IPL 2021: ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ಮುಂದೆ Punjab Kings.. ಹೆಸರು ಬದಲಾವಣೆಯಿಂದ ಬದಲಾಗುತ್ತಾ ತಂಡದ ಅದೃಷ್ಟ?
IPL 2021: ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2021 ರಲ್ಲಿ ಕಣಕ್ಕಿಳಿಯುವ ಮುನ್ನ ತನ್ನ ತಂಡದ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ. IPL 2021 ರಲ್ಲಿ ಪ್ರೀತಿ ಜಿಂಟಾ ಒಡೆತನದ ಈ ತಂಡವು ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಆಡಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‌ನಲ್ಲಿ ಇದುವರೆಗೆ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಅಲ್ಲದೆ ಒಮ್ಮೆ ಮಾತ್ರ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2021 ರಲ್ಲಿ ಕಣಕ್ಕಿಳಿಯುವ ಮುನ್ನ ತನ್ನ ತಂಡದ ಹೆಸರನ್ನು ಬದಲಾಯಿಸಲು ನಿರ್ಧರಿಸಿದೆ. IPL 2021 ರಲ್ಲಿ ಪ್ರೀತಿ ಜಿಂಟಾ ಒಡೆತನದ ಈ ತಂಡವು ಪಂಜಾಬ್ ಕಿಂಗ್ಸ್ ಹೆಸರಿನಲ್ಲಿ ಆಡಲಿದೆ. ಈ ಬಗ್ಗೆ BCCI ಗೆ ಔಪಚಾರಿಕವಾಗಿ ಮಾಹಿತಿ ನೀಡಲಾಗಿದ್ದು, ಈ ಸಂಬಂಧ ಅನುಮೋದನೆ ಕೂಡ ಬಂದಿದೆ ಎನ್ನಲಾಗಿದೆ. ಆದರೆ, ಇದನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಬದಲಾದ ಹೆಸರಿನ ತಂಡವನ್ನು ಮುಂಬೈನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಐಪಿಎಲ್ 2021 ಹರಾಜಿನ ಮೊದಲು ಈ ಕಾರ್ಯಕ್ರಮ ನಡೆಯಬಹುದು ಎನ್ನಲಾಗಿದೆ. ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಮತ್ತು ಕರಣ್ ಪಾಲ್ ಈ ಐಪಿಎಲ್ ಫ್ರ್ಯಾಂಚೈಸ್‌ನ ಮಾಲೀಕರು. ಈ ತಂಡವು ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ತಂಡವು ಫೈನಲ್‌ನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡಿದೆ.
ಅನೇಕ ನಾಯಕರು ಮತ್ತು ತರಬೇತುದಾರರು ಬದಲಾದರು.. ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಅನ್ವೇಷಣೆಯಲ್ಲಿ ತಂಡವು ಪ್ರತಿ ಆವೃತ್ತಿಯಲ್ಲೂ ನಾಯಕರು ಮತ್ತು ತರಬೇತುದಾರರನ್ನು ಬದಲಾಯಿಸುತ್ತಿದೆ. ಆದರೆ ಯಶಸ್ಸು ಮಾತ್ರ ಇದುವರೆಗೆ ದೊರೆತಿಲ್ಲ. ಯುವರಾಜ್ ಸಿಂಗ್, ಕುಮಾರ್ ಸಂಗಕ್ಕಾರ, ಆಡಮ್ ಗಿಲ್‌ಕ್ರಿಸ್ಟ್, ಜಾರ್ಜ್ ಬೈಲಿ, ವೀರೇಂದ್ರ ಸೆಹ್ವಾಗ್, ಡೇವಿಡ್ ಮಿಲ್ಲರ್, ಮುರಳಿ ವಿಜಯ್, ಗ್ಲೆನ್ ಮ್ಯಾಕ್ಸ್‌ವೆಲ್, ರವಿಚಂದ್ರನ್ ಅಶ್ವಿನ್ ಮುಂತಾದ ಸ್ಟಾರ್ ಆಟಗಾರರು ಈ ತಂಡದ ನಾಯಕತ್ವ ವಹಿಸಿದ್ದಾರೆ.
ಮತ್ತೊಂದೆಡೆ, ಸಂಜಯ್ ಬಂಗಾರ್, ಮೈಕ್ ಹೆವ್ಸನ್, ಅನಿಲ್ ಕುಂಬ್ಳೆ, ಬ್ರಾಡ್ ಹಾಡ್ಜ್ ಅವರು ಈ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2020ಯಲ್ಲಿ ಕೆಎಲ್ ರಾಹುಲ್ ಅವರನ್ನು ಕ್ಯಾಪ್ಟನ್ ಆಗಿ ಮತ್ತು ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಿಸಿದೆ.
ಅನೇಕ ತಂಡಗಳು ಹೆಸರು ಮತ್ತು ಜರ್ಸಿ ಬದಲಾಯಿಸಿವೆ.. ಹೆಸರು ಮತ್ತು ಜರ್ಸಿ ಬದಲಾಯಿಸಿದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇತ್ತೀಚಿನ ಉದಾಹರಣೆಯಾಗಿದೆ. ಈ ಮೊದಲು ಈ ಫ್ರ್ಯಾಂಚೈಸ್‌ಗೆ ಡೆಲ್ಲಿ ಡೇರ್‌ಡೆವಿಲ್ಸ್ ಎಂದು ಹೆಸರಿಸಲಾಗಿತ್ತು. ಇದಲ್ಲದೆ, ಇದು ತನ್ನ ಜರ್ಸಿಯನ್ನು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಯಿಸಿದೆ. ಹಾಗೆಯೇ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡವು ತಮ್ಮ ಜರ್ಸಿಗಳನ್ನು ಕಪ್ಪು ಬಣ್ಣದಿಂದ ನೇರಳೆ ಬಣ್ಣಕ್ಕೆ ಬದಲಾಯಿಸಿದೆ. ಅದೇ ರೀತಿ ಡೆಕ್ಕನ್ ಚಾರ್ಜರ್ಸ್ ತಂಡದ ಹೆಸರನ್ನು ಸನ್‌ರೈಸರ್ಸ್ ಹೈದರಾಬಾದ್ ಎಂದು ಮರುನಾಮಕರಣ ಮಾಡಲಾಯಿತು.
Published On - 10:59 am, Tue, 16 February 21