ಐಸಿಸಿ ದಶಕದ ಆಟಗಾರ ಪ್ರಶಸ್ತಿಯ ಎಲ್ಲ ಕೆಟೆಗಿರಿಗಳಿಗೆ ಕೊಹ್ಲಿ ಹೆಸರು ನಾಮಿನೇಟ್ ಅಗಿದೆ!

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಭಾರತದ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳನ್ನು ಐಸಿಸಿ ಪುರುಷರ ದಶಕದ ಆಟಗಾರನ ಪ್ರಶಸ್ತಿಗೆ ನಾಮಿನೇಟ್ ಮಾಡಿದೆ. ಭಾರತೀಯರೆಲ್ಲ ಸಂಭ್ರಮಿಸಬೇಕಾದ ಸಂಗತಿಯೆಂದರೆ, ಕೊಹ್ಲಿ ಹೆಸರನ್ನು ಕಳೆದ 10 ವರ್ಷಗಳಲ್ಲಿ ಅವರು ಮಾಡಿರುವ ಉತ್ಕೃಷ್ಟ ಸಾಧನೆಗಳ ಆಧಾರದಲ್ಲಿ ಪುರುಷರ ಎಲ್ಲಾ ಕೆಟೆಗಿರಿಗಳ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದೆ. ಭಾರತೀಯ ಜೋಡಿಯೊಂದಿಗೆ ದಶಕದ ಆಟಗಾರನ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಇತರ ಆಟಗಾರರೆಂದರೆ ಜೊ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ […]

ಐಸಿಸಿ ದಶಕದ ಆಟಗಾರ ಪ್ರಶಸ್ತಿಯ ಎಲ್ಲ ಕೆಟೆಗಿರಿಗಳಿಗೆ ಕೊಹ್ಲಿ ಹೆಸರು ನಾಮಿನೇಟ್ ಅಗಿದೆ!
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 24, 2020 | 7:45 PM

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಭಾರತದ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳನ್ನು ಐಸಿಸಿ ಪುರುಷರ ದಶಕದ ಆಟಗಾರನ ಪ್ರಶಸ್ತಿಗೆ ನಾಮಿನೇಟ್ ಮಾಡಿದೆ. ಭಾರತೀಯರೆಲ್ಲ ಸಂಭ್ರಮಿಸಬೇಕಾದ ಸಂಗತಿಯೆಂದರೆ, ಕೊಹ್ಲಿ ಹೆಸರನ್ನು ಕಳೆದ 10 ವರ್ಷಗಳಲ್ಲಿ ಅವರು ಮಾಡಿರುವ ಉತ್ಕೃಷ್ಟ ಸಾಧನೆಗಳ ಆಧಾರದಲ್ಲಿ ಪುರುಷರ ಎಲ್ಲಾ ಕೆಟೆಗಿರಿಗಳ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದೆ.

ಭಾರತೀಯ ಜೋಡಿಯೊಂದಿಗೆ ದಶಕದ ಆಟಗಾರನ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಇತರ ಆಟಗಾರರೆಂದರೆ ಜೊ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕ) ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ.

ಪುರುಷರ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ದಶಕದ ಆಟಗಾರನ ಪ್ರಶಸ್ತಿಗೆ ಭಾರತದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರೊಂದಿಗೆ, ರೊಹಿತ್ ಶರ್ಮ, ಕೊಹ್ಲಿ, ಶ್ರೀಲಂಕಾದ

ಲಸಿತ್ ಮಲಿಂಗ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಡಿ ವಿಲಿಯರ್ಸ್ ಮತ್ತು ಸಂಗಕ್ಕಾರ ಹೆಸರುಗಳನ್ನು ನಾಮಿನೇಟ್ ಮಾಡಲಾಗಿದೆ.

ಕೊಹ್ಲಿ ಮತ್ತು ರೋಹಿತ್ ಅವರ ಹೆಸರುಗಳನ್ನು ದಶಕದ ಟಿ20 ಆಟಗಾರನ ಕೆಟೆಗಿರಿಗೂ ನಾಮಿನೇಟ್ ಮಾಡಲಾಗಿದೆ. ಈ ಪ್ರಶಸ್ತಿಗೆ ನಾಮಿನೇಟ್ ಅಗಿರುವ ಇತರ ಆಟಗಾರರೆಂದರೆ, ರಶೀದ್ ಖಾನ್ (ಅಫಘಾನಿಸ್ತಾನ), ಇಮ್ರಾನ್ ತಾಹಿರ್(ದಕ್ಷಿಣ ಆಫ್ರಿಕ), ಆರನ್ ಫಿಂಚ್ (ಆಸ್ಟ್ರೇಲಿಯ), ಮಲಿಂಗ ಮತ್ತು ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್).

ಕೊಹ್ಲಿಯವರ ಹೆಸರನ್ನು ಪುರುಷರ ದಶಕದ ಟೆಸ್ಟ್ ಆಟಗಾರ ಮತ್ತು ದಶಕದ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೂ ನಾಮಿನೇಟ್ ಮಾಡಲಾಗಿದೆ. ಅವರೊಂದಿಗೆ ಧೋನಿಯವರ ಹೆಸರು ಸಹ ಈ ಕೆಟೆಗಿರಿಯಲ್ಲಿ ನಾಮಿನೇಟ್ ಆಗಿದೆ.

ಕೊಹ್ಲಿಯವರ ಹೆಸರು ಎಲ್ಲ ಕೆಟೆಗಿರಿಯಲ್ಲಿ ನಾಮಿನೇಟ್ ಆಗಿರುವುದು ಆಶ್ಚರ್ಯವನ್ನೇನೂ ಹುಟ್ಟಿಸುವುದಿಲ್ಲ. ಯಾಕೆಂದರೆ ಕ್ರೀಡೆಯ ಮೂರು ಫಾರ್ಮಾಟ್​ಗಳಲ್ಲೂ ಅವರು 50ಕ್ಕಿಂತ ಹೆಚ್ಚು ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೆ 70 ಶತಕಗಳನ್ನು ಬಾರಿಸಿದ್ದಾರೆ. ಕೇವಲ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ (71) ಮತ್ತು ಸಚಿನ್ ತೆಂಡೂಲ್ಕರ್ (100) ಕೊಹ್ಲಿಗಿಂತ ಜಾಸ್ತಿ ಶತಕಗಳನ್ನು ದಾಖಲಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಕೆಯಲ್ಲೂ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 21,444 ರನ್ ಗಳಿಸಿದ್ದರೆ, ಪಾಂಟಿಂಗ್ 27,483 ಮತ್ತು ಸಚಿನ್ 34,357 ರನ್ ಗಳಿಸಿದ್ದಾರೆ.

ಕಳೆದ ದಶಕದಲ್ಲಿ ಕೊಹ್ಲಿ 7,000 ರನ್​ಗಳನ್ನು ಟೆಸ್ಟ್​ಗಳಲ್ಲೂ, 11,000 ಕ್ಕಿಂತ ಜಾಸ್ತಿ ರನ್​ಗಳನ್ನು ಒಡಿಐಗಳಲ್ಲೂ ಮತ್ತು 2,600 ರನ್​ಗಳನ್ನು ಟಿ20ಐ ಗಳಲ್ಲೂ ಬಾರಿಸಿದ್ದಾರೆ.

ಈ ಪ್ರಶಸ್ತಿಗಳನ್ನು ನಾಮಿನೇಟ್ ಆಗಿರುವ ಆಟಗಾರರು ಪಡೆಯುವ ವೋಟುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

Published On - 7:42 pm, Tue, 24 November 20