ಇಂಗ್ಲೆಂಡ್ ವಿರುದ್ಧ ಚೆನೈನಲ್ಲಿ ಇಂದು (ಫೆ.16) 317 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಿದ ನಂತರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಪೈನಲ್ಗೆ ಅರ್ಹತೆ ಗಿಟ್ಟಿಸುವ ಸಾಧ್ಯತೆ ಮತ್ತೊಮ್ಮೆ ಹೆಚ್ಚಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು. ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯವನ್ನು ಅವಮಾನಕರ ರೀತಿಯಲ್ಲಿ ಸೋತಿದ್ದ ಭಾರತ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಾರಿತ್ತು. ಆದರೆ ಈ ಗೆಲುವಿನ ನಂತರ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಈಗಾಗಲೇ ಫೈನಲ್ ಅಡುವ ಅರ್ಹತೆ ಗಿಟ್ಟಿಸಿರುವ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ 4ನೇ ಸ್ಥಾನಕ್ಕೆ ಕುಸಿದಿದೆ ಮತ್ತು ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.
ಭಾರತ ಫೈನಲ್ ಅಡುವುದು ಇನ್ನೂ ನಿಶ್ಚಿತವಲ್ಲ. ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡ ಅರ್ಹತೆ ಗಿಟ್ಟಿಸುವ ಸಾಧ್ಯತೆಯಿದೆ.
ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಸರಣಿಯಲ್ಲಿ ಇನ್ನೂ ಎರಡು ಟೆಸ್ಟ್ ಆಡುವುದು ಬಾಕಿಯಿವೆ. ಭಾರತ 2-1 ಇಲ್ಲವೇ 3-1 ಅಂತರದಿಂದ ಸರಣಿ ಗೆದ್ದರೆ ಭಾರತ ಅರ್ಹತೆ ಪಡೆದುಕೊಂಡುಬಿಡುತ್ತದೆ. ಇಂಗ್ಲೆಂಡ್ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡರೆ ಅದು ನ್ಯೂಜಿಲೆಂಡ್ ಜೊತೆ ಲಾರ್ಡ್ಸ್ನಲ್ಲಿ ಚಾಂಪಿಯನ್ಶಿಪ್ಗಾಗಿ ಸೆಣಸುತ್ತದೆ. ಹಾಗೆಯೇ ಒಂದು ಪಕ್ಷ ಸದರಿ ಸರಣಿಯು 1-1 ಇಲ್ಲವೇ 2-2 ರಿಂದ ಸಮವಾದರೆ ಆಸ್ಟ್ರೇಲಿಯಾ ಕ್ವಾಲಿಫೈ ಆಗಲಿದೆ.
⬆️ India move to the No.2 position
⬇️ England slip to No.4Here's the latest #WTC21 standings table after the conclusion of the second #INDvENG Test! pic.twitter.com/bLNCVyDg4z
— ICC (@ICC) February 16, 2021
Published On - 4:47 pm, Tue, 16 February 21