6,6,6,6.. ಒಂದೇ ಓವರ್‌ನಲ್ಲಿ 4 ಸಿಕ್ಸರ್! ಸೂರ್ಯ ಸ್ಫೋಟಕ್ಕೆ ದಂಗಾದ ಗ್ರೀನ್; ವಿಡಿಯೋ ನೋಡಿ
Suryakumar Yadav: ಈ ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ಬಳಿಕ ಅಂದರೆ ಭಾರತದ ಇನ್ನಿಂಗ್ಸ್ನ 41 ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ 44ನೇ ಓವರ್‌ನಲ್ಲಿ ವೇಗಿ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ವಿರುದ್ಧ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಇಂದೋರ್‌ನಲ್ಲಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು.
2023ರ ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಎಲ್ಲಾ ತಂಡಗಳಿಗೆ ಎಚ್ಚರಿಕೆ ನೀಡಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಟೀಂ ಇಂಡಿಯಾ (India vs Australia 99 ರನ್‌ಗಳ (ಡಕ್‌ವರ್ತ್-ಲೂಯಿಸ್ ನಿಯಮ) ಬೃಹತ್ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸುವುದರೊಂದಿಗೆ ಸರಣಿಯನ್ನು ಸಹ ವಶಪಡಿಸಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ (Team India) 2 ಶತಕ ಹಾಗೂ 2 ಸ್ಫೋಟಕ ಅರ್ಧಶತಕವನ್ನೂ ದಾಖಲಿಸಿತು. ಅದರಲ್ಲಿ ಸೂರ್ಯಕುಮಾರ್ ಯಾದವ್ Suryakumar Yadav ಕೇವಲ 24 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು ಇನ್ನಷ್ಟು ವಿಶೇಷವಾಗಿತ್ತು. ಅದರಲ್ಲೂ ಐಪಿಎಲ್ನಲ್ಲಿ ತಾನು ಪ್ರತಿನಿಧಿಸುವ ತಂಡದಲ್ಲಿ ಆಡುವ ಆಸೀಸ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ (Cameron Green) ಅವರ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸಿ ಮೈದಾನ ಹುಚ್ಚೆದು ಕುಣಿಯುವಂತೆ ಮಾಡಿದರು.
ಈ ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ಬಳಿಕ ಅಂದರೆ ಭಾರತದ ಇನ್ನಿಂಗ್ಸ್ನ 41 ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ 44ನೇ ಓವರ್‌ನಲ್ಲಿ ವೇಗಿ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ವಿರುದ್ಧ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಇಂದೋರ್‌ನಲ್ಲಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು. ಈ ಹಂತದಲ್ಲಿ ಸೂರ್ಯ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಸೂರ್ಯ ಈ 4 ಸಿಕ್ಸರ್ಗಳ ನೆರವಿನಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಸೂರ್ಯ ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಸಹ ಮುರಿದಿದ್ದಾರೆ.
Suryakumar Yadav madness in Indore….!!!
4 consecutive sixes against Cameron Green. pic.twitter.com/E7sW0p7ttI
— Mufaddal Vohra (@mufaddal_vohra) September 24, 2023
ಅಜೇಯ 72 ರನ್ ಬಾರಿಸಿದ ಸೂರ್ಯ
ಆಸ್ಟ್ರೇಲಿಯಾ ವಿರುದ್ಧ ಸೂರ್ಯ 37 ಎಸೆತಗಳಲ್ಲಿ ಔಟಾಗದೆ 72 ರನ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಒಬ್ಬ ವೇಗವಾಗಿ ಅರ್ಧಶತಕ ಸಿಡಿಸಿದ ದಾಖಲೆ ಸೂರ್ಯನ ಪಾಲಾಗಿದೆ. ಈ ಹಿಂದೆ ವಿರಾಟ್ ಆಸ್ಟ್ರೇಲಿಯಾ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಸೂರ್ಯಕುಮಾರ್ ತಮ್ಮ ಈ ಸ್ಮರಣೀಯ ನಾಕ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದರು. ಅಲ್ಲದೆ ಈ ಪಂದ್ಯದಲ್ಲಿ ಅಜೇಯ 72 ರನ್ ಬಾರಿಸಿದ ಸೂರ್ಯ ಅವರಿಗೆ ಇದು ಅವರ ಏಕದಿನ ಮಾದರಿಯ ಅತ್ಯಧಿಕ ಸ್ಕೋರ್ ಕೂಡ ಆಯಿತು.
IND vs WI: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್..!
ಸೂರ್ಯ ಮೂರನೇ ಭಾರತೀಯ
ಇನ್ನು 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಪರ ಅತಿವೇಗದ ಅರ್ಧಶತಕಗಳ ದಾಖಲೆ ಮಾಜಿ ವೇಗದ ಬೌಲರ್ ಮತ್ತು ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೆಸರಿನಲ್ಲಿದೆ. ಅಗರ್ಕರ್ 2000 ರಲ್ಲಿ ಜಿಂಬಾಬ್ವೆ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಟೀಂ ಇಂಡಿಯಾದಿಂದ ಕಪಿಲ್ ದೇವ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.
ಸೂರ್ಯಕುಮಾರ್ ಏಕದಿನ ವೃತ್ತಿಜೀವನ
ಏತನ್ಮಧ್ಯೆ, ಸೂರ್ಯುಕ್ಮರ್ ಯಾದವ್ ಇದುವರೆಗೆ ಒಟ್ಟು 29 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಸೂರ್ಯ ಈ ಪಂದ್ಯದಲ್ಲಿ 4 ಅರ್ಧಶತಕಗಳ ನೆರವಿನಿಂದ 659 ರನ್ ಕಲೆಹಾಕಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 am, Mon, 25 September 23