ಬಾಕ್ಸಿಂಗ್​ ಡೇ ಟೆಸ್ಟ್​; 2ನೇ ದಿನದಾಟದಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ಆಸರೆಯಾದ ನಾಯಕ ರಹಾನೆ

|

Updated on: Dec 27, 2020 | 9:38 AM

ನಾಯಕನ ಆಟವಾಡುತ್ತಿರುವ ರಹಾನೆ ತಂಡಕ್ಕೆ ಅಗತ್ಯವಾದ 50 ರನ್ ಗಳಿಸಿ ಇನ್ನೂ ಕ್ರಿಸ್​ನಲ್ಲಿದ್ದಾರೆ. ಕೊಹ್ಲಿಯ ಸ್ಥಾನಕ್ಕೆ ಆಯ್ಕೆಯಾಗಿರುವ ಜಡೇಜಾ ನಾಯಕ ರಹಾನೆಗೆ ಉತ್ತಮ ಸಾಥ್​ ನೀಡಿದರೆ ಆಸಿಸ್​ಗೆ ತಕ್ಕ ಎದುರೇಟು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಾಕ್ಸಿಂಗ್​ ಡೇ ಟೆಸ್ಟ್​; 2ನೇ ದಿನದಾಟದಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ಆಸರೆಯಾದ ನಾಯಕ ರಹಾನೆ
Follow us on

ಮೆಲ್ಬೋರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಎರಡನೇ ದಿನ ಭಾರತ 173 ರನ್ ಗಳಿಸಿ, ಈ ತನಕ 5 ವಿಕೆಟ್ ಕಳೆದುಕೊಂಡಿದೆ.

ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್​ ಕಳೆದುಕೊಂಡು 36 ರನ್​ ಗಳಿಸಿದ್ದ ಭಾರತ, ಎರಡನೇ ದಿನ ಪ್ರಮುಖ ಐದು ವಿಕೆಟ್​ ಕಳೆದುಕೊಂಡು ಸದ್ಯಕ್ಕೆ 173 ರನ್​ ಗಳಿಸಿದೆ. ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಯುವ ಆಟಗಾರ ಶುಬ್ಮನ್ ಗಿಲ್ 45 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಂತರ ಚೇತೇಶ್ವರ ಪೂಜಾರ ಕೂಡ 17 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮೊದಲ ದಿನದಾಟದ ಮೊದಲ ಓವರ್‌ನಲ್ಲೇ ತಂಡ ಆರಂಭಿಕ ಮಾಯಾಂಕ್ ಅಗರ್‌ವಾಲ್ ಅವರ ವಿಕೆಟ್ ಕಳೆದುಕೊಂಡಿತ್ತು.

ಈ ಮೂರು ವಿಕೆಟ್​ಗಳ ನಂತರ ನಾಯಕ ರಹಾನೆ ಜೊತೆಗೂಡಿದ ಹನುಮ ವಿಹಾರಿ ಬ್ಯಾಟ್​ ಹೆಚ್ಚು ಸದ್ದು ಮಾಡಲಿಲ್ಲ. 21 ರನ್​ ಗಳಿಸಿ ಹನುಮ ವಿಹಾರಿ ತಮ್ಮ ವಿಕೆಟ್​ ಒಪ್ಪಿಸಿದರು. ನಂತರ ಬಂದ ಪಂತ್​ ಸಹ ಹೆಚ್ಚು ಹೊತ್ತು ಆಡಲಿಲ್ಲ 29 ರನ್​ ಗಳಿಸಿ ಪೆವಿಲಿಯನ್​ ಸೇರಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡುತ್ತಿರುವ ನಾಯಕ ರಹಾನೆ ಜೊತೆ ಸೇರಿರುವ ಜಡೇಜಾ​ ಉತ್ತಮ ಜೊತೆಯಾಟ ಆಡಬೇಕಿದೆ. ಈ ಮೂಲಕ ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕಿದೆ.

ನಾಯಕನ ಆಟವಾಡುತ್ತಿರುವ ರಹಾನೆ ತಂಡಕ್ಕೆ ಅಗತ್ಯವಾದ 50 ರನ್ ಗಳಿಸಿ ಇನ್ನೂ ಕ್ರಿಸ್​ನಲ್ಲಿದ್ದಾರೆ. ಕೊಹ್ಲಿಯ ಸ್ಥಾನಕ್ಕೆ ಆಯ್ಕೆಯಾಗಿರುವ ಜಡೇಜಾ ನಾಯಕ ರಹಾನೆಗೆ ಉತ್ತಮ ಸಾಥ್​ ನೀಡಿದರೆ ಆಸಿಸ್​ಗೆ ತಕ್ಕ ಎದುರೇಟು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಾಕ್ಸಿಂಗ್​ ಡೇ ಟೆಸ್ಟ್​; ಮೊದಲ ದಿನದ ಗೌರವಕ್ಕೆ ಪಾತ್ರರಾದ ಟೀಂ ಇಂಡಿಯಾ ವೇಗಿಗಳು.. ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ