India Open: ಇಂಡಿಯಾ ಓಪನ್​ನಲ್ಲಿ ಸುಲಭ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿದ ಪಿವಿ ಸಿಂಧು..!

PV Sindhu: ಬಿಡಬ್ಲ್ಯುಎಫ್ ಸೀಸನ್‌ನ ಮೊದಲ ಟೂರ್ನಿಯಾದ ಇಂಡಿಯಾ ಓಪನ್‌ನಲ್ಲಿ ಪಿವಿ ಸಿಂಧು ಅವರ ಅಮೋಘ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅಸ್ಮಿತಾ ಚಲಿಹಾ ಅವರನ್ನು 21-7, 21-18 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದರು.

India Open: ಇಂಡಿಯಾ ಓಪನ್​ನಲ್ಲಿ ಸುಲಭ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿದ ಪಿವಿ ಸಿಂಧು..!
ಪಿವಿ ಸಿಂಧು

ಬಿಡಬ್ಲ್ಯುಎಫ್ ಋತುವಿನ ಮೊದಲ ಟೂರ್ನಿಯಾದ ಇಂಡಿಯಾ ಓಪನ್‌ನಲ್ಲಿ ಪಿವಿ ಸಿಂಧು ಅವರ ಆಕರ್ಷಕ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಸ್ಮಿತಾ ಚಲಿಹಾ ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಇವರಲ್ಲದೆ ಯುವ ತಾರೆ ಲಕ್ಷ್ಯ ಸೇನ್ ಕೂಡ ಸ್ಟಾರ್ ಆಟಗಾರ ಎಚ್.ಎಸ್.ಪ್ರಣೋಯ್ ಅವರನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ತಲುಪುವಲ್ಲಿ ಯಶಸ್ವಿಯಾದರು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಬಿಡಬ್ಲ್ಯೂಎಫ್ ಸೂಪರ್ 500 ಪಂದ್ಯಾವಳಿಯನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುತ್ತಿದೆ.

ಪಿವಿ ಸಿಂಧು 21-7, 21-18 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಪ್ರೀ ಕ್ವಾರ್ಟರ್‌ಫೈಲ್ ಪಂದ್ಯದಲ್ಲಿ ಪಿವಿ ಸಿಂಧು 21-10, 21-10ರಲ್ಲಿ ದೇಶದವರೇ ಆದ ಇರಾ ಶರ್ಮಾ ಅವರನ್ನು ಸೋಲಿಸಿದರು. ಮತ್ತೊಂದೆಡೆ, ಅಶ್ಮಿತಾ ಚಲಿಹಾ 21-17, 21-14 ರಿಂದ ಯಾಲೆ ಹೊಯೌ ಅವರನ್ನು ಸೋಲಿಸಿದರು.

ಸಮೀರ್ ವರ್ಮಾ ಈಗಾಗಲೇ ಔಟ್ ಕೆನಡಾದ ಬ್ರೆನ್ ಯಾಂಗ್ ವಿರುದ್ಧದ ಪಂದ್ಯವನ್ನು ಮಂಡಿರಜ್ಜು ಸೆಳೆತದಿಂದಾಗಿ ಮಧ್ಯದಲ್ಲಿಯೇ ತೊರೆದ ಸಮೀರ್ ವರ್ಮಾ ಅವರ ಅಭಿಯಾನವು ಎರಡನೇ ಸುತ್ತಿನಲ್ಲಿ ಕೊನೆಗೊಂಡಿತು. ಪುರುಷರ ಡಬಲ್ಸ್‌ನಲ್ಲಿ 2ನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ 21-9, 21-18ರಲ್ಲಿ 32 ನಿಮಿಷಗಳಲ್ಲಿ ದೇಶದವರೇ ಆದ ಶ್ಯಾಮ್‌ ಪ್ರಸಾದ್‌ ಮತ್ತು ಎಸ್‌. ಸುಂಜಿತ್‌ ಅವರನ್ನು ಮಣಿಸಿದರು.

Published On - 4:26 pm, Fri, 14 January 22

Click on your DTH Provider to Add TV9 Kannada