
ಜೂನ್ 14 ರಂದು 2026 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ( Women’s T20 World Cup) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ಮಹಿಳಾ ತಂಡಗಳ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಭಾರತ ಮಹಿಳಾ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಆದಾಗ್ಯೂ ಪಂದ್ಯ ಆರಂಭಕ್ಕೂ ಮುನ್ನ ಅಂದರೆ ಟಾಸ್ ಸಮಯದಲ್ಲಿ ಹಾಗೂ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರ್ತಿಯರು ಶೇಕ್ಹ್ಯಾಂಡ್ ಮಾಡದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಹೊರತುಪಡಿಸಿದರೆ ಬೇರೆ ಯಾವ ದುರ್ಘಟನೆಯೂ ಪಂದ್ಯದ ವೇಳೆ ನಡೆದಿರಲಿಲ್ಲ. ಆದರೆ ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಕೈಕೈ ಮಿಲಾಯಿಸುತ್ತಿರುವಂತೆ ಚಿತ್ರಿತವಾಗಿತ್ತು.
ವಿಡಿಯೋದಲ್ಲಿ ಇರುವುದೇನು ಎಂಬುದನ್ನು ನೋಡುವುದಾದರೆ… ಭಾರತ ತಂಡ ಬ್ಯಾಟಿಂಗ್ ಮಾಡುವ ವೇಳೆ ಸ್ಟ್ರೈಕ್ನಲ್ಲಿದ್ದ ಬ್ಯಾಟರ್ ಬಳಿ ಬಂದ ಪಾಕಿಸ್ತಾನ ತಂಡದ ಬೌಲರ್ ಆಕ್ರಮಣಕಾರಿಯಾಗಿ ಏನನ್ನೋ ಹೇಳಿದ್ದು ಮಾತ್ರವಲ್ಲದೆ ಅವರನ್ನು ತಳ್ಳುತ್ತಾರೆ. ಇದರಿಂದ ಕೋಪಗೊಂಡ ಭಾರತ ಬ್ಯಾಟರ್, ಪಾಕ್ ಬೌಲರ್ನ ಕುತ್ತಿಗೆ ಕೈಹಾಕಿ ದೂರಕ್ಕೆ ತಳ್ಳುತ್ತಾರೆ. ಇದ್ದಕ್ಕಿದ್ದಂತೆ ಉಭಯ ತಂಡಗಳ ಆಟಗಾರ್ತಿಯರ ನಡುವೆ ಜಗಳ ಶುರುವಾಗುತ್ತದೆ. ಇದನ್ನು ಗಮನಿಸಿದ ಅಂಪೈರ್ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದ ಬೆನ್ನಲ್ಲೇ ಈ ಹೊಡೆದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಪಂದ್ಯದಲ್ಲಿ ನಿಜವಾಗಿಯೂ ಇಂತಹ ಭಯಾನಕ ಘಟನೆ ನಡೆದಿದೆಯೇ ಎಂದು ಹಲವರು ಆಶ್ಚರ್ಯಪಟ್ಟರು. ಏಕೆಂದರೆ ಇಡೀ ಪಂದ್ಯದಲ್ಲಿ ಆ ರೀತಿಯ ಘಟನೆ ನಡೆದಿರಲಿಲ್ಲ. ಇದಾದ ಬಳಿಕ ಈ ವಿಡಿಯೋ ಹಿಂದಿರುವ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಈ ವಿಡಿಯೋ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಿದ ಕ್ಲಿಪ್ ಎಂಬುದು ದೃಢಪಟ್ಟಿದೆ.
IND vs PAK में आग लग गई! 🔥
Harmanpreet Kaur और Fatima Sana Sheikh के बीच मैच के बीच में जमकर heated words हो गए।
दोनों खिलाड़ियों के बीच तनाव साफ दिख रहा था।
मैच का माहौल पहले से गरम था, अब तो और भी भड़क गया! 👀#INDvsPAK #HarmanpreetKaur #FatimaSanaSheikhक्या लगता है भाई?… pic.twitter.com/cQTCZovJ1D
— Durgesh Shukla (@mydurgeshshukla) June 14, 2026
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 170 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಆ ಬಳಿಕ 171 ರನ್ಗಳ ಬೃಹತ್ ಗುರಿ ಬೆನ್ನಟ್ಟಲು ಮೈದಾನಕ್ಕೆ ಇಳಿದ ಪಾಕಿಸ್ತಾನ, ಭಾರತದ ಸ್ಟಾರ್ ಸ್ಪಿನ್ನರ್ ದೀಪ್ತಿ ಶರ್ಮಾ ದಾಳಿಗೆ ನಲುಗಿ ಕೇವಲ 106 ರನ್ಗಳಿಸಲಷ್ಟೇ ಶಕ್ತವಾಗಿ 64 ರನ್ಗಳ ಅಂತರದಿಂದ ಭಾರಿ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ದೀಪ್ತಿ 5 ವಿಕೆಟ್ಗಳ ಗೊಂಚಲು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.