IPL 2021 Auction: ಚೆನ್ನೈನಲ್ಲಿ ಫೆ. 18 ರಂದು IPL ಹರಾಜು.. 292 ಆಟಗಾರರ ಭವಿಷ್ಯ ಪ್ರಾಂಚೈಸಿಗಳ ತೀರ್ಮಾನದಲ್ಲಿದೆ..!

IPL 2021 Auction: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 11 ಸ್ಲಾಟ್‌ಗಳನ್ನು ಭರ್ತಿ ಮಾಡಲು 34.9 ಕೋಟಿ ಹಣ ತನ್ನಲ್ಲಿರಿಸಿಕೊಂಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ ತನ್ನ ಪ್ರಸ್ತುತ ಪೂಲ್​ನಲ್ಲಿ ಕೇವಲ 12 ಆಟಗಾರರನ್ನು ಉಳಿಸಿಕೊಂಡಿದೆ.

IPL 2021 Auction: ಚೆನ್ನೈನಲ್ಲಿ ಫೆ. 18 ರಂದು IPL ಹರಾಜು.. 292 ಆಟಗಾರರ ಭವಿಷ್ಯ ಪ್ರಾಂಚೈಸಿಗಳ ತೀರ್ಮಾನದಲ್ಲಿದೆ..!
ಐಪಿಎಲ್​ ಟ್ರೋಪಿ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Feb 12, 2021 | 2:44 PM

ಚೆನ್ನೈ: ಚೆನ್ನೈನಲ್ಲಿ ಫೆಬ್ರವರಿ 18 ರಂದು ನಡೆಯಲಿರುವ ಐಪಿಎಲ್ 2021 ಆಟಗಾರರ ಹರಾಜಿನಲ್ಲಿ ಒಟ್ಟು 292 ಆಟಗಾರರ ಹೆಸರು ನೊಂದಣಿಯಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ದೃಢಪಡಿಸಿದೆ. ಇತ್ತೀಚೆಗೆ ಮುಂಬೈನ ಟಿ20 ತಂಡಕ್ಕೆ ಆಯ್ಕೆಯಾದ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಈ ಐಪಿಎಲ್​ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ 75 ಲಕ್ಷ ರೂ.ಗೆ ತನ್ನ ಬೆಲೆಯನ್ನು ನಿಗದಿಪಡಿಸಿದ್ದ ಎಸ್. ಶ್ರೀಶಾಂತ್ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

53.2 ಕೋಟಿ ಹಣವನ್ನು ತನ್ನ ಖಾತೆಯಲ್ಲಿ ಉಳಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ತನ್ನ ತಂಡದಲ್ಲಿ ಖಾಲಿ ಇರುವ ಒಂಬತ್ತು ಸ್ಲಾಟ್‌ಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಹರಾಜಿನಲ್ಲಿ ಪಾಲ್ಗೊಳ್ಳಲಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 11 ಸ್ಲಾಟ್‌ಗಳನ್ನು ಭರ್ತಿ ಮಾಡಲು 34.9 ಕೋಟಿ ಹಣ ತನ್ನಲ್ಲಿರಿಸಿಕೊಂಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ ತನ್ನ ಪ್ರಸ್ತುತ ಪೂಲ್​ನಲ್ಲಿ ಕೇವಲ 12 ಆಟಗಾರರನ್ನು ಉಳಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಸಹ ಲಭ್ಯವಿರುವ ಒಂಬತ್ತು ಸ್ಲಾಟ್‌ಗಳಿಗೆ 37.85 ಕೋಟಿ ರೂ. ಹಣದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲ್ಲಿದೆ.

ಹರ್ಭಜನ್, ಕೇದಾರ್​ ಮೂಲ ಬೆಲೆ 2 ಕೋಟಿ.. ಐಪಿಎಲ್ 2021 ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯಲ್ಲಿ ಒಟ್ಟು 10 ಆಟಗಾರರ ಹೆಸರುಗಳು ಸರತಿಯಲ್ಲಿದ್ದು, ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್ ರೂಪದಲ್ಲಿ ಇಬ್ಬರು ಭಾರತೀಯರು ಇರಲಿದ್ದಾರೆ. ಮ್ಯಾಕ್ಸ್ ವೆಲ್, ಸ್ಮಿತ್, ಶಕೀಬ್ ಅಲ್ ಹಸನ್, ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್ ಮತ್ತು ಮಾರ್ಕ್​ವುಡ್ ರೂಪದಲ್ಲಿ 8 ವಿದೇಶಿ ಆಟಗಾರರು ಇರಲಿದ್ದಾರೆ.

ಯಾವ ಮೂಲ ಬೆಲೆಯಲ್ಲಿ ಎಷ್ಟು ಆಟಗಾರರು? 1.5 ಕೋಟಿ ರೂ. ಮೂಲ ಬೆಲೆಯಲ್ಲಿ 12 ಆಟಗಾರರು ಹರಾಜಿನಲ್ಲಿ ಇರಲಿದ್ದಾರೆ. ಮೂಲ ಬೆಲೆ 1 ಕೋಟಿ ರೂ.ನಲ್ಲಿ 11 ಕ್ರಿಕೆಟಿಗರು ಇರಲಿದ್ದು, 2 ಭಾರತೀಯ ಮುಖಗಳಾದ ಹನುಮಾ ವಿಹಾರಿ ಮತ್ತು ಉಮೇಶ್ ಯಾದವ್ ಇರಲಿದ್ದಾರೆ. ಒಟ್ಟು 15 ವಿದೇಶಿ ಆಟಗಾರರು 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಾಗಲಿದ್ದಾರೆ. ಹಾಗೆಯೇ, 65 ಆಟಗಾರರು 50 ಲಕ್ಷ ರೂ ಮೂಲ ಬೆಲೆ ಹೊಂದಿದ್ದಾರೆ. ಇದರಲ್ಲಿ 13 ಆಟಗಾರರು ಭಾರತೀಯರು ಮತ್ತು 52 ಆಟಗಾರರ ವಿದೇಶಿಯರಾಗಿದ್ದಾರೆ.

292 ಆಟಗಾರರ ಕಿರುಪಟ್ಟಿಯಲ್ಲಿ 164 ಭಾರತೀಯ ಹೆಸರುಗಳು.. 292 ಆಟಗಾರರ ಕಿರುಪಟ್ಟಿಯಲ್ಲಿ ಒಟ್ಟು 164 ಭಾರತೀಯ ಮತ್ತು 125 ವಿದೇಶಿ ಆಟಗಾರರು ಹಾಗೂ ನೆರೆಯ ರಾಷ್ಟ್ರಗಳ 3 ಆಟಗಾರರು ಈ ಹರಾಜಿನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಐಪಿಎಲ್ 2021 ರ ಹರಾಜು ಫೆಬ್ರವರಿ 18 ರಂದು ಮಧ್ಯಾಹ್ನ 3 ಗಂಟೆಗೆ ಚೆನ್ನೈನಲ್ಲಿ ಪ್ರಾರಂಭವಾಗಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಹರಾಜಿನಲ್ಲಿ ಬಿಡ್ಡಿಂಗ್ ಮಾಡಲು ಹೆಚ್ಚಿನ ಹಣವನ್ನು ಹೊಂದಿದೆ. ಅದರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚಿನ ಹಣ ಉಳಿದಿದೆ.

IPL 2021: ಐಪಿಎಲ್ 2021 ಸೀಸನ್​ ನಂತರ ಧೋನಿ ಸೇರಿ ಹಲವು ಆಟಗಾರರು ತೆರೆಮರೆಗೆ?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ