India vs England Test Series: ಇಂಗ್ಲೆಂಡ್ ಟೀಮಿನ ರಕ್ಷಣಾತ್ಮಕ ಧೋರಣೆ ಶೇನ್ ವಾರ್ನ್​ರಲ್ಲಿ ಸೋಜಿಗ ಹುಟ್ಟಿಸಿದೆ

ಪಂದ್ಯದ ನಾಲ್ಕನೇ ದಿನ ಭಾರತವನ್ನು 337 ರನ್​ಗಳಿಗೆ ಔಟ್ ಮಾಡಿದ ಇಂಗ್ಲೆಂಡ್, ಫಾಲೋ ಆನ್​ ಹೇರದೆ, ಎರಡನೆ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಲು ನಿರ್ಧರಿಸಿತು. ಇನ್ನಿಂಗ್ಸ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಪ್ರವಾಸಿಗರು ಒತ್ತಡಕ್ಕೆ ಸಿಲುಕಿ ರಕ್ಷಣಾತ್ಮಕ ಧೋರಣೆಯನ್ನು ಅನುಸರಿಸಿದರು ಅಂತ ವಾರ್ನ್ ಹೇಳಿದ್ದಾರೆ.

India vs England Test Series: ಇಂಗ್ಲೆಂಡ್ ಟೀಮಿನ ರಕ್ಷಣಾತ್ಮಕ ಧೋರಣೆ ಶೇನ್ ವಾರ್ನ್​ರಲ್ಲಿ ಸೋಜಿಗ ಹುಟ್ಟಿಸಿದೆ
ಶೇನ್ ವಾರ್ನ್​ ಹೆಸರಿಸಿದ ಸಾರ್ವಕಾಲಿಕ ಟಾಪ್ 10 ವೇಗಿಗಳ ಪಟ್ಟಿ ಹೀಗಿದೆ.
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 08, 2021 | 10:28 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಂಗ್ಲರ ರಕ್ಷಣಾತ್ಮಕ ಧೋರಣೆ ಕ್ರಿಕೆಟ್ ದಂತಕಥೆ ಶೇನ್ ವಾರ್ನ್​ರನ್ನು ಚಕಿತಗೊಳಿಸಿದೆ. 241ರನ್​ಗಳ ಮೊದಲ ಇನ್ನಿಂಗ್ಸ್ ಪಡೆದ ನಂತರ ಜೋ ರೋಟ್ ತಂಡ ಕ್ಷಿಪ್ರಗತಿಯಲ್ಲಿ ರನ್​ ಗಳಿಸಿ ಬಾರತದ ಎದುರು ಒಂದು ದೊಡ್ಡ ಮೊತ್ತದ ಸವಾಲನ್ನಿಟ್ಟು ಡಿಕ್ಲೇರ್ ಮಾಡಿಕೊಳ್ಳಬೇಕಿತ್ತು. ಆದರೆ ಅವರು ಹಾಗೆ ಮಾಡದೆ ರಕ್ಷಣಾತ್ಮಕ ಧೋರಣೆ ಅನುಸರಿಸಿದರು. ಅವರ ಮೂಲ ಉದ್ದೇಶ ಪಂದ್ಯವನ್ನು ಸೋಲಬಾರದು ಎನ್ನುವುದಾಗಿತ್ತು ಎಂದು ವಾರ್ನ್ ಹೇಳಿದ್ದಾರೆ.

ಪಂದ್ಯದ ನಾಲ್ಕನೇ ದಿನವಾಗಿದ್ದ ಸೋಮವಾರ ಭಾರತವನ್ನು 337 ರನ್​ಗಳಿಗೆ ಔಟ್ ಮಾಡಿದ ಇಂಗ್ಲೆಂಡ್, ಫಾಲೋ ಆನ್​ ಹೇರದೆ, ಎರಡನೆ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಲು ನಿರ್ಧರಿಸಿತು. ಇನ್ನಿಂಗ್ಸ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಪ್ರವಾಸಿಗರು ಒತ್ತಡಕ್ಕೆ ಸಿಲುಕಿ ರಕ್ಷಣಾತ್ಮಕ ಧೋರಣೆಯನ್ನು ಅನುಸರಿಸಿದರು ಅಂತ ವಾರ್ನ್ ಹೇಳಿದ್ದಾರೆ.

ಭಾರತದ ಬೌಲರ್​ಗಳು ಸಹ ಉತ್ಕೃಷ್ಟಮಟ್ಟದ ಬೌಲಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡನ್ನು ಕೇವಲ 178 ರನ್​ಗಳಿಗೆ ಆಲೌಟ್ ಮಾಡಿದರು. ಗೆಲ್ಲಲು 420 ರನ್​ ಗಳಿಸಬೇಕಿರುವ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದು ದಿನದಾಟ ಮುಗಿದಾಗ ಓಪನರ್ ರೋಹಿತ್ ಶರ್ಮ ಅವರ ವಿಕೆಟ್​ ಕಳೆದುಕೊಂಡು 39ರನ್ ಗಳಿಸಿದೆ.

ಇಂಗ್ಲೆಂಡ್ ತಂಡದ ಅಪ್ರೋಚ್ ವಾರ್ನ್​ರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಅವರು ಹೇಳುವಂತೆ ಲೀಡ್ 400 ರನ್ ತಲುಪಿದಾಕ್ಷಣ ರೂಟ್ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಳ್ಳಬೇಕಿತ್ತು. ಸರಣಿ ಟ್ವೀಟ್​ಗಳ ಮೂಲಕ ಅವರು ಭಾರತದ ವಿರುದ್ಧ ಆಸ್ಟ್ರೇಲಿಯಾ ಅನುಸರಿಸಿದ ರಕ್ಷಣಾತ್ಮಕ ಧೋರಣೆಯನ್ನೇ ಇಂಗ್ಲೆಂಡ್ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್​ ವಿಕೆಟ್​ ಪತನವನ್ನು ಸಂಭ್ರಮಿಸುತ್ತಿರುವ ಟೀಮ್ ಇಂಡಿಯಾ ಆಟಗಾರರು

ಈ ಟೆಸ್ಟ್​ ಗೆಲ್ಲಲು ನಮಗೆಷ್ಟು ರನ್​ಗಳ ಲೀಡಿನ ಅವಶ್ಯಕತೆಯಿದೆ ಮತ್ತು ಮತ್ತು ಎಷ್ಟು ಓವರ್​ಗಳಲ್ಲಿ ಇಂಡಿಯನ್ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಬಹುದು ಅಂತ ಲೆಕ್ಕಾಚಾರ ಮಾಡುವ ಬದಲು, ಇಂಗ್ಲೆಂಡ್ ತಂಡ ಈ ಟೆಸ್ಟ್ ಸೋಲಬಾರದೆಂಬ ಮನಸ್ಥಿತಿಯೊಂದಿಗೆ ಆಡುತ್ತಿದೆ. ನಾಲ್ಕನೇ ದಿನ ಸುದೀರ್ಘ ಅವಧಿಯವರೆಗೆ ಬ್ಯಾಟ್​ ಮಾಡಿದ್ದು ಅವರ ಬೌಲರ್​ಗಳ ಮೇಲೆ ಒತ್ತಡವನ್ನು ಹೇರಲಿದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ, ಇಂಗ್ಲೆಂಡ್ ಮಾಜಿ ಆಟಗಾರ ಮೈಕೆಲ್ ವಾನ್ ಅವರ ಟ್ವೀಟೊಂದಕ್ಕೆ ಉತ್ತರಿಸಿರುವ ವಾರ್ನ್​, ಆಸ್ಟ್ರೇಲಿಯಾದಲ್ಲಿ ಇಂಡಿಯಾ ಪರಾಕ್ರಮಶಾಲಿ ಮತ್ತು ದಿಟ್ಟತನದಿಂದ ಆಡಿತು. ಅವರು ತೋರಿದ ಪದರ್ಶನ ಅದ್ಭುತವಾಗಿತ್ತು. ಆಸ್ಟ್ರೇಲಿಯಾ ಪುಕ್ಕಲುತನ ಮತ್ತು ಎಚ್ಚರಿಕೆಯ ಆಟವಾಡಿ ಸರಣಿ ಸೋತಿತು. ಇಂಗ್ಲೆಂಡ್ ಸಹ ಆಸ್ಟ್ರೇಲಿಯಾದಂತೆ ಎಚ್ಚರಿಕೆ ಕ್ರಿಕೆಟ್ ಆಡುತ್ತಿದೆ ಎಂದು ವಾರ್ನ್​ ಟ್ವೀಟ್ ಮಾಡಿದ್ದಾರೆ.

ಆದರೆ, ವಾಸ್ತವದಲ್ಲಿ ರೂಟ್ ಆಕ್ರಮಣಕಾರಿ ಆಟವಾಡಿ 32 ಎಸೆತಗಳಲ್ಲಿ 40 ರನ್ ಬಾರಿಸಿದರು. ಚೆನೈನ ಈ ಪಿಚ್​ನಲ್ಲಿ ಚೆಂಡು ಬಹಳ ಸ್ಪಿನ್​ ಆಗುತ್ತಿರುವುದರಿಂದ ಕೊನೆಯ ದಿನದ 90 ಓವರ್​ಗಳಲ್ಲಿ ಭಾರತದ ಬ್ಯಾಟ್ಸ್​ಮನ್​ಗಳನ್ನು ಔಟ್​ಮಾಡಬಹುದೆಂದು ಅವರು ಭಾವಿಸಿರಬಹುದು. ಇಂಗ್ಲೆಂಡ್ ಸ್ಪಿನ್ನರ್​ಗಳು-ಜಾಕ್ ಲೀಚ್ ಮತ್ತು ಡಾಮ್ ಬೆಸ್ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಪ್ರಮುಖ ಬ್ಯಾಟ್ಸ್​ಮನ್​ಗಳಿಗೆ ತೊಂದರೆ ನೀಡಿರುವುದರಿಂದ ಅವರಿಂದ ಮತ್ತೇ ಅದೇ ತೆರನಾದ ಪ್ರದರ್ಶನವನ್ನು ರೂಟ್ ನಿರೀಕ್ಷಿಸುತ್ತಿರಬಹುದು.

India vs England Test Series: ಚೆನೈ ಟೆಸ್ಟ್​ನಲ್ಲಿ 114 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

Published On - 10:23 pm, Mon, 8 February 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ