India vs England | 2ನೇ ಟೆಸ್ಟ್ ಗೆದ್ದು ಬೀಗಿದ ಟೀಂ ಇಂಡಿಯಾ.. ಮಿಂಚಿದ ಅಶ್ವಿನ್, ಅಕ್ಷರ್; 1-1 ರಿಂದ ಸರಣಿ ಸಮ..!
India vs England: 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್, ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. 2ನೇ ಇನ್ನಿಂಗ್ಸ್ನಲ್ಲಿ 106 ರನ್ ಸಿಡಿಸಿದ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು.
ಚೆನ್ನೈ: ಎಂ. ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ- ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ನ 2ನೇ ಇನ್ನಿಂಗ್ಸ್ ಆರಂಭದಿಂದಲೂ ಆರ್ಭಟ ತೋರಿದ ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡವನ್ನು ಕಡಿಮೆ ರನ್ಗಳಿಗೆ ಆಲ್ಔಟ್ ಮಾಡುವದರಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್, ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. 2ನೇ ಇನ್ನಿಂಗ್ಸ್ನಲ್ಲಿ 106 ರನ್ ಸಿಡಿಸಿದ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅಕ್ಸಾರ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಯಾದವ್ 2 ವಿಕೆಟ್ ಪಡೆದರೆ, ವೇಗದ ಬೌಲರ್ಗಳಿಗೆ ಯಾವುದೇ ವಿಕೆಟ್ ದಕ್ಕಲಿಲ್ಲ.
ಮೊದಲ ಇನ್ನಿಂಗ್ಸ್ ಇಂಡಿಯಾ 329 ರನ್.. ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ಗೆ 2ನೇ ಇನ್ನಿಂಗ್ಸ್ನಲ್ಲಿ 482 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 164 ರನ್ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನಗೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ (161 ರನ್) ರಹಾನೆ (67 ರನ್) ಹಾಗೂ ರಿಶಭ್ ಪಂತ್ (58 ರನ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 329 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ 134 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್ ಪರ ಫೋಕ್ಸ್ ಅವರು ಭಾರಿಸಿದ 42 ರನ್ಗಳೇ ತಂಡದ ಅತ್ಯಧಿಕ ರನ್ ಆಗಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಅಶ್ವಿನ್ 5 ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಇಶಾಂತ್ ಶರ್ಮಾ ಹಾಗೂ ಅಕ್ಸಾರ್ ಪಟೇಲ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ವೇಗಿ ಸಿರಾಜ್ ಸಹ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 195 ರನ್ಗಳ ಬೃಹತ್ ಮುನ್ನಡೆ ಪಡೆಯಿತು. 5 ವಿಕೆಟ್ ಪಡೆದು ಮಿಂಚಿದ ಅಶ್ವಿನ್ ಮೊದಲ ಇನ್ನಿಂಗ್ಸ್ನ ಮುನ್ನಡೆಗೆ ಪ್ರಮುಖ ಕಾರಣಕರ್ತರಾದರು.
286 ರನ್ಗೆ 2ನೇ ಇನ್ನಿಂಗ್ಸ್ ಮುಗಿಸಿದ್ದ ಭಾರತ.. 195 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಹೀಗಾಗಿ ಟೀಂ ಇಂಡಿಯಾ 100 ರನ್ ಗಳಿಸುವಷ್ಟರಲ್ಲೇ ಪ್ರಮುಖ ವಿಕೆಟ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಕೊಹ್ಲಿ ಅರ್ಧಶತಕ ಹಾಗೂ ಆಲ್ರೌಂಡರ್ ಅಶ್ವಿನ್ ಅವರ ಶತಕದ ನೆರವಿನಿಂದಾಗಿ 286 ರನ್ ಗಳಿಸಿತು. ಕೊನೆಯ ವಿಕೆಟ್ಗೆ ಅಶ್ವಿನ್, ಸಿರಾಜ್ ಜೊತೆಗೂಡಿ 49 ರನ್ಗಳ ಜೊತೆಯಾಟ ಆಡಿದ್ದು 2ನೇ ಇನ್ನಿಂಗ್ಸ್ನ ಮುಖ್ಯಾಂಶ ಆಗಿತ್ತು. ಆ ಸಮಯದಲ್ಲೇ ಅಶ್ವಿನ್ ಶತಕ ಸಹ ಪೂರ್ಣಗೊಳಿಸಿದರು.
2ನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಅಶ್ವಿನ್ ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. ಆರಂಭದಿಂದಲೂ ಇಂಗ್ಲೆಂಡ್ ದಾಂಡಿಗರನ್ನು ಕಾಡಿದ ಅಶ್ವಿನ್ ಪ್ರಮುಖ 3 ವಿಕೆಟ್ ತೆಗೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೇಲುಬ್ಬನ್ನ ಮುರಿದರು. ಅಶ್ವಿನ್ಗೆ ಉತ್ತಮ ಸಾಥ್ ನೀಡಿದ ಅಕ್ಸಾರ್ ಪಟೇಲ್ ಮೊದಲ ಟೆಸ್ಟ್ನಲ್ಲಿಯೇ 5 ವಿಕೆಟ್ ಪಡೆದು ಮಿಂಚಿದರು. ಈ ಇಬ್ಬರು ಸ್ಪಿನ್ನರ್‌ಗಳ ನೆರವಿನಿಂದ ಟೀಂ ಇಂಡಿಯಾ 317 ರನ್ಗಳ ಭರ್ಜರಿ ಜಯ ಸಾದಿಸಿತು.
Published On - 12:40 pm, Tue, 16 February 21