Breaking: ವಿಶ್ವ ದಾಖಲೆಯೊಂದಿಗೆ ಶೂಟಿಂಗ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಭಾರತ..!

|

Updated on: Sep 25, 2023 | 8:45 AM

Asian Games 2023: ಏಷ್ಯನ್ ಗೇಮ್ಸ್​ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ಶೂಟಿಂಗ್​ನಲ್ಲಿ ಭಾರತಕ್ಕೆ ಈ ಚಿನ್ನದ ಪದಕ ಲಭಿಸಿದೆ. ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ವಿಶ್ವದಾಖಲೆ ನಿರ್ಮಿಸಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

Breaking: ವಿಶ್ವ ದಾಖಲೆಯೊಂದಿಗೆ ಶೂಟಿಂಗ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದ ಭಾರತ..!
ಶೂಟಿಂಗ್
Follow us on

ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ಶೂಟಿಂಗ್​ನಲ್ಲಿ ಭಾರತಕ್ಕೆ ಈ ಚಿನ್ನದ ಪದಕ ಲಭಿಸಿದೆ. ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ( Men’s 10m Air Rifle Team) ಈವೆಂಟ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ವಿಶ್ವದಾಖಲೆ ನಿರ್ಮಿಸಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಶೂಟಿಂಗ್ ಹೊರತಾಗಿ ಎರಡನೇ ದಿನವೂ ಭಾರತ ರೋಯಿಂಗ್​ನಲ್ಲಿ (Rowing) ಕಂಚಿನ ಪದಕ ಗೆದ್ದುಕೊಂಡಿದೆ.

19ನೇ ಏಷ್ಯನ್ ಗೇಮ್ಸ್​ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಗೆದ್ದಿರುವ ಭಾರತ ಎರಡನೇ ದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆರಂಭಿಸಿದೆ.

Asian Games 2023: ಭಾರತ- ಶ್ರೀಲಂಕಾ ನಡುವೆ ಫೈನಲ್; ಪಂದ್ಯ ಎಷ್ಟು ಗಂಟೆಗೆ ಆರಂಭ ಗೊತ್ತಾ?

ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ಭಾರತ

ಇನ್ನು ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿರುವ ಭಾರತದ ಶೂಟರ್‌ಗಳು ಈ ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ. ಪುರುಷರ 10 ಮೀಟರ್ ಏರ್ ರೈಫಲ್‌ನ ಟೀಮ್ ಈವೆಂಟ್‌ನಲ್ಲಿ, ಭಾರತದ ಮೂವರು ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಸಂಯೋಜಿತ ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಈ ಮೂವರೂ ಸೇರಿ 1893.7 ಅಂಕಗಳನ್ನು ಕಲೆಹಾಕಿದ್ದು, ಇದು ಈಗ ಹೊಸ ವಿಶ್ವ ದಾಖಲೆಯಾಗಿದೆ. ಇದಕ್ಕೂ ಮುನ್ನ 1893.3 ಪಾಯಿಂಟ್‌ ಕಲೆಹಾಕುವ ಮೂಲಕ ಚೀನಾ ಈ ದಾಖಲೆ ಮಾಡಿತ್ತು. ಭಾರತದ ಮೂವರು ಶೂಟರ್‌ಗಳ ಪೈಕಿ ರುದ್ರಂಕ್ಷ್ ಬಾಳಾಸಾಹೇಬ್ ಅವರು 632.5 ಅಂಕಗಳನ್ನು ಗಳಿಸಿದರು. ಇವರಲ್ಲದೆ ಐಶ್ವರ್ಯಾ ತೋಮರ್ 631.6 ಅಂಕ ಗಳಿಸಿದರೆ, ದಿವ್ಯಾನ್ಶ್ ಪವಾರ್ 629.6 ಅಂಕ ಗಳಿಸಿದರು.

ರೋಯಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚು

ಶೂಟಿಂಗ್​ನಲ್ಲಿ ವಿಶ್ವದಾಖಲೆ ಜತೆಗೆ ಚಿನ್ನ ಗೆದ್ದ ಭಾರತ ಎರಡನೇ ದಿನವೂ ಕಂಚಿನ ಪದಕದ ಬೇಟೆಯಾಡಿದೆ. ರೋಯಿಂಗ್‌ನಲ್ಲಿ ಭಾರತಕ್ಕೆ ಈ ಕಂಚಿನ ಪದಕ ಲಭಿಸಿದೆ. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 am, Mon, 25 September 23