IPL 2021: ಐಪಿಎಲ್ 2021 ಸೀಸನ್​ ನಂತರ ಧೋನಿ ಸೇರಿ ಹಲವು ಆಟಗಾರರು ತೆರೆಮರೆಗೆ?

IPL 2021 Auction: ಐಪಿಎಲ್ 2021 ಸೀಸನ್​ನಲ್ಲಿ ಕೆಲ ಯುವ ಆಟಗಾರರ ಪದಾರ್ಪಣೆ ಮತ್ತು ಕೆಲವರ ಕಮ್​ಬ್ಯಾಕ್​ಗೂ ಅವಕಾಶವಿದೆ. ಎಂ.ಎಸ್.ಧೋನಿಯಂಥ ಹಲವು ಹಿರಿಯ ಆಟಗಾರರಿಗೆ ಇದೇ ಕೊನೆಯ ಐಪಿಎಲ್ ಸೀಸನ್ ಆಗುವ ಸಾಧ್ಯತೆಯೂ ಇದೆ.

IPL 2021: ಐಪಿಎಲ್ 2021 ಸೀಸನ್​ ನಂತರ ಧೋನಿ ಸೇರಿ ಹಲವು ಆಟಗಾರರು ತೆರೆಮರೆಗೆ?
ಸಿಎಸ್​ಕೆ ನಾಯಕ ಧೋನಿ 2008 ರಲ್ಲಿ ತಂಡದ ಪರ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2021 | 8:11 PM

ಯುನೈಟೆಡ್ ಆರಬ್ ಎಮಿರೇಟ್ಸ್​ನ ಮೂರು ನಗರಗಳಲ್ಲಿ ಕಳೆದ ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಇಂಡಿಯನ್ ಪ್ರಿಮೀಯರ್​ ಲೀಗ್​ನ 13ನೇ ಅವೃತ್ತಿ ಆಯೋಜಿಸಲ್ಪಪಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಅದರ ಮುಂದಿನ ಅಂದರೆ 14ನೇ ಅವೃತ್ತಿಯು ಭಾರತದಲ್ಲೇ ಏಪ್ರಿಲ್-ಮೇ ತಿಂಗಳುಗಳಲ್ಲಿ ನಡೆಯಲಿದೆ. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮಗ ಆರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ಸೀಸನ್ ಆಡಬಹುದೇ ಎನ್ನುವುದು ಕ್ರಿಕೆಟ್​ ವಲಯಗಳಲ್ಲಿ ಈಗ ಅತಿಹೆಚ್ಚು ಚರ್ಚೆಯಲ್ಲಿರುವ ಸಂಗತಿ.

ಹಾಗೆ ನೋಡಿದರೆ, ಐಪಿಎಲ್ 2021 ಸೀಸನ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವ ಲಕ್ಷಣಗಳಿವೆ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯಿಂದ ನಿಷೇಧಕ್ಕೊಳಗಾಗಿದ್ದ ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಐಪಿಎಲ್ 2021-ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಕೆಲ ಯುವ ಆಟಗಾರರ ಪದಾರ್ಪಣೆ ಮತ್ತು ಕೆಲವರ ಕಮ್​ಬ್ಯಾಕ್​ಗೂ ಈ ಸೀಸನ್​ನಲ್ಲಿ ಅವಕಾಶವಿದೆ. ಹಾಗೆಯೇ, ಎಂ.ಎಸ್.ಧೋನಿಯಂಥ ಹಲವಾರು ಹಿರಿಯ ಆಟಗಾರರಿಗೆ ಇದು ಕೊನೆಯ ಐಪಿಎಲ್ ಸೀಸನ್ ಆಗುವ ಸಾಧ್ಯತೆಯೂ ಇದೆ. ಹಾಗಾದರೆ, ಈ ಲಿಸ್ಟ್​ನಲ್ಲಿರುವ ಹಿರಿಯ ಆಟಗಾರರು ಯಾರೆಂದು ನೋಡೋಣ.

ಎಂ.ಎಸ್.ಧೋನಿ ಐಪಿಎಲ್ ಸೀಸನ್-13 ನಲ್ಲಿ ಕಳಪೆ ನೀಡಿದ ಪ್ರದರ್ಶನ ಚೆನೈ ಸೂಪರ್ ಕಿಂಗ್ಸ್ ಟೀಮಿನ ನಾಯಕ ಧೋನಿಯನ್ನು ಸೀಸನ್ ಮುಗಿದಾಕ್ಷಣ ಮಾಧ್ಯಮದವರು ಕೇಳಿದ ಮೊದಲ ಪ್ರಶ್ನೆಯೆಂದರೆ, ಅದು ಅವರ ಕೊನೆಯ ಸೀಸನ್ ಆಗಿತ್ತೇ? ಆದರೆ, ಮುಗುಳುನಗುತ್ತಾ ಧೋನಿ ಹೇಳಿದ್ದೇನು ಗೊತ್ತಾ? ‘ಖಂಡಿತವಾಗಿಯೂ ಇಲ್ಲ, ನಾನು ಮುಂದಿನ ಸೀಸನ್​ನಲ್ಲಿ ಆಡುತ್ತೇನೆ’.

ಐಪಿಎಲ್​ನಲ್ಲಿ ಧೋನಿ ಇದುವರೆಗೆ ಅತಿಹೆಚ್ಚು ಸಂಭಾವನೆ ಪಡೆದಿರುವ ಆಟಗಾರ ಎಂಬುದು ನಿಜವಾದರೂ, 14ನೇ ಐಪಿಎಲ್ ಸೀಸನ್​ ನಂತರ ಅವರು ಗುಡ್​ಬೈ ಹೇಳಬಹುದು ಆಥವಾ ಹಾಗೆ ಮಾಡುವಂತೆ ಅವರ ಮೇಲೆ ಒತ್ತಡ ಬರಬಹುದು.

ಮುಂದಿನ ವರ್ಷದ ಸೀಸನ್​ಗೆ ಮೊದಲು ದೊಡ್ಡ ಪ್ರಮಾಣದ ಹರಾಜು (ಮೆಗಾ ಆಕ್ಷನ್) ನಡೆಯಲಿರುವುದರಿಂದ ಎಲ್ಲ ಫ್ರಾಂಚೈಸಿಗಳು ಹೊಸ ಟೀಮುಗಳನ್ನು ಕಟ್ಟಿಕೊಳ್ಳಲಿವೆ. 2022ರಲ್ಲಿ 40 ವಸಂತಗಳನ್ನು ಪೂರೈಸಲಿರುವ ಧೋನಿ ಸಿಎಸ್​ಕೆ ತಂಡದ ಭಾಗವಾಗಿ ಮುಂದುವರಿಯುವುದು ಬಹಳ ಕಷ್ಟ. ಹಾಗಾಗಿ ಈ ಕ್ಲಬ್​ ಜೊತೆ ಒಬ್ಬ ಆಟಗಾರನಾಗಿ ಅವರ ಕರೀಯರ್​ ಕೊನೆಗೊಳ್ಳಬಹುದು. ಆದರೆ ಫ್ರಾಂಚೈಸಿ ಧೋನಿಯನ್ನು ಮೆಂಟರ್​ ಆಗಿ ಇಲ್ಲವೆ ಬೇರಿನ್ಯಾವುದೇ ಸಾಮರ್ಥ್ಯದಲ್ಲಿ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ ಅವರು ಎಲ್ಲ ಫಾರ್ಮಾಟ್​ನ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.

ಹರ್​ಭಜನ್ ಸಿಂಗ್

ಹರ್​ಭಜನ್ ಸಿಂಗ್ 2021ರ ಸೀಸನ್ ಹರಾಜಿನಲ್ಲಿ ಆಫ್-ಸ್ಪಿನ್ನರ್ ಹರ್​ಭಜನ್ ಸಿಂಗ್ ಅವರನ್ನುಯಾವುದೇ ಫ್ರಾಂಚೈಸಿ ಆರಿಸಿಕೊಳ್ಳದಿದ್ದರೆ ಮುಂದಿನ ಸೀಸನ್​ನ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ಮೊದಲೇ 41 ವರ್ಷ ವಯಸ್ಸಿನ ಭಜ್ಜೀ ಐಪಿಎಲ್​ನಿಂದ ನಿವೃತ್ತಿಯನ್ನು ಘೋಷಿಸಬಹುದು. ಸಾಮಾನ್ಯವಾಗಿ ವಯಸ್ಸಾದ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕುವುದಿಲ್ಲ. ಅಲ್ಲದೆ, 2019ರ ಐಪಿಎಲ್ ಸೀಸನ್​ ನಂತರ ಭಜ್ಜಿ ಯಾವುದೇ ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಆಡಿಲ್ಲ. ಹೆಚ್ಚಿನ ಸಮಯವನ್ನು ಕಾಮೆಂಟರಿ ಕಮಿಟ್​ಮೆಂಟ್​​ಗಳಿಗೆ ವಿನಿಯೋಗಿಸುತ್ತಿರುವ ಅವರನ್ನು ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಆಯ್ಕೆ ಮಾಡಿಕೊಳ್ಳಲು ಇಷ್ಟಪಡಲಿಕ್ಕಿಲ್ಲ.

ಕ್ರಿಸ್ ಗೇಲ್

ಕ್ರಿಸ್ ಗೇಲ್ ಕ್ರಿಸ್ ಗೇಲ್ ನಿಸ್ಸಂದೇಹವಾಗಿ ಐಪಿಎಲ್​ನ ಅತ್ಯಂತ ಜನಪ್ರಿಯ ಆಟಗಾರ, ಕಳೆದ ಸೀಸನ್​ನಲ್ಲಿ ಅವರು ಕಿಂಗ್ಸ್ ಎಲೆವೆನ್ ತಂಡದ ಪರ ರನ್​ ಗಳಿಸಿದರೂ ಅವರಿಗೀಗ 42ರ ಪ್ರಾಯವಾಗಿರುವುದರಿಂದ 2022ರ ಮೆಗಾ ಹರಾಜಿನಲ್ಲಿ ಅವರು ಬಿಕರಿಯಾಗದಿರಬಹುದು. ಮೆಗಾ ಹರಾಜಿನಲ್ಲಿ ಭಾಗವಹಿಸುವ ಫ್ರಾಂಚೈಸಿಗಳ ಉದ್ದೇಶ ಮುಂದಿನ ಮೂರು ವರ್ಷಗಳ ಅವಧಿಗೆ ಟೀಮನ್ನು ಕಟ್ಟುವ ಯೋಜನೆಯಾಗಿರುತ್ತದೆ. ಹಿಂದೊಮ್ಮೆ ಒಂದು ಸೀಸನ್​ನಲ್ಲಿ ಅವರ ಬಿಕರಿಯಾಗದೆ ಉಳಿದಿದ್ದು ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು. 2018ರಲ್ಲೂ ಅವರ ಹೆಸರು ಮೂರನೇ ಬಾರಿಗೆ ಹರಾಜು ಪ್ರಕ್ರಿಯೆಗೆ ಬಂದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಅವರನ್ನು ಖರೀದಿಸಿತ್ತು.

ಅಂಬಟಿ ರಾಯುಡು

ಅಂಬಟಿ ರಾಯುಡು ಮುಂದಿನ ಅಂದರೆ 2021 ರ ಐಪಿಎಲ್ ಸೀಸನ್​ ನಂತರ ಸಿಎಸ್​ಕೆ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಡುವುದನ್ನು ಮುಂದುವರಿಸಬೇಕೇ ಇಲ್ಲವೇ ಎನ್ನುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. 2019ರಲ್ಲೇ ಹೈದರಾಬಾದಿನ ಈ ಆಟಗಾರ ಎಲ್ಲ ಬಗೆಯ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2022ರ ಮೆಗಾ ಹರಾಜಿನಲ್ಲಿ ಸಿಎಸ್​ಕೆ ಆಗಲೀ ಅಥವಾ ಇನ್ಯಾವುದೇ ಫ್ರಾಂಚೈಸಿಯಾಗಲಿ ರಾಯುಡು ಅವರನ್ನೂ ಆಯ್ಕೆಗೆ ಪರಿಗಣಿಸಲಿಕ್ಕಲ್ಲ. ಹಾಗಾಗಿ ಅವರು ಈ ಸೀಸನ್ ಮುಗಿದ ನಂತರ ಐಪಿಎಲ್​ಗೂ ಗುಡ್​ಬೈ ಹೇಳಿದರೆ, ಆಶ್ಚರ್ಯಪಡಬೇಕಿಲ್ಲ.

IPL Auction 2021: ಐಪಿಎಲ್​ ಹರಾಜಿಗೆ ನೋಂದಣಿಯಾದ ಅರ್ಜುನ್​ ತೆಂಡೂಲ್ಕರ್.. ಯಾವ ತಂಡ ತೆಗೆದುಕೊಳ್ಳಲಿದೆ?