಗೆ ಭಾನುಕಾ ರಾಜಪಕ್ಸೆ ಕ್ರೀಸ್​ಗೆ ಇಳಿದಿದ್ದಾರೆ.

  • 18 Jul 2021 03:36 PM (IST)

    ಮೇಡನ್ ಓವರ್ ಎಸೆದ ಚಹರ್

    ಶ್ರೀಲಂಕಾ ವಿರುದ್ಧ ಭಾರತದ ಪಂದ್ಯದಲ್ಲಿ 6ನೇ ಓವರ್​ನ್ನು ದೀಪಕ್ ಚಹರ್ ಬೌಲಿಂಗ್ ಮಾಡಿದ್ದಾರೆ. ಹಾಗೂ ಈ ಓವರ್​ನಲ್ಲಿ ಅವರು ಒಂದೂ ರನ್ ಬಿಟ್ಟುಕೊಟ್ಟಿಲ್ಲ. ಶ್ರೀಲಂಕಾ ತಂಡ 7 ಓವರ್​ಗಳ ಬಳಿಕ ವಿಕೆಟ್ ಕಳೆದುಕೊಳ್ಳದೆ 32 ರನ್ ಪೇರಿಸಿದೆ. 4.57 ರನ್ ಸರಾಸರಿಯಲ್ಲಿ ಲಂಕಾ ಬ್ಯಾಟ್ ಬೀಸುತ್ತಿದೆ. ಶ್ರೀಲಂಕಾ ದಾಂಡಿಗರಿಂದ ಇದುವರೆಗೂ 2 ಬೌಂಡರಿ ದಾಖಲಾಗಿದೆ.

  • 18 Jul 2021 03:28 PM (IST)

    ಶ್ರೀಲಂಕಾ 26-0 (5 ಓವರ್)

    ಶ್ರೀಲಂಕಾ ತಂಡ 5 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 26 ರನ್ ದಾಖಲಿಸಿದೆ. ಭುವನೇಶ್ವರ್ ಕುಮಾರ್ 3 ಮತ್ತು ದೀಪಕ್ ಚಹರ್ 2 ಓವರ್ ಬೌಲಿಂಗ್ ಮಾಡಿದ್ದಾರೆ. ಇಬ್ಬರೂ ತಲಾ 13 ರನ್ ಬಿಟ್ಟುಕೊಟ್ಟಿದ್ದಾರೆ.

  • 18 Jul 2021 03:19 PM (IST)

    ಶ್ರೀಲಂಕಾ 20-0 (3 ಓವರ್)

    ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ದಾಂಡಿಗರು 6.67 ರನ್ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಅವಿಷ್ಕಾ ಫರ್ನಾಂಡೊ 2 ಬೌಂಡರಿ ಸಹಿತ 13 ಬಾಲ್​ಗೆ 16 ರನ್ ಕಲೆಹಾಕಿದ್ದಾರೆ. ಮಿನೊದ್ ಭಾನುಕಾ 5 ಬಾಲ್​ಗೆ 3 ರನ್ ದಾಖಲಿಸಿದ್ದಾರೆ.

  • 18 Jul 2021 03:16 PM (IST)

    ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ

    ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆರಂಭಿಸಿದೆ. ಅವಿಷ್ಕಾ ಫರ್ನಾಂಡೊ ಹಾಗೂ ಮಿನೊದ್ ಭಾನುಕಾ ಇನ್ನಿಂಗ್ಸ್ ಆರಂಭಿಸಿದ್ದಾರೆ. 2 ಓವರ್​ಗಳ ಅಂತ್ಯಕ್ಕೆ ಶ್ರೀಲಂಕಾ 14 ರನ್ ಗಳಿಸಿದೆ. ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಹರ್ ಭಾರತದ ಪರ ಬೌಲಿಂಗ್ ಆರಂಭಿಸಿದ್ದಾರೆ.

  • 18 Jul 2021 02:53 PM (IST)

    ಭಾರತ- ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿ.ಕೀ.), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್

    ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ.ಕೀ.), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದಾನ, ದುಷ್ಮಂತ ಚಮೀರ, ಲಕ್ಷನ್ ಸಂದಕ

  • 18 Jul 2021 02:39 PM (IST)

    ಶ್ರೀಲಂಕಾ ಬ್ಯಾಟಿಂಗ್; ಭಾರತ ಫೀಲ್ಡಿಂಗ್

    ಭಾರತ-ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ಟಾಸ್ ನಡೆದಿದೆ. ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ಫೀಲ್ಡಿಂಗ್ ಮಾಡಲಿದೆ. ಟಾಸ್ ಗೆದ್ದರೆ ನಾವು ಕೂಡ ಬ್ಯಾಟಿಂಗ್ ಆಯ್ಕೆ ಮಾಡುವವರಿದ್ದೆವು ಎಂದು ಶಿಖರ್ ಧವನ್ ಹೇಳಿದ್ದಾರೆ. ಈ ಮೈದಾನದ ಅಂಕಿ ಅಂಶಗಳನ್ನು ಗಮನಿಸಿದರೆ ಮೊದಲು ಬ್ಯಾಟ್ ಮಾಡುವುದು ಉತ್ತಮ ಆಯ್ಕೆಯಾಗಿ ಕಂಡುಬಂದಿದೆ ಎಂದು ಲಂಕಾ ನಾಯಕ ದಸುನ್ ಶನಕ ಹೇಳಿದ್ದಾರೆ.

  • 18 Jul 2021 02:21 PM (IST)

    ಅನುಭವ ಕಡಿಮೆಯಾದರೂ ಗೆಲುವಿನ ಆಸೆಗೇನೂ ಕೊರತೆ ಇಲ್ಲ!

    ಭಾರತ ಹಾಗೂ ಶ್ರೀಲಂಕಾ ತಂಡವನ್ನು ಅನನುಭವಿಗಳ ತಂಡ, ಯುವಕರ ಆಟ ಎಂದೇ ಹೇಳಲಾಗುತ್ತಿದೆ. ಬಹಳಷ್ಟು ಹೊಸ ಹಾಗೂ ಯುವ ಕ್ರಿಕೆಟಿಗರೇ ಎರಡೂ ತಂಡದಲ್ಲಿದ್ದಾರೆ. ಯುವ ಕ್ರಿಕೆಟಿಗರ ಅನುಭವ ಕಡಿಮೆ ಇರಬಹುದು ಆದರೆ, ಅವರಲ್ಲಿನ ಗೆಲ್ಲುವ ಆಸೆಗೇನೂ ಕೊರತೆ ಇಲ್ಲ ಎಂದೂ ಆಟಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

    ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಇಂದಿನ ಪಂದ್ಯಕ್ಕೂ ಮೊದಲು ಎರಡೂ ತಂಡದ ಕೋಚ್​ಗಳು ಮೈದಾನದಲ್ಲಿ ಕಾಣಿಸಿಕೊಂಡಿದ್ದು ಹೀಗೆ:

  • 18 Jul 2021 02:13 PM (IST)

    ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌..

    ಭಾರತ: ಶಿಖರ್ ಧವನ್‌(ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಮನೀಷ್‌ ಪಾಂಡೆ, ಸಂಜು ಸ್ಯಾಮ್ಸನ್‌/ಇಶಾನ್‌ ಕಿಶನ್‌ (ವಿ.ಕೀ), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ದೀಪಕ್‌ ಚಹರ್‌/ನವದೀಪ್ ಸೈನಿ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜುವೇಂದ್ರ ಚಹಾಲ್.

    ಶ್ರೀಲಂಕಾ: ಆವಿಷ್ಕಾ ಫೆರ್ನಾಂಡೊ, ಪಥೂಮ್ ನಿಸ್ಸಾಂಕ, ಭನುಕ ರಾಜಪಕ್ಷ, ವನಿಂದು ಹಸರಂಗ, ಧನಂಜಯ್ ಡಿ ಸಿಲ್ವಾ/ರಮೇಶ್‌ ಮೆಂಡಿಸ್‌, ದಸೂನ್ ಶನಕ (ನಾಯಕ), ಮಿನೋದ್‌ ಭನುಕ(ವಿ.ಕೀ), ಲಹಿರು ಕುಮಾರ, ಇಸುರು ಉದಾನ, ಅಕಿಲ ಧನಂಜಯ/ಲಕ್ಷಣ್‌ ಸಂಡಕನ್‌, ದುಶ್ಮಾಂಥ ಚಮೀರಾ.

  • 18 Jul 2021 02:07 PM (IST)

    ಮಳೆ ಬರುವ ಹಾಗಿದೆ?!

    ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಮಳೆಯಿಂದಾಗಿ ಸಮಸ್ಯೆ ಎದುರಿಸಿತ್ತು. ಆ ಬಳಿಕ ಇದೀಗ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸದಿದ್ದರೆ ಸಾಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ. ಆದರೆ, ಕೊಲೊಂಬೋದ ಹವಾಮಾನ ವರದಿ (ಆಕ್ಯುವೆದರ್ ರಿಪೋರ್ಟ್) ಪ್ರಕಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದುವೇಳೆ ಮಳೆ ಬಂದರೆ ಮತ್ತೆ ಇಂದಿನ ಪಂದ್ಯವೂ ವಿಳಂಬವಾಗಿ ಆರಂಭವಾಗುವ ಸಾಧ್ಯತೆ ಇದೆ.

Published On - 10:23 pm, Sun, 18 July 21

Follow us on