India vs Australia Test Series | 3ನೇ ಟೆಸ್ಟ್ಗೆ ಭಾರತ ತಂಡ ಪ್ರಕಟ; ಟೆಸ್ಟ್ ಕ್ರಿಕೆಟ್ಗೆ ಸೈನಿ ಪಾದಾರ್ಪಣೆ
ಅಜಿಂಕ್ಯಾ ರಹಾನೆ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದಾಗಿ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ವೇಗಿ ನವದೀಪ್ ಸೈನಿ ಪಾದಾರ್ಪಣೆ ಮಾಡಲಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ನಡೆದಿರುವ 2 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಹೀನಾಯವಾಗಿ ಸೋತು, ಮತ್ತೊಂದರಲ್ಲಿ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಎಲ್ಲರ ಕಣ್ಣು ಮೂರನೇ ಟೆಸ್ಟ್ ಮೇಲೆ ಬಿದ್ದಿದೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ, ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. 3ನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ನಾಯಕನಾಗಿ ಮುನ್ನಡೆಸಲಿದ್ದಾರೆ. ಗಾಯದಿಂದಾಗಿ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಜೊತೆಗೆ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ಗೆ ವೇಗಿ ನವದೀಪ್ ಸೈನಿ ಪಾದಾರ್ಪಣೆ ಮಾಡಲಿದ್ದಾರೆ.
ರೋಹಿತ್ ಶರ್ಮ ತಂಡಕ್ಕೆ ಮರಳಿರುವುದರಿಂದ ಕಳಪೆ ಫಾರ್ಮ್ನಲ್ಲಿದ್ದ ಮಾಯಾಂಕ್ ಅಗರವಾಲ್ಗೆ ತಂಡದಿಂದ ಕೋಕ್ ನೀಡಲಾಗಿದೆ. ಇನ್ನೂ ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರ ನಡೆದಿದ್ದ ವೇಗಿ ಉಮೇಶ್ ಯಾದವ್ ಸ್ಥಾನಕ್ಕೆ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. ಜನವರಿ 7ರಿಂದ ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಗೆ 3ನೇ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ.
ಆಟಗಾರರ ಪಟ್ಟಿ: ಅಜಿಂಕ್ಯಾ ರಹಾನೆ (ಕ್ಯಾಪ್ಟನ್), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ನವದೀಪ್ ಸೈನಿ
NEWS – #TeamIndia announce Playing XI for the 3rd Test against Australia at the SCG.
Navdeep Saini is all set to make his debut.#AUSvIND pic.twitter.com/lCZNGda8UD
— BCCI (@BCCI) January 6, 2021
ಟೀಂ ಇಂಡಿಯಾ ಫ್ಯಾನ್ಸ್ಗೆ ಸಿಹಿ ಸುದ್ದಿ: ಐಸೋಲೇಷನ್ನಲ್ಲಿದ್ದ ಆಟಗಾರರ ಬಗ್ಗೆ ಮಹತ್ತರ ಮಾಹಿತಿ ನೀಡಿದ BCCI
Published On - 2:07 pm, Wed, 6 January 21