ಸಾಕರ್ ಫೀಲ್ಡಿಗೆ ಗುಡ್ಬೈ ಹೇಳಿದ ಫುಟ್ಬಾಲ್ ಮಾಂತ್ರಿಕ ಡೀಗೊ ಮರಡೊನ!
ಫುಟ್ಬಾಲ್ ಮಾಂತ್ರಿಕ ಮತ್ತು 1986ರಲ್ಲಿ ಅರ್ಜೈಂಟೀನಾಗೆ ಫಿಫಾ ವಿಶ್ವ ಗೆದ್ದುಕೊಟ್ಟ ಡಿಯಾಗೊ ಮರಡೊನ ಇನ್ನು ನೆನೆಪು ಮಾತ್ರ. ಮೊನ್ನೆಯಷ್ಟೇ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಯಶಸ್ವೀ ಶಸ್ರಚಿಕಿತ್ಸೆಗೊಳಗಾಗಿದ್ದ ಮರಡೊನ ವಿಶ್ವದಾದ್ಯಂತ ಇರುವ ತಮ್ಮ ಮಿಲಿಯನ್ಗಟ್ಟಲೆ ಅಭಿಮಾನಿಗಳನ್ನು ಅಗಲಿದ್ದಾರೆ.
ಲೆಜೆಂಡರಿ ಸಾಕರ್ ಆಟಗಾರ ಪೀಲೆ ಅವರಷ್ಟು ಜನಪ್ರಿಯನಲ್ಲದಿದ್ದರೂ ಇಂಟರನೆಟ್ ಮೂಲಕ ನಡೆದ ಪಾಪ್ಯುಲಾರಿಟಿಯ ಜನಮತದಲ್ಲಿ ಬ್ರೆಜಿಲ್ ಆಟಗಾರನ್ನು ಸುಲಭವಾಗಿ ಹಿಂದಿಕ್ಕಿದ ಫುಟ್ಬಾಲ್ ಮಾಂತ್ರಿಕ ಮತ್ತು 1986ರಲ್ಲಿ ಅರ್ಜೈಂಟೀನಾಗೆ ಫಿಫಾ ವಿಶ್ವ ಗೆದ್ದುಕೊಟ್ಟ ಡಿಯಾಗೊ ಮರಡೊನ ಇನ್ನು ನೆನೆಪು ಮಾತ್ರ.
ಮೊನ್ನೆಯಷ್ಟೇ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಯಶಸ್ವೀ ಶಸ್ರಚಿಕಿತ್ಸೆಗೊಳಗಾಗಿದ್ದ ಮರಡೊನ ಇನ್ನೇನು ಚೇತರಿಸಿಕೊಂಡರು ಎನ್ನುವಷ್ಟರಲ್ಲಿ ವಿಶ್ವದಾದ್ಯಂತ ಇರುವ ತಮ್ಮ ಮಿಲಿಯನ್ಗಟ್ಟಲೆ ಅಭಿಮಾನಿಗಳನ್ನು ಅಗಲಿದ್ದಾರೆ. ಈ ಸಾಕರ್ ಸೂಪರ್ ಸ್ಟಾರ್ಗೆ 60 ವರ್ಷ ವಯಸ್ಸಾಗಿತ್ತು.
ಪೀಲೆಯ ಆಟವನ್ನು ನೋಡಿರದ ಫುಟ್ಬಾಲ್ ಪ್ರಿಯರು ಮರಡೊನ ಅವರನ್ನೇ ವಿಶ್ವ ಕಂಡ ಸರ್ವಕಾಲಿಕ ಶ್ರೇಷ್ಠ ಸಾಕರ್ ಅಟಗಾರನೆಂದು ಹೇಳುತ್ತಾರೆ.
ಅರ್ಜೈಂಟೀನಾವನ್ನು ಫಿಫಾ ವಿಶ್ವಕಪ್ನಲ್ಲಿ ನಾಲ್ಕು ಬಾರಿ (ಮೂರು ಬಾರಿ ನಾಯಕನಾಗಿ) ಪ್ರತಿನಿಧಿಸಿದ ಮರಡೊನ ಬಾರ್ಸಿಲೋನಾ ಮತ್ತು ನೆಪೊಲಿ ಸಾಕರ್ ಕ್ಲಬ್ಗಳಿಗೂ ಆಡಿದ್ದರು. ಆಕ್ರಮಣಕಾರಿ ಮಿಡ್ಫೀಲ್ಡರ್ ಆಗಿದ್ದ ಮರಡೊನ ಅರ್ಜೈಂಟೀನಾ ಪರ ಆಡಿದ 91 ಪಂದ್ಯಗಳಲ್ಲಿ 34 ಗೋಲು ಗಳಿಸಿದ್ದರು. 1986ರಲ್ಲಿ ವಿಶ್ವಕಪ್ ಗೆದ್ದ ನಂತರ ಅವರು 1990ರಲ್ಲೂ ಅರ್ಜೈಂಟೀನಾವನ್ನು ಫೈನಲ್ಗೆ ಕೊಂಡೊಯ್ದಿದ್ದರು.
ಅದರೆ, 1994ರ ವಿಶ್ವಕಪ್ ಟೂರ್ನಿಯಲ್ಲಿ ಅವರು ಡ್ರಗ್ ಟೆಸ್ಟ್ನಲ್ಲಿ ಫೇಲಾಗಿದ್ದರಿಂದ ಟೂರ್ನಿಯಲ್ಲಿ ಆಡದಂತೆ ನಿಷೇಧಿಸಲಾಗಿತ್ತು. 1991ರಲ್ಲಿ ಅವರು ಕೊಕೈನ್ ಸೇವಿಸುತ್ತಿದ್ದು ಸಾಬೀತಾದ ನಂತರ 15 ತಿಂಗಳುಗಳವರೆಗೆ ಆಟದಿಂದ ನಿಷೇಧಿಸಲಾಗಿತ್ತು. ತಮ್ಮ 37 ನೇ ವಯಸ್ಸಿನಲ್ಲಿ ಕ್ರೀಡೆಯಿಂದ ನಿವೃತ್ತರಾದ ಅವರು ಅರ್ಜೈಂಟೀನಾ ಮತ್ತು ಬಾರ್ಕಾ ತಂಡಗಳಿಗೆ ಮ್ಯಾನೇಜರ್ ಆಗಿ ಸೇವೆ ಒದಗಿಸಿದರು. ನಂತರ 2008ರಲ್ಲಿ ಅವರನ್ನು ಅರ್ಜೈಂಟೀನಾ ರಾಷ್ಟ್ರೀಯ ಟೀಮಿನ ಕೋಚ್ ಆಗಿ ನೇಮಿಸಲಾಗಿತ್ತು.
ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಅವರ ಕುಡಿತಕ್ಕೆ ದಾಸರಾಗಿದ್ದ ಮರಡೊನ ಅವರದ್ದು ನಿಜಕ್ಕೂ ವರ್ಣರಂಜಿತ ಜೀವನ. ಆದರೆ, ಫುಟ್ಬಾಲ್ ಅವರ ಪ್ರಾಣವಾಗಿತ್ತು. ಮೆಸ್ಸಿ, ರೊನಾಲ್ಡೊ, ಬೆಕ್ಹಮ್ ಮುಂತಾದವರಂಥ ಆಟಗಾರರು ಮುಂದೆಯೂ ಬರಬಹುದು; ಆದರೆ, ಇನ್ನೊಬ್ಬ ಮರಡೊನ ಮಾತ್ರ ಯಾವತ್ತೂ ಬರಲಾರ.
ಟೇಕ್ ಎ ಬೋ ಮೇಟ್, ಯು ಲಿಟರಲ್ಲಿ ಇಗ್ನೈಟೆಡ್ ದಿ ಸಾಕರ್ ಪೀಲ್ಟ್ಸ್, ವಿ ಮಿಸ್ ಯೂ ಡೀಗೊ..
Published On - 11:19 pm, Wed, 25 November 20