ಕ್ರಿಕೆಟ್​ ವಿಶೇಷ: 30ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಮಾಯಾಂಕ್​ ಅಗರ್ವಾಲ್.. ಸೋಷಿಯಲ್​ ಮೀಡಿಯಾದಲ್ಲಿ ಗಣ್ಯರ ಶುಭಾಶಯ

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಅವರು ಮಂಗಳವಾರ 30 ನೇ ವರ್ಷಕ್ಕೆ ಕಾಲಿಟ್ಟರು. ಈ ವಿಚಾರವನ್ನು ಮಾಯಾಂಕ್​ ಪತ್ನಿ ಆಶಿತಾ ಸೂದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಯು ಸಹ ಮಾಯಾಂಕ್ ಅವರ ಜನ್ಮದಿನಕ್ಕೆ ಶುಭಾಶಯ ಕೋರಿದೆ.

  • TV9 Web Team
  • Published On - 11:44 AM, 16 Feb 2021
ಕ್ರಿಕೆಟ್​ ವಿಶೇಷ: 30ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಮಾಯಾಂಕ್​ ಅಗರ್ವಾಲ್.. ಸೋಷಿಯಲ್​ ಮೀಡಿಯಾದಲ್ಲಿ ಗಣ್ಯರ ಶುಭಾಶಯ
ಮಾಯಾಂಕ್ ಅಗರ್​ವಾಲ್

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಅವರು ಮಂಗಳವಾರ 30 ನೇ ವರ್ಷಕ್ಕೆ ಕಾಲಿಟ್ಟರು. ಈ ವಿಚಾರವನ್ನು ಮಾಯಾಂಕ್​ ಪತ್ನಿ ಆಶಿತಾ ಸೂದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಯು ಸಹ ಮಾಯಾಂಕ್ ಅವರ ಜನ್ಮದಿನಕ್ಕೆ ಶುಭಾಶಯ ಕೋರಿದೆ.

ಟೆಸ್ಟ್ ಓಪನರ್ ಆಗಿ ಅವರು ಮಾಡಿದ ಕೆಲವು ಸಾಧನೆಗಳ ಬಗ್ಗೆ ಟ್ವೀಟ್ ಮಾಡಿ, ಶುಭಾಶಯ ತಿಳಿಸಿದೆ. ಮಾಯಾಂಕ್ ಅಗರ್ವಾಲ್ 1991 ರ ಫೆಬ್ರವರಿ 16 ರಂದು ಬೆಂಗಳೂರಿನಲ್ಲಿ ಜನಿಸಿದರು. ಅಗರ್ವಾಲ್ ಬಿಷಪ್ ಕಾಟನ್ ಬಾಲಕರ ಶಾಲೆ ಮತ್ತು ಬೆಂಗಳೂರಿನ ಜೈನ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.

ಈವರೆಗೆ 14 ಟೆಸ್ಟ್ ಪಂದ್ಯ ಆಡಿದ್ದಾರೆ..
2017-18 ರಣಜಿ ಪಂದ್ಯಾವಳಿಯಲ್ಲಿ ಮಾಯಾಂಕ್​ ಗಳಿಸಿದ 304 ರನ್​ಗಳು ಆಯ್ಕೆದಾರರ ಗಮನ ಸೆಳೆಯಿತು. ಅಲ್ಲದೆ ಮಾಯಾಂಕ್​ ಆ ಆವೃತ್ತಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೇರಿ ಒಟ್ಟು 1,160 ರನ್ ಗಳಿಸಿದರು. ಅದೇ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮಾಯಾಂಕ್ ಆ ವರ್ಷ ದೇಶೀಯ ಎಲ್ಲಾ ಕ್ರಿಕೆಟ್​ ಸ್ವರೂಪಗಳಲ್ಲಿ 2,141 ರನ್ ಗಳಿಸಿ ಹಲವಾರು ದಾಖಲೆಗಳನ್ನು ಮುರಿದರು.

2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಮಾಡಿದ ಅವರು ಈವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 1,052 ರನ್ ಗಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಗಳಿಸಿದ 243 ಸ್ಕೋರ್‌ ಟೆಸ್ಟ್​ನಲ್ಲಿ ಅವರ ವೈಯಕ್ತಿಕ ಅತ್ಯಧಿಕ ರನ್​ ಆಗಿದೆ. ಮಯಾಂಕ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು. ನಂತರ ಆ ಶತಕವನ್ನು ಡಬಲ್ ಸೆಂಚುರಿ ಆಗಿ ಪರಿವರ್ತಿಸಿದರು. ಮಾಯಾಂಕ್ ಅಗರ್ವಾಲ್ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡದೊಂದಿಗೆ ಚೆನ್ನೈನಲ್ಲಿದ್ದಾರೆ.