India vs Australia Test Series | ಕೊನೆಯ ದಿನ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳು ಕೆಚ್ಚೆದೆಯಿಂದ ಆಡಿದರು: ಸ್ಮಿತ್

|

Updated on: Jan 11, 2021 | 9:51 PM

ಭಾರತೀಯರು ಬ್ಯಾಟ್ಸ್​ಮನ್​ಗಳು ಸಿಡ್ನಿಯಲ್ಲಿ ಪ್ರದರ್ಶಿಸಿದ ಹೋರಾಟವನ್ನು ಕೊಂಡಾಡಿರುವ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಬೌಲರ್​ಗಳ ನಿರಂತರವಾದ ದಾಳಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು ಎಂದಿದ್ದಾರೆ.

India vs Australia Test Series | ಕೊನೆಯ ದಿನ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳು ಕೆಚ್ಚೆದೆಯಿಂದ ಆಡಿದರು: ಸ್ಮಿತ್
ಅಶ್ವಿನ್​ ಮತ್ತು ವಿಹಾರಿಯನ್ನು ಅಭಿನಂದಿಸುತ್ತಿರುವ ಸ್ಮಿತ್
Follow us on

ಸಿಡ್ನಿಯಲ್ಲಿಂದು ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭಾರತನ್ನು ಗೆಲ್ಲಿಸಿಯೇ ಬಿಡುವ ಆಸೆಯನ್ನು ಭಾರತೀಯರಲ್ಲಿ ಮೂಡಿಸಿದ್ದ ವಿಕೆಟ್​ಕೀಪರ್/ಬ್ಯಾಟ್ಸ್​​ಮನ್ ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್​ ಅನ್ನು ಬ್ರೇಕ್​ ಸಮಯದಲ್ಲಿ ಅಳಿಸುವ ಪ್ರಯತ್ನ ಮಾಡಿ ಜನರಿಂದ ‘ವಂಚಕ’, ‘ಮೋಸಗಾರ’ ಅಂತೆಲ್ಲ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ಪ್ರಿಮೀಯರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾದ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ‘ಫೈಟರ್ಸ್’ ಎಂದು ಶ್ಲಾಘಿಸಿದ್ದಾರೆ.

ಭೀತಿ ಹುಟ್ಟಿಸುವ ಸುಮಾರು 42 ಓವರ್​ಗಳನ್ನು ಬೌಲ್ ಮಾಡಿದರೂ ಆಸ್ಟ್ರೇಲಿಯಾ ಬೌಲರ್​ಗಳಿಗೆ ಅಶ್ವಿನ್ ಮತ್ತು ವಿಹಾರಿಯನ್ನು ಬೇರ್ಪಡಿಸಲಾಗಲಿಲ್ಲ. ಚೇತೇಶ್ವರ್ ಪೂಜಾರಾ ಮತ್ತು ಪಂತ್​ರನ್ನು ಔಟ್​ ಮಾಡಿದ ನಂತರ, ಆಸ್ಟ್ರೇಲಿಯ ಗೆಲುವು ಇನ್ನು ಸುಲಭ ಸಾಧ್ಯ ಎಂದು ಭಾವಿಸಿತ್ತು. ಆದರೆ, ಹಲವಾರು ಬಾರಿ ವೇಗದ ಬೌಲರ್​ಗಳ ಎಸೆತಗಳು ಮೈಗೆ ತಾಕಿದರೂ ಈ ಜೋಡಿ ಧೃತಿಗೆಡಲಿಲ್ಲ. ವೀರೋಚಿತ ಆಟವಾಡಿ ಭಾರತ ಈ ಪಂದ್ಯದಲ್ಲಿ ಸಮಾನ ಶ್ರೇಯಸ್ಸು ಹಂಚಿಕೊಳ್ಳುವಂತೆ ಮಾಡಿದರು.

‘ಭಾರತೀಯರು ಅತ್ಯುತ್ತಮವಾಗಿ ಹೋರಾಡಿದರು. ನಮ್ಮ ಬೌಲರ್​ಗಳ ನಿರಂತರವಾದ ಕರಾರುವಾಕ್ ದಾಳಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಮೂರು ಮತ್ತು ನಾಲ್ಕನೆ ದಿನ ಬಾಲ್ ಹೆಚ್ಚು ಪುಟಿಯದಿರುವುದು ನಮ್ಮ ಗಮನಕ್ಕೆ ಬಂದಿತ್ತು. ಕೆಲ ಎಸೆತಗಳು ನಿರೀಕ್ಷೆಗಿಂತ ಜಾಸ್ತಿ ಪುಟಿದವು. ಆದರೆ ಪಿಚ್​ ಇಂದು ನಿರ್ಜೀವವಾಗಿತ್ತು, ಭಾರತೀಯರು ಅಮೋಘವೆನಿಸುವ ಹೋರಾಟ ನಡೆಸಿದರು’ ಎಂದು ಸ್ಮಿತ್ ಪಂದ್ಯದ ನಂತರ ಹೇಳಿದರು.

ದೇಶದ ಸಲುವಾಗಿ ಶತಕ ಬಾರಿಸುವುದು ಬಹಳ ಖುಷಿ ನೀಡುತ್ತದೆ ಎಂದು ಸ್ಮಿತ್ ತಾವು ಸಿಡ್ನಿಯಲ್ಲಿ ಬಾರಿಸಿದ ಶತಕದ ಬಗ್ಗೆ ಮಾತಾಡುವಾಗ ಹೇಳಿದರು.

ರಿಷಭ್ ಪಂತ್

‘ದೇಶಕ್ಕಾಗಿ ಆಡುವಾಗ ಶತಕ ಬಾರಿಸುವುದು ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಅದರಲ್ಲೂ ನನ್ನ ತವರಿನ ಮೈದಾನದಲ್ಲಿ ಶತಕ ಬಾರಿಸಿದ್ದು ನನಗೆ ಜಾಸ್ತಿ ಸಂತಸ ಮತ್ತು ವಿಶೇಷ ಅನುಭೂತಿ ನೀಡಿದೆ, ಅದರೆ ನಾವು ಪಂದ್ಯ ಗೆಲ್ಲಲು ಸಾಧ್ಯವಾಗದೆ ಹೋಗಿದ್ದು ನನ್ನ ಸಂತಸ ಅರ್ಥಹೀನವೆನಿಸುವಂತೆ ಮಾಡಿದೆ’ ಎಂದು ಸ್ಮಿತ್ ಹೇಳಿದರು.

ಜನವರಿ 15ರಂದು ಬ್ರಿಸ್ಬೇನ್​ನಲ್ಲಿ ನಡೆಯುವ ಟೆಸ್ಟ್ ಈ ಸರಣಿಯನ್ನು ನಿರ್ಧರಿಸಲಿದೆ. ಆಲ್ಲಿನ ಮೈದಾನದಲ್ಲಿ ಅತಿಥೇಯ ಟೀಮಿನ ವೈಯಕ್ತಿಕ ಸಾಧನೆ ಚೆನ್ನಾಗಿದೆ ಎಂದು ಸ್ಮಿತ್ ಹೇಳಿದರು.

‘ನಮ್ಮ ಮುಂದಿನ ಪಂದ್ಯ ಬ್ರಿಸ್ಬೇನ್​ನಲ್ಲಿ ನಡೆಯಲಿದೆ. ಹಿಂದಿನ ದಾಖಲೆಗಳನ್ನು ಗಮನಿಸಿದ್ದೇಯಾದರೆ, ಆ ಮೈದಾನದಲ್ಲಿ ನಾವು ಚೆನ್ನಾಗಿ ಆಡಿದ್ದೇವೆ. ಕೆಲವೇ ದಿನಗಳಲ್ಲಿ ನಾವು ಇಂಡಿಯಾವನ್ನು ಅಲ್ಲಿ ಎದುರಿಸಲಿದ್ದೇವೆ, ಅದಕ್ಕಾಗಿ ನಾನು ಕಾತಯರದಿಂದ ಎದುರು ನೋಡುತ್ತಿದ್ದೇನೆ’ ಎಂದು ಸ್ಮಿತ್ ಹೇಳಿದರು.

India vs Australia Test Series | ಆಶ್ವಿನ್ ಮತ್ತು ವಿಹಾರಿ ಉತ್ತಮ ಆಟ, ನೆನಪಾಯ್ತು 1981ರ ಅಡಿಲೇಡ್ ಟೆಸ್ಟ್

Published On - 9:00 pm, Mon, 11 January 21