ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಭಾರತ ತಂಡ ಪ್ರಮುಖ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದರೆ. ಆಸ್ಟ್ರೇಲಿಯಾ ತಂಡ ಯಾವೂದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರನ್ನ ಈ ಪಂದ್ಯಕ್ಕೆ ಉಳಿಸಿಕೊಂಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಇತ್ತೀಚಿನ ವರದಿಯ ಪ್ರಕಾರ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 65 ರನ್ ಗಳಿಸಿದೆ. ಐದನೇ ಓವರ್‌ನಲ್ಲಿ ಜೋ ಬರ್ನ್ಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸನ್ನು ತಂದು ಕೊಟ್ಟರೆ. 13 ನೇ ಓವರ್‌ನಲ್ಲಿ ಆರ್ ಅಶ್ವಿನ್ ಮ್ಯಾಥ್ಯೂ ವೇಡ್ (30 ರನ್)ನನ್ನು ಬಲಿ ಪಡೆದಿದ್ದಾರೆ. ಜೊತೆಗೆ ಭರವಸೆಯ ಆಟಗಾರ ಸ್ಟೀವ್ ಸ್ಮಿತ್‌ನನ್ನು ಶೂನ್ಯಕ್ಕೆ ಔಟ್ ಮಾಡಿದ ಆರ್ ಅಶ್ವಿನ್, ಸ್ಟೀವ್ ಸ್ಮಿತ್ಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.