AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಜಾರಾ ಮತ್ತು ರಹಾನೆ ನೋಟೇಬಲ್ ಪರ್ಫಾರ್ಮರ್​ಗಳು: ವಕಾರ್ ಯೂನಿಸ್

Pakistan's former fast bowler Waqar Younis says Team India should not worry about absence of star players-Virat Kohli, Rohit Sharma and Ishant Sharma as Cheteshwar Pujara and Ajinkya Rahane are proven performers and can lift the spirit of their team members with notable performances.

ಪೂಜಾರಾ ಮತ್ತು ರಹಾನೆ ನೋಟೇಬಲ್ ಪರ್ಫಾರ್ಮರ್​ಗಳು: ವಕಾರ್ ಯೂನಿಸ್
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 25, 2020 | 6:22 PM

Share

ನಾವು ಈ ಹಿಂದೆ ಚರ್ಚಿಸಿರುವಂತೆ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನದಲ್ಲಿ ಲಕ್ಷಾಂತರ ಆಭಿಮಾನಿಗಳಿದ್ದಾರೆ. ಅಲ್ಲಿನ ಖ್ಯಾತ ಆಟಗಾರರು ಸಹ ಟೀಮ್ ಇಂಡಿಯಾದ ಆಟಗಾರರನ್ನು ಮೊದಲಿನಿಂದಲೂ ಪ್ರಶಂಸಿಸುತ್ತಾ ಬಂದಿದ್ದಾರೆ. ಜಹೀರ್ ಅಬ್ಬಾಸ್, ವಾಸಿಮ್ ಆಕ್ರಮ್, ವಕಾರ್ ಯೂನಿಸ್, ಇಂಜಮಾಮ್ ಉಲ್ ಹಕ್, ಯೂನಿಸ್ ಖಾನ್, ಆ ದೇಶದ ಈಗಿನ ಬ್ಯಾಟಿಂಗ್ ಸೆನ್ಸೇಷನ್ ಬಾಬರ್ ಆಜಂ, ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ನಾವೀಗ ಚರ್ಚಿಸುತ್ತಿರುವುದು ‘ಸುಲ್ತಾನ್ ಆಫ್ ಸ್ವಿಂಗ್’ ಎಂದು ಕರೆಸಿಕೊಳ್ಳುತ್ತಿದ್ದ ವಕಾರ್ ಯೂನಿಸ್ ಅವರು ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯಯಲಿರರುವ ಸರಣಿ ಬಗ್ಗೆ ಮಾಡಿರುವ ಟಿಪ್ಪಣಿ ಕುರಿತು. ವಕಾರ್, ತಾವು ಬಿಡುವಿನಲ್ಲಿದ್ದರೆ ಟೀಮ್ ಇಂಡಿಯಾ ಆಡುವ ಎಲ್ಲ ಪಂದ್ಯಗಳನ್ನು ವೀಕ್ಷಿಸುತ್ತಾರಂತೆ. ಯೂಟ್ಯೂಬ್ ಚಾನೆಲ್ ಒಂದರೊಂದಿಗೆ ಬುಧವಾರ ಮಾತಾಡಿರುವ ವಕಾರ್, ಡಿಸೆಂಬರ್​ನಲ್ಲಿ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿ ಕುರಿತು ಅವರು ಬಹಳ ಉತ್ಸುಕನಾಗಿರುವೆನೆಂದು ಹೇಳಿಕೊಂಡಿದ್ದಾರೆ.

‘‘ಭಾರತದ ಮೂರು ಪ್ರಮುಖ ಆಟಗಾರರು-ವಿರಾಟ್ ಕೊಹ್ಹಿ, ರೊಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರ ಸೇವೆಯನ್ನು ಇಂಡಿಯಾ ಟೀಮು ಮಿಸ್ ಮಾಡಿಕೊಳ್ಳಲಿದೆ. ವಿರಾಟ್, ಮೊದಲ ಟೆಸ್ಟ್ ಮಾತ್ರ ಆಡಿ ಸ್ವದೇಶಕ್ಕೆ ಮರಳಲಿದ್ದಾರೆ. ರೋಹಿತ್ ಮತ್ತು ಇಶಾಂತ್ ಮೊದಲೆರಡು ಟೆಸ್ಟ್​ಗಳನ್ನು ಅಡಲಾರರೆಂದು ಬಿಸಿಸಿಐ ಹೇಳಿದೆ. ಆವರು ಕೊನೆಯೆರಡು ಟೆ್ಸ್​ಗಳಿಗೂ ಲಭ್ಯರಾಗುವ ಬಗ್ಗೆ ಗ್ಯಾರಂಟಿಯಿಲ್ಲ. ಅವರ ಅನುಪಸ್ಥಿತಿ ಇಂಡಿಯಾ ಟೆಸ್ಟ್ ಸರಣಿ ಗೆಲ್ಲುವ ಪ್ರಯತ್ನದ ಮೇಲೆ ಪ್ರಭಾವ ಬೀರಲಿದೆ,’’ ಎಂದು ವಕಾರ್ ಹೇಳಿದ್ದಾರೆ.

ಆದರೆ, ಈ ತ್ರಿವಳಿಗಳ ಗೈರುಹಾಜರಿಯ ಬಗ್ಗೆ ಇಂಡಿಯನ್ ಟೀಮು ಹೆಚ್ಚು ಯೋಚಿಸಬಾರದೆಂದು ವಕಾರ್ ಸಲಹೆ ನೀಡುತ್ತಾರೆ. ಚೇತೇಶ್ವರ್ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಕ್ಲಾಸ್ ಬ್ಯಾಟ್ಸ್​ಮನ್​ಗಳೆಂದು ಹೇಳುವ ವಕಾರ್, ಈ ಜೋಡಿಯು ತಮ್ಮ ಬ್ಯಾಟಿಂಗ್ ಬಲದಿಂದ ಟೀಮಿನ ಇತರ ಆಟಗಾರರಲ್ಲಿ ಅವರು ಸ್ಫೂರ್ತಿ ತುಂಬಲಿದ್ದಾರೆ ಎನ್ನುತ್ತಾರೆ.

‘‘ವಿರಾಟ್ ಕೊಹ್ಲಿ, ರೊಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರ ಅನುಪಸ್ಥಿತಿ ಟೀಮ್ ಇಂಡಿಯಾ ಪರ್ಫರ್ಮಾನ್ಸ್ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಅವರಿಲ್ಲದೆ ಸರಣಿ ಗೆಲ್ಲುವುದು ಕಷ್ಡವಾಗಬಹುದು. ಆದರೆ, ಕೊಹ್ಲಿ ಮತ್ತು ರೋಹಿತ್ ಹೊರತಾಗಿಯೂ ಇಂಡಿಯಾ ಟೀಮಿನ ಬ್ಯಾಟಿಂಗ್ ಇಂಪ್ರೆಸ್ಸಿವ್ ಆಗಿದೆ. ಚೇತೇಶ್ವರ್ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ನೊಟೇಬಲ್ ಪರ್ಫಾರ್ಮರ್​ಗಳು. ಕಳೆದ ಸಾಲಿನಲ್ಲಿ ಪೂಜಾರಾ 500 ಕ್ಕಿಂತ ಜಾಸ್ತಿ ರನ್ ಬಾರಿಸಿದ್ದರು. ಇಂಡಿಯಾದ ಆಟಗಾರರು ಧೃತಿಗೆಡದೆ ಆಡುವ ಅವಶ್ಯತೆಯಿದೆ, ಅದನ್ನವರು ಖಂಡಿತವಾಗಿಯೂ ಮಾಡಲಿದ್ದಾರೆ,’’ ಎಂದು ವಕಾರ್ ಹೇಳಿದ್ದಾರೆ.

ಸಚಿನ್ ಅವರಂತೆ, ವಕಾರ್ ಕೂಡ, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಟೀಮಿಗೆ ಮರಳಿರುವುದು ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆಯೆಂದು ಹೇಳುತ್ತಾರೆ. ಅಲ್ಲದೆ, ಆಸ್ಸೀಗಳ ಪೇಸ್ ಆಕ್ರಮಣ ಅತ್ಯುತ್ತಮವಾಗಿದೆ ಎಂದು ಹೇಳುವ ಪಾಕಿಸ್ತಾನದ 49 ವರ್ಷ ವಯಸ್ಸಿನ ಮಾಜಿ ವೇಗಿ, ಕಳೆದ ಬಾರಿ ಸರಣಿ ಸೋತಿರುವುದರಿಂದ ಅವರು ಮತ್ತಷ್ಟು ಆಕ್ರಮಣಶೀಲತೆ ಪ್ರದರ್ಶಿಸಲಿದ್ದಾರೆ ಎಂದು ಹೇಳಿದ್ದಾರೆ.

Published On - 6:01 pm, Wed, 25 November 20

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ