India vs Australia Test Cricket 2020 | ಬಾಕ್ಸಿಂಗ್ ಡೇ ಟೆಸ್ಟ್; 195 ರನ್ಗಳಿಗೆ ಸರ್ವಪತನಗೊಂಡ ಟೀಂ ಆಸ್ಟ್ರೇಲಿಯಾ
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 195 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಸ್ಚೆನ್ ಅತಿ ಹೆಚ್ಚು 48 ರನ್ ಗಳಿಸಿದರು. ಅವರಲ್ಲದೆ, ಟ್ರಾವಿಸ್ ಹೆಡ್ 38 ಮತ್ತು ಮ್ಯಾಥ್ಯೂ ವೇಡ್ 30 ರನ್ ಗಳಿಸಿದರು. ಮತ್ತೊಂದೆಡೆ, ಮಾರಕ ದಾಳಿ ನಡೆಸಿದ ಭಾರತದ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಆರ್ ಅಶ್ವಿನ್ 3, ಮೊಹಮ್ಮದ್ ಸಿರಾಜ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು.
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಅಂಗಳದಲ್ಲಿ ನಡೆಯುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಆಸ್ಟ್ರೇಲಿಯಾ ತಂಡ ಭಾರತದ ಮಾರಕ ದಾಳಿಯಿಂದಾಗಿ ಕೇವಲ 195 ರನ್ ಗಳಿಗೆ ತನ್ನೇಲ್ಲಾ ವಿಕೆಟ್ಗಳನ್ನ ಕಳೆದುಕೊಂಡು ಸರ್ವಪತನಗೊಂಡಿದೆ.