India vs England: ನಾನು ನಿನ್ನನ್ನು ನಂಬಿ ಸಿಂಗಲ್ ತೆಗೆದುಕೊಂಡಿದ್ದೇನೆ.. ಅಶ್ವಿನ್ ಈ ಮಾತಿಗೆ ಸಿರಾಜ್ ಉತ್ತರ ಏನಾಗಿತ್ತು ಗೊತ್ತಾ?
India vs England: ಅಶ್ವಿನ್ ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ಸಿರಾಜ್‌ಗೆ ಸ್ಟ್ರೈಕ್ ನೀಡಿದರು. ನಂತರ ಅವರು ಸಿರಾಜ್‌ಗೆ, ನಾನು ನಿನ್ನ ನಂಬಿ ಸಿಂಗಲ್ ತೆಗೆದುಕೊಂಡೆ ಎಂದರು. ಇದಕ್ಕೆ ಸಿರಾಜ್, ಈಗ ನನ್ನನ್ನು ನಂಬಿರಿ ಎಂದು ಅಶ್ವಿನ್ಗೆ ಪ್ರತ್ಯುತ್ತರ ನೀಡಿದರು. ಮುಂದಿನ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಮತ್ತೆ ಸಿಕ್ಸರ್ ಬಾರಿಸಿದರು.
ಚೆನ್ನೈ: 2ನೇ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಲು ಭಾರತ 482 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ಮುಂದಿರಿಸಿದೆ. ಭಾರತ ಎರಡನೇ ಇನಿಂಗ್ಸ್‌ನಲ್ಲಿ 286 ರನ್ ಗಳಿಸಿದೆ. ಎರಡು ಜೀವದಾನಗಳ ಲಾಭ ಪಡೆದ ಅಶ್ವಿನ್ 106 ರನ್ ಗಳಿಸಿದರು. ಇದು ಅವರ ಐದನೇ ಟೆಸ್ಟ್ ಶತಕ. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಸಹ ಅಶ್ವಿನ್ ಪಡೆದರು. ಈ ರೀತಿಯಾಗಿ, ಅವರು ಮೂರನೇ ಬಾರಿಗೆ ಒಂದು ಶತಕ ಮತ್ತು ಐದು ವಿಕೆಟ್‌ಗಳನ್ನು ಇನ್ನಿಂಗ್ಸ್‌ನಲ್ಲಿ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ ಅಶ್ವಿನ್, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನಾಯಕ ವಿರಾಟ್ ಕೊಹ್ಲಿ (62) ಅವರೊಂದಿಗೆ ಏಳನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟವನ್ನು ಸಹ ಆಡಿದರು. ನಂತರ ಮೊಹಮ್ಮದ್ ಸಿರಾಜ್ ಅವರೊಂದಿಗೆ ಕೊನೆಯ ವಿಕೆಟ್‌ಗೆ 49 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ತಮ್ಮ ಶತಕವನ್ನು ಸಹ ಪೂರ್ಣಗೊಳಿಸಿದರು.
ನಾನು ನಿನ್ನ ನಂಬಿ ಸಿಂಗಲ್ ತೆಗೆದುಕೊಂಡೆ.. ಅಶ್ವಿನ್ ಮತ್ತು ಸಿರಾಜ್ ನಡುವಿನ ಕೊನೆಯ ವಿಕೆಟ್ ಜೊತೆಯಾಟದ ಸಮಯದಲ್ಲಿ, ಒಂದು ತಮಾಷೆಯ ಪ್ರಸಂಗವು ನಡೆಯಿತು. ಈ ಘಟನೆ ನಡೆದಿದ್ದು ಭಾರತದ ಇನ್ನಿಂಗ್ಸ್‌ನ 85 ನೇ ಓವರ್‌ನಲ್ಲಿ. ಜ್ಯಾಕ್ ಲೀಚ್ ಆ ಓವರ್ ಮಾಡಿದರು. ಅಶ್ವಿನ್ ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ಸಿರಾಜ್‌ಗೆ ಸ್ಟ್ರೈಕ್ ನೀಡಿದರು. ನಂತರ ಅವರು ಸಿರಾಜ್‌ಗೆ, ನಾನು ನಿನ್ನ ನಂಬಿ ಸಿಂಗಲ್ ತೆಗೆದುಕೊಂಡೆ ಎಂದರು. ಇದಕ್ಕೆ ಸಿರಾಜ್, ಈಗ ನೀವು ನನ್ನನ್ನು ನಂಬಿರಿ ಎಂದು ಅಶ್ವಿನ್ಗೆ ಪ್ರತ್ಯುತ್ತರ ನೀಡಿದರು. ಮುಂದಿನ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಮತ್ತೆ ಸಿಕ್ಸರ್ ಬಾರಿಸಿದರು. ನಂತರ ಅವರು ಕೊನೆಯ ಎಸೆತವನ್ನು ಉತ್ತಮವಾಗಿ ಎದುರಿಸಿದರು.
ಅಶ್ವಿನ್ ಶತಕ ಬಾರಿಸಿದಾಗ ಸಿರಾಜ್ ಖುಷಿಗೆ ಪಾರವೇ ಇರಲಿಲ್ಲ.. ಮೊಹಮ್ಮದ್ ಸಿರಾಜ್ ಕೊನೆಯವರೆಗೂ ಅಜೇಯರಾಗಿ ಉಳಿದರು. ಎರಡು ಸಿಕ್ಸರ್‌ಗಳ ಸಹಾಯದಿಂದ 21 ಎಸೆತಗಳಲ್ಲಿ 16 ರನ್ ಗಳಿಸಿದರು. ಮೊಯಿನ್ ಅಲಿಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಬೌಂಡರಿ ಬಾರಿಸಿ ಶತಕವನ್ನು ಪೂರ್ಣಗೊಳಿಸಿದಾಗ, ಸಿರಾಜ್ ಕೂಡ ಅಶ್ವಿನ್ಗಿಂತ ಹೆಚ್ಚಾಗಿ ಸಂಭ್ರಮಿಸಿದರು. ಸಿರಾಜ್ ಅವರ ಈ ಸಂಭ್ರಮ ಕಂಡವರು, ಇದು ಯಾರ ಶತಕ ಎಂಬುದನ್ನು ಅರೆ ಕ್ಷಣ ಮರೆತುಬಿಟ್ಟರು. ಎರಡನೇ ಟೆಸ್ಟ್‌ನಲ್ಲಿ ಅಶ್ವಿನ್ 14 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 106 ರನ್ ಗಳಿಸಿದರು. ಆಗಸ್ಟ್ 2016 ರ ನಂತರ ಅಶ್ವಿನ್ ಬಾರಿಸಿದ ಮೊದಲ ಟೆಸ್ಟ್ ಶತಕ ಇದು.
ಇಂಗ್ಲೆಂಡ್ ಪರ ಮೊಯಿನ್ ಅಲಿ ಮತ್ತು ಜ್ಯಾಕ್ ಲೀಚ್ ತಲಾ ನಾಲ್ಕು ವಿಕೆಟ್ ಪಡೆದರು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ ಗಳಿಸಿ ಇಂಗ್ಲೆಂಡ್‌ನ್ನು 134 ರನ್‌ಗಳಿಗೆ ಆಲ್ಔಟ್ ಮಾಡಿತು. ಮೊದಲ ಟೆಸ್ಟ್ ಗೆದ್ದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Siraj's reaction to Ashwin's hundred is wonderful ❤
Maybe his teammates do like him after all.#INDvAUS pic.twitter.com/BS9MGFG37C
— Wisden (@WisdenCricket) February 15, 2021
Published On - 6:32 pm, Mon, 15 February 21