Virat Kohli performance | ಕೊಹ್ಲಿ ಬ್ಯಾಟ್​ ಸದ್ದು ಮಾಡ್ತಿಲ್ಲ! ಕ್ಯಾಪ್ಟನ್​ ಕೊಹ್ಲಿಯ ಆ ಅಗ್ರೇಸಿವ್​ನೆಸ್​ ಡಿಕ್ರೀಸ್​ ಆಗಿದೆ!! ಕೊಹ್ಲಿ ಒತ್ತಡದಲ್ಲಿದ್ದರಾ?

Virat Kohli poor performance ಕಳೆದ 20 ಇನ್ನಿಂಗ್ಸ್​ಗಳಿಂದ ಕೊಹ್ಲಿಯ ಬ್ಯಾಟ್​ನಿಂದ ಯಾವುದೇ ಶತಕಗಳು ಸಿಡಿದಿಲ್ಲ ಎಂಬುದು ಕೊಹ್ಲಿಯ ನಿರಸ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

Virat Kohli performance | ಕೊಹ್ಲಿ ಬ್ಯಾಟ್​ ಸದ್ದು ಮಾಡ್ತಿಲ್ಲ! ಕ್ಯಾಪ್ಟನ್​ ಕೊಹ್ಲಿಯ ಆ ಅಗ್ರೇಸಿವ್​ನೆಸ್​ ಡಿಕ್ರೀಸ್​ ಆಗಿದೆ!! ಕೊಹ್ಲಿ ಒತ್ತಡದಲ್ಲಿದ್ದರಾ?
ವಿರಾಟ್​ ಕೊಹ್ಲಿ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Feb 09, 2021 | 5:02 PM

ಕ್ರಿಕೆಟ್..​ ಪ್ರಪಂಚದ ಜಂಟಲ್​ಮನ್​ ಗೇಮ್​. ಈ ಆಟದಲ್ಲಿರುವ ಶಿಸ್ತುಬದ್ದ ನಿಯಮಗಳಿಂದಲೇ ಅದು ಕ್ರೀಡಾ ಜಗತ್ತಿನ ಉತ್ತುಂಗದಲ್ಲಿದೆ. ಕ್ರಿಕೆಟ್​ನಲ್ಲಿ ನೂರಾರು ಆಟಗಾರರು ಸಾಧನೆಯ ಶಿಖರವನ್ನೇರಿ, ಇಂದು ಸಹ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಈಗ ಈ ಸ್ಥಾನಕ್ಕೆ ಟೀಂ ಇಂಡಿಯಾ ನಾಯಕ ಕೊಹ್ಲಿ ಸಹ ಸೇರ್ಪಡೆಗೊಂಡಿದ್ದಾರೆ. ಕಿಂಗ್​ ಕೊಹ್ಲಿಗೆ ಈ ಸ್ಥಾನ ಸುಮ್ಮನೆ ಸಿಕ್ಕಿದ್ದಲ್ಲ. ಅತೀ ಚಿಕ್ಕ ವಯಸ್ಸಿನಲ್ಲೇ ಕೊಹ್ಲಿ, ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ಛಲಗಾರ. ಕೊಹ್ಲಿ ಬ್ಯಾಟಿಂಗ್​ನಲ್ಲಿದ್ದರೆ ಅದೆಂತಹುದೇ ರನ್​ ಇದ್ದರೂ, ಅದನ್ನು ಬೆನ್ನಟ್ಟಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಕಿಂಗ್​ ಕೊಹ್ಲಿಗಿದೆ. Captain Virat Kohli performance.

ಆದರೆ.. ಇತ್ತೀಚಿನ ದಿನಗಳಲ್ಲಿ ಕೊಹ್ಲಿಯ ಬ್ಯಾಟ್​ ಸದ್ದು ಮಾಡುತ್ತಿಲ್ಲ. ಕೊಹ್ಲಿಯ ಆ ಅಗ್ರೇಸಿವ್​ನೆಸ್​ ಕಡಿಮೆಯಾಗಿದೆ. ಎದುರಾಳಿ ಬೌಲರ್​ಗಳ ಮೇಲೆ ಮುರಿದು ಬೀಳುತ್ತಿದ ಕೊಹ್ಲಿ ಚಾರ್ಮ್​ ಕಡಿಮೆಯಾಗಿದೆ. ಕೊಹ್ಲಿ ಮೈದಾನದಲ್ಲಿದ್ದರೆ ಗೆಲುವು ಟೀಂ ಇಂಡಿಯಾದ್ದೆ ಅಂದುಕೊಳ್ಳುತ್ತಿದ್ದ ಕಾಲ ಈಗ ಕಣ್ಮರೆಯಾಗಿದೆ. ಬ್ಯಾಟಿಂಗ್​ಗೆ ಬರುವ ಕೊಹ್ಲಿ ಬೃಹತ್​ ಇನ್ನಿಂಗ್ಸ್ ಕಟ್ಟಲು ವಿಫಲರಾಗಿ ಬಹುಬೇಗನೇ ತಮ್ಮ ವಿಕೆಟ್​ ಒಪ್ಪಿಸುತ್ತಿದ್ದಾರೆ.

ಕೊಹ್ಲಿ ಒತ್ತಡದಲ್ಲಿದ್ದರಾ? ಕೊಹ್ಲಿ ಶತಕ ಬಾರಿಸಿ ಸಂಭ್ರಮಿಸುವ ರೀತಿಯನ್ನು ಕಣ್ತುಂಬಿಕೊಳ್ಳುವುದೆ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ. ಆದರೆ ಇತ್ತೀಚಿನ ದಿನಗಳಲ್ಲಿ ಕೊಹ್ಲಿಯ ಬ್ಯಾಟ್​ ಆಗಸ ನೋಡುತ್ತಿಲ್ಲ. ಅಭಿಮಾನಿಗಳನ್ನು ಹುಚ್ಚೇಬ್ಬಿಸುವ ಕೊಹ್ಲಿಯ ಆ ಕವರ್​ ಡ್ರೈವ್​ ಮೈದಾನದಲ್ಲಿ ನಾಪತ್ತೆಯಾಗಿದೆ. ಹೀಗಾಗಿ ಕೊಹ್ಲಿ ಒತ್ತಡದಲ್ಲಿದ್ದರಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕ್ರಿಕೆಟ್​ನ 3 ಫಾರ್ಮೆಟ್​ಗಳನ್ನು ನಿಭಾಯಿಸಲು ಕೊಹ್ಲಿಗೆ ಸಾಧ್ಯವಾಗುತ್ತಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನಸ್ಸಲ್ಲಿ ಮೂಡಿವೆ. ಧೋನಿಯ ವಿದಾಯದ ನಂತರ, ನಾಯಕತ್ವ ವಹಿಸಿಕೊಂಡ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಐಸಿಸಿ ನಡೆಸಿಕೊಡುವ ಯಾವೊಂದು ಸರಣಿಯಲ್ಲೂ ಜಯ ಸಾಧಿಸಿಲ್ಲ ಎಂಬುದು ಇದಕ್ಕೆ ಪೂರಕವಾಗಿದೆ.

ಅಂಕಿ- ಅಂಶಗಳು ಹೇಳುವುದೇನು? ಟೆಸ್ಟ್​ನಲ್ಲಿ ಕೊಹ್ಲಿ ಆಟ.. ಅಂಕಿ- ಅಂಶಗಳನ್ನೇ ಗಮನಿಸಿ ನೋಡಿದರೆ, ಕೊಹ್ಲಿ ಹಿಂದಿನ ಆಟವನ್ನು ಈಗ ಮರೆತಿದ್ದಾರೆ ಎಂಬುದು ಸಾಬೀತಾಗುತ್ತದೆ. 2020 ರಲ್ಲಿ 6 ಇನ್ನಿಂಗ್ಸ್ ಆಡಿರುವ ಕೊಹ್ಲಿ 19.3 ಸರಾಸರಿಯಲ್ಲಿ ಕೇವಲ 116 ರನ್​ ಗಳಿಸಿದ್ದಾರೆ. ಇದರಲ್ಲಿ ಕೇವಲ 1 ಅರ್ಧ ಶತಕ ಸೇರಿದೆ. ಜೊತೆಗೆ ಮೈದಾನದಲ್ಲಿ ಹೆಚ್ಚು ಹೊತ್ತು ನಿಲ್ಲದ ಕೊಹ್ಲಿ 6 ಇನ್ನಿಂಗ್ಸ್​ಗಳಲ್ಲಿ ಕೇವಲ 283 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೇ ಬಹುಮುಖ್ಯವಾಗಿ ಕಳೆದ 20 ಇನ್ನಿಂಗ್ಸ್​ಗಳಿಂದ ಕೊಹ್ಲಿಯ ಬ್ಯಾಟ್​ನಿಂದ ಯಾವುದೇ ಶತಕಗಳು ಸಿಡಿದಿಲ್ಲ ಎಂಬುದು ಕೊಹ್ಲಿಯ ನಿರಸ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಏಕದಿನ ಪಂದ್ಯಗಳನ್ನ ನೋಡುವುದಾದರೆ.. 2020 ರಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಕೊಹ್ಲಿ ಕೇವಲ 9 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ 2018 ಹಾಗೂ 2019 ರ ಅಂಕಿ ಅಂಶಗಳನ್ನು ಪರಿಶೀಲಿಸುವುದಾದರೆ, 2018 ರಲ್ಲಿ 14 ಪಂದ್ಯಗಳನ್ನಾಡಿರುವ ಕೊಹ್ಲಿ 133.6 ಸರಾಸರಿಯಲ್ಲಿ ಬರೋಬ್ಬರಿ 1202 ರನ್​ ಗಳಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 3 ಅರ್ಧಶತಕ ಕೂಡ ಸೇರಿವೆ. ಅದೇ 2019 ರ ಅಂಕಿ ಅಂಶ ನೋಡುವುದಾದರೆ, 25 ಪಂದ್ಯಗಳನ್ನಾಡಿರುವ ಕೊಹ್ಲಿ 59.9 ಸರಾಸರಿಯಲ್ಲಿ 1377 ರನ್​ ಬಾರಿಸಿದ್ದಾರೆ. ಈ ಅಂಕಿಅಂಶದಲ್ಲೇ ತಿಳಿಯುತ್ತದೆ ಕೊಹ್ಲಿಯ ಪ್ರದರ್ಶನ ಕೇವಲ ಒಂದು ವರ್ಷದಲ್ಲಿ ಎಷ್ಟೇಲ್ಲಾ ಕಡಿಮೆಯಾಗಿದೆ ಎಂಬುದು.

ಟಿ20 ಯಲ್ಲಿ ಕೊಹ್ಲಿ ಪ್ರದರ್ಶನ.. 2019 ರಲ್ಲಿ 10 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 77.7 ಸರಾಸರಿಯಲ್ಲಿ 466 ರನ್​ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಅದೇ 2020 ರಲ್ಲಿ 9 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 36.9 ಸರಾಸರಿಯಲ್ಲಿ 295 ರನ್​ ಗಳಿಸಿದ್ದಾರೆ. ಇದರಲ್ಲಿಸೇರಿರುವುದು ಕೇವಲ 1 ಅರ್ಧಶತಕವಷ್ಟೇ. ಟಿ20ಯಲ್ಲಿ ಕೊಹ್ಲಿ ಸಾಧನೆ ತೀರಾ ಕಡಿಮೆಯಾಗದೆ ಇರಬಹುದು. ಆದರೆ ಕೊಹ್ಲಿಯ ಸಾಮಥ್ರ್ಯಕ್ಕೆ ಇದು ಸರಿಹೋಗುವುದಲ್ಲ.

ರಹಾನೆ ಮೇಲೆ ಬೌಲರ್​ಗಳ ಒಲವು.. ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಕೊಹ್ಲಿ ಪಿತೃತ್ವ ರಜೆ ಮೇಲೆ ಭಾರತಕ್ಕೆ ವಾಪಾಸ್ಸಾದ ನಂತರ ರಹಾನೆಗೆ ನಾಯಕತ್ವದ ಪಟ್ಟ ಕಟ್ಟಲಾಯಿತು. ಅಂದು ಟೀಂ ಇಂಡಿಯಾ ವೇಗಿ ಇಶಾಂತ್​ ಶರ್ಮ ರಹಾನೆಯನ್ನು ಬೌಲರ್​ಗಳ ನಾಯಕ ಎಂದು ಹೋಗಳಿದ್ದರು. ಹಾಗಿದ್ದರೆ ಕೊಹ್ಲಿಯ ಮೇಲೆ ಬೌಲರ್​ಗಳಿಗೆ ಅಸಮಾದಾನ ಇರುವುದು ನಿಜವಾ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಅಲ್ಲದೆ ಮೈದಾನದಲ್ಲಿ ಬೌಲರ್​ಗಳು, ಎದುರಾಳಿ ತಂಡದ ದಾಂಡಿಗರಿಂದ ಎಷ್ಟೇ ದಂಡನೆಗೆ ಒಳಪಟ್ಟರು ನಾಯಕ ಕೊಹ್ಲಿ, ಬೌಲರ್​ಗಳ ಬಳಿ ತೆರಳಿ ಮಾತಾನಾಡುವುದು ತೀರ ಕಡಿಮೆ. ಹೀಗಾಗಿ ಕೊಹ್ಲಿ ಈ ವಿಚಾರದಲ್ಲಿ ಕೊಂಚ ಬದಲಾಗುವುದು ತೀರ ಅಗತ್ಯವಿದೆ.

ಟೀಂ ಇಂಡಿಯಾದಲ್ಲಿ ನಾಯಕತ್ವಕ್ಕಾಗಿ ಪೈಪೋಟಿ? ಆಸಿಸ್​ ನಾಡಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ ರಹಾನೆ, ವಿದೇಶಿ ನೆಲದಲ್ಲೂ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸಿ ತಂಡದ ಗೆಲುವಿಗೆ ಶ್ರಮಿಸಿದರು. ಆದರೆ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ರಹಾನೆ ಸಾಧನೆ ಶೂನ್ಯ. ಎರಡು ಇನ್ನಿಂಗ್ಸ್​ನಲ್ಲೂ ರಹಾನೆ ಗಳಿಸಿದ್ದು ಶೂನ್ಯ. ಹೀಗಾಗಿ ನಾಯಕತ್ವದ ವಿಚಾರದಲ್ಲಿ ರಹಾನೆ ಹಾಗೂ ಕೊಹ್ಲಿ ಮಧ್ಯೆ ಶೀತಲ ಸಮರ ಏರ್ಪಟ್ಟಿರುವುದು ನಿಜನಾ ಎಂಬ ಅನುಮಾನ ಶುರುವಾಗಿದೆ.

ನಾಯಕತ್ವದ ಬದಲಾವಣೆಯಿಂದ ಕೊಹ್ಲಿಯಲ್ಲಿ ಬದಲಾವಣೆ ಕಾಣಬಹುದಾ?​ ಟೀಂ ಇಂಡಿಯಾದ 3 ಫಾರ್ಮೆಟ್​ಗಳನ್ನು ನಾಯಕನಾಗಿ ಕೊಹ್ಲಿ ಮುನ್ನಡೆಸುತ್ತಿದ್ದಾರೆ.ಎಲ್ಲಾ ಆವೃತ್ತಿಗಳಲ್ಲೂ ತಂಡ ಗೆಲ್ಲುತ್ತಾ ಸಾಗಿದರೆ ಕೊಹ್ಲಿಗೂ ಸಹ ಯಾವುದೇ ಒತ್ತಡಗಳಿಲ್ಲದೆ ತಮ್ಮ ಆಟ ಆಡುತ್ತಾ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಸಾಗುತ್ತಾರೆ. ಆದರೆ ತವರಿನ ಸರಣಿಗಳಲ್ಲಿ ತಂಡ ಸೋಲುತ್ತಾ ಬರುತ್ತಿರುವುದು ಕೊಹ್ಲಿಯ ಆಟಕ್ಕೆ ದೊಡ್ಡ ಹೊಡೆತ ಕೊಡುತ್ತಾ ಬರುತ್ತಿದೆ. ಹೀಗಾಗಿ ಒಂದು ಆವೃತ್ತಿಯಿಂದ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಆತನ ಆಟಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವುದು ಈಗ ಆಗಬೇಕಿರುವ ಅಗತ್ಯವಾದ ಕೆಲಸವಾಗಿದೆ.

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!