ICC award Rishabh Pant ವಿಕೆಟ್​ ಕೀಪರ್ – ಬ್ಯಾಟ್ಸ್​ಮನ್ ರಿಷಬ್​ ಪಂತ್​ ಅದ್ಭುತ ಆಟಕ್ಕೆ ICC ಯಿಂದ ಸಿಕ್ತು ವಿಶೇಷ ಗೌರವ!

ICC prize Rishabh Pant ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲೂ ರಿಷಬ್​ ಪಂತ್​ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 91 ರನ್​ ಗಳಿಸಿದ್ದರು. Player of the Month award

ICC award Rishabh Pant ವಿಕೆಟ್​ ಕೀಪರ್ - ಬ್ಯಾಟ್ಸ್​ಮನ್ ರಿಷಬ್​ ಪಂತ್​ ಅದ್ಭುತ ಆಟಕ್ಕೆ ICC ಯಿಂದ ಸಿಕ್ತು ವಿಶೇಷ ಗೌರವ!
ರಿಶಬ್​ ಪಂತ್​
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 08, 2021 | 4:43 PM

ಕಳೆದ ಕೆಲ ಮ್ಯಾಚ್​ಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತದ ವಿಕೆಟ್​ ಕೀಪರ್​ ಹಾಗೂ ಬ್ಯಾಟ್ಸ್​ಮನ್​ ರಿಷಬ್​ ಪಂತ್​ಗೆ ಐಸಿಸಿಯ ತಿಂಗಳ ಆರಂಭಿಕ ಆಟಗಾರ ಪ್ರಶಸ್ತಿ ದೊರೆತಿದೆ. ಈ ಮೂಲಕ ಟೀಂ ಇಂಡಿಯಾಗೆ ವಿಶೇಷ ಕೊಡುಗೆ ನೀಡುತ್ತಿರುವ ರಿಷಬ್​ಗೆ ಐಸಿಸಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್​ ಮ್ಯಾಚ್​ನಲ್ಲಿ ರಿಷಬ್​ ಪಂತ್​ ಅತ್ಯದ್ಭುತ  ಪ್ರದರ್ಶನ ನೀಡಿದ್ದರು. ಸಿಡ್ನಿ ಟೆಸ್ಟ್​​ನಲ್ಲಿ 97 ಹಾಗೂ ಬ್ರಿಸ್​ಬೇನ್​​ನಲ್ಲಿ ಔಟ್​ ಆಗದೆ 89 ರನ್​ ಬಾರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಲು ಇದು ತುಂಬಾನೇ ಸಹಕಾರಿಯಾಗಿತ್ತು. ಇದನ್ನು ಗಮನಿಸಿ ಆಸ್ಟ್ರೇಲಿಯಾ ಈ ಪ್ರಶಸ್ತಿ ನೀಡಿದೆ.

ಐಸಿಸಿ ನೀಡಿದ ವಿಶೇಷ ಗೌರವ ತೆಗೆದುಕೊಂಡ ನಂತರ ಮಾತನಾಡಿರುವ ರಿಷಬ್​ ಪಂತ್​, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು ಪ್ರತಿ ಆಟಗಾರನಿಗೂ ಹೆಮ್ಮೆಯ ವಿಚಾರ. ಈ ರೀತಿ ಘಟನೆಗಳಿಂದ ಯುವ ಆಟಗಾರರಲ್ಲಿ ಹೊಸ ಚೈತನ್ಯ ಮೂಡುತ್ತದೆ. ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಮ್ಮ ತಂಡದ ಪ್ರತಿ ಆಟಗಾರನಿಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ನನಗೆ ವೋಟ್​ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ​.

ಇನ್ನು, ಇಂಗ್ಲೆಂಡ್​ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲೂ ರಿಷಬ್​ ಪಂತ್​ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 91 ರನ್​ ಗಳಿಸಿದ್ದರು.

ಐಸಿಸಿ ಪ್ರಶಸ್ತಿ ಗೆದ್ದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಐಸಿಸಿ ವೋಟಿಂಗ್​ ಅಕಾಡೆಮಿಯ ಸದಸ್ಯ ರಮೀಜ್​ ರಾಜಾ, ರಿಷಬ್​ ಪಂತ್​ ಒತ್ತಡದಲ್ಲಿ ಆಡಿದ ಸಂದರ್ಭದಲ್ಲೇ ಹೆಚ್ಚು ಅದ್ಭುತವಾಗಿ ಆಡಿದ್ದಾರೆ ಎಂದಿದ್ದಾರೆ. ಪ್ರತಿ ತಿಂಗಳಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತೆ. ಅಭಿಮಾನಿಗಳು ಹಾಗೂ ಐಸಿಸಿ ವೋಟಿಂಗ್​ ಅಕಾಡೆಮಿ ಅವರು ಮಾಡುವ ಮತಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಐಸಿಸಿ ದಶಕದ ಆಟಗಾರ ಪ್ರಶಸ್ತಿಯ ಎಲ್ಲ ಕೆಟೆಗಿರಿಗಳಿಗೆ ಕೊಹ್ಲಿ ಹೆಸರು ನಾಮಿನೇಟ್ ಅಗಿದೆ!

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ