India Vs Australia Test Series 2020 | ಅಡಿಲೇಡ್ ಮೈದಾನದಲ್ಲಿ ಇಂದು ಉರುಳಿದ್ದು 15 ವಿಕೆಟ್​ಗಳು!

|

Updated on: Dec 18, 2020 | 9:05 PM

ಅಡಿಲೇಡ್ ಮೈದಾನದಲ್ಲಿ ಬೌಲರ್​ಗಳು ಮೇಲುಗೈ ಸಾಧಿಸಿದ್ದಾರೆ, ಎರಡನೇ ದಿದಾಟದಲ್ಲಿ 15 ವಿಕೆಟ್​ಗಳು ಉರುಳಿರುವುದು ಇದಕ್ಕೆ ಸಾಕ್ಷಿ. ಟೀಮ್ ಇಂಡಿಯಾದ ಆಟಗಾರರು ಬಹಳ ಜವಾಬ್ದಾರಿಯಿಂದ ಆಡುವ ಅವಶ್ಯಕತೆಯಿದೆ, ಯಾಕೆಂದರೆ ಈ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಬೇಕಾದರೆ ಕನಿಷ್ಠ 300 ರನ್​​ಗಳ ಲೀಡ್ ಹೊಂದಿರಲೇಬೇಕು.

India Vs Australia Test Series 2020 | ಅಡಿಲೇಡ್ ಮೈದಾನದಲ್ಲಿ ಇಂದು ಉರುಳಿದ್ದು 15 ವಿಕೆಟ್​ಗಳು!
ಇದೀಗ 3ನೇ ಟೆಸ್ಟ್​ ಸೋಲಿನ ಬಳಿಕ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಂದು ವೇಳೆ 4ನೇ ಟೆಸ್ಟ್ ಕೈ ತಪ್ಪಿದರೆ ಆತಿಥೇಯ ಇಂಗ್ಲೆಂಡ್​ಗೆ ಸರಣಿ ಗೆಲ್ಲುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ನಾಲ್ಕನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಅದರಲ್ಲೂ ಸ್ಪಿನ್ ಸ್ನೇಹಿ ಓವಲ್​ ಪಿಚ್​ನಲ್ಲಿ ಮಿಂಚಿರುವ ಆರ್​. ಅಶ್ವಿನ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎಂದೇ ಹೇಳಬಹುದು.
Follow us on

ಅಡಿಲೇಡ್ ಓವಲ್ ಮೈದಾನದಲ್ಲಿ ಯಾವುದಾದರೂ ಮಾಯೆ ಅಡಗಿದೆಯೋ ಅಥವಾ ಭಾರತೀಯರಂತೆ ಆಸ್ಸೀಗಳೂ ಇನ್ನೂ ಪಿಂಕ್ ಬಾಕ್ ಕ್ರಿಕೆಟ್​ಗೆ ಕುದುರಿಕೊಳ್ಳಬೇಕಿದೆಯೋ ಎಂಬ ಅನುಮಾನ ಕ್ರಿಕೆಟ್ ಪ್ರೇಮಿಗಳಲ್ಲಿ ಮೊದಲ ಟೆಸ್ಟ್​ನ ಎರಡನೇ ದಿನದಾಟದ ಮುಗಿದ ನಂತರ ಹುಟ್ಟಿಕೊಂಡಿದೆ.

ಹೌದು, ಈ ಮೈದಾನದಲ್ಲಿ ಇಂದು 15 ವಿಕೆಟ್​ಗಳು ಪತನಗೊಂಡವು, 10 ಅತಿಥೇಯರದ್ದು, 5 ಪ್ರವಾಸಿಗಳದ್ದು. ಪಿಂಕ್ ಬಾಲ್​ನೊಂದಿಗೆ ಭಾರತೀಯ ಬೌಲರ್​ಗಳು ಸಹ ನಿಸ್ಸಂದೇಹವಾಗಿ ವಿಜೃಂಭಿಸುತ್ತಿದ್ದಾರೆ. ವಿದೇಶದ ಪಿಚ್​ಗಳ ಮೇಲೆ ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬ ಅಪವಾದ ಹೊತ್ತಿರುವ ಏಸ್ ಆಫ್​ಸ್ಪಿನ್ನರ್ ರವಿಚಂದ್ರನ್ ಇಂದು ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದರು.

ಉತ್ಕೃಷ್ಟ ಲಯ, ನಿಯಂತ್ರಣ ಮತ್ತು ವೈವಿಧ್ಯತೆ ಪ್ರದರ್ಶಿಸಿದ ಅವರು ತಾವೆಸದ 18 ಓವರ್​ಗಳಲ್ಲಿ 55 ರನ್ ನೀಡಿ 4 ವಿಕೆಟ್ ಪಡೆದು ಭಾರತೀಯರ ಪರ ಅತಿ ಯಶಸ್ವೀ ಬೌಲರ್ ಎನಿಸಿದರು. ಅವರ ಕರಾರುವಕ್ಕಾದ ದಾಳಿಯಿಂದಾಗಿ ಭಾರತ ಮೊದಲ 53ರನ್​ಗಳ ಆಮೂಲ್ಯ ಮುನ್ನಡೆ ಪಡೆಯಿತು.

ಅವರಿಗೆ ಅತ್ಯುತ್ತಮ ಬೆಂಬಲ ನೀಡಿದ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಮತ್ತೊಬ್ಬ ಪೇಸರ್ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಬುಮ್ರಾಗೆ ಎರಡನೇ ವಿಕೆಟ್, ಸಂಭ್ರಮದಲ್ಲಿ ಕೊಹ್ಲಿ

ಗುರುವಾರದಂದು ಭಾರತೀಯ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ಪರದಾಡಿದಂತೆ ಇಂದು ಅತಿಥೇಯರು ಸಹ ತಿಣುಕಾಡಿದರು. ಬುಮ್ರಾ ಮತ್ತು ಯಾದವ್ ಅವರ ಶಿಸ್ತಿನ ದಾಳಿ ಆಸ್ಟ್ರೇಲಿಯಾದ ಆರಂಭ ಆಟಗಾರರಿಗೆ ಹೊಡೆತಗಳಿಗೆ ಪ್ರಯತ್ನಿಸುವ ಅವಕಾಶವನ್ನೇ ನೀಡಲಿಲ್ಲ. 28 ಎಸೆತಗಳ ನಂತರ ಅಂದರೆ 5ನೇ ಓವರ್​ನಲ್ಲಿ ಆಸ್ಸೀಗಳಿಗೆ ಮೊದಲ ರನ್ ಗಳಿಸಲು ಸಾಧ್ಯವಾಯಿತು! ಮೊದಲ 14 ಓವರ್​ಗಳಲ್ಲಿ ಜೊ ಬರ್ನ್ಸ್ ಮತ್ತು ಮ್ಯಾಥ್ಯೂ ವೇಡ್ ಗಳಿಸಿದ್ದು ಕೇವಲ 20 ರನ್ ಮಾತ್ರ.
14ನೇ ಓವರ್​ನಲ್ಲಿ ಬುಮ್ರಾ ಭಾರತಕ್ಕೆ ಮೊದಲ ಯಶ ದೊರಕಿಸಿದರು. ಎಡಗೈ ಆಟಗಾರ ವೇಡ್ ಆನ್ ಸೈಡ್​ನಲ್ಲಿ ಚೆಂಡನ್ನು ಡ್ರೈವ್ ಮಾಡುವ ಪ್ರಯತ್ನದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಎರಡು ಓವರ್​ಗಳ ನಂತರ ಬುಮ್ರಾ ಮತ್ತೊಬ್ಬ ಓಪನರ್ ಬರ್ನ್ಸ್ ಅವರನ್ನು ಅದೇ ರೀತಿಯಲ್ಲಿ ಔಟ್ ಮಾಡಿದರು.

ಭಾರತಕ್ಕೆ ಬೇಕಿದ್ದ ಸ್ಟೀವ್ ಸ್ಮಿತ್ ಅವರ ಅತ್ಯಮೂಲ್ಯ ವಿಕೆಟನ್ನು ಭಾರತಕ್ಕೆ ಕೊಡಿಸಿದ್ದು ಅಶ್ವಿನ್. ಸ್ಮಿತ್ ನಿರೀಕ್ಷಿಸದಷ್ಟು ಸ್ಪಿನ್ ಆಗದ ಎಸೆತವು ಅವರ ಬ್ಯಾಟಿನ ಅಂಚನ್ನು ಮುತ್ತಿಕ್ಕಿ ಸ್ಲಿಪ್​ನಲ್ಲಿದ್ದ ರಹಾನೆ ಅವರತ್ತ ಚಿಮ್ಮಿದಾಗ ಭಾರತದ ಉಪನಾಯಕ ಯಾವುದೇ ತಪ್ಪು ಮಾಡಲಿಲ್ಲ. ಭಾರತದ ಫೀಲ್ಡಿಂಗ್ ಇವತ್ತು ಕಳಪೆಯಾಗಿತ್ತು. ಸುಲಭವಾದ ಕ್ಯಾಚ್​ಗಳು ನೆಲಸಮಗೊಂಡವು. ಮಾರ್ನಸ್ ಲಬುಶೇನ್​ಗೆ ಒಮ್ಮೆ ಬುಮ್ರಾ ಮತ್ತೊಮ್ಮೆ ಪೃಥ್ವಿ ಶಾ ಜೀವದಾನ ನೀಡಿದರು. ಹಾಗಾಗದೆ ಹೋಗಿದ್ದರೆ, ಆಸ್ಟ್ರೇಲಿಯ 150ರ ಗಡಿ ದಾಟುವುದು ಸಹ ಸಾಧ್ಯವಾಗುತ್ತಿರಲಿಲ್ಲ.

ಜೊತೆ ಆಟಗಾರರಿಂದ ಅಶ್ವಿನ್​ಗೆ ಅಭಿನಂದನೆ

ಭಾರತದ ಪರ ನಾಯಕ ವಿರಾಟ್ ಕೊಹ್ಲಿ ಹೋರಾಡಿದಂತೆ, ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಟೀಮಿನ ಸ್ಕೋರನ್ನು ಹೆಚ್ಚಿಸುವ ಜವಾಬ್ದಾರಿ ನಿಭಾಯಿಸಬೇಕಾಯಿತು. ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಪೈನ್ 73 ರನ್​ಗಳೊಂದಿಗೆ ಅಜೇಯರಾಗಿ ಉಳಿದರು. ಟೇಲ್ ಎಂಡರ್​ಗಳ ಜತೆ ಚಿಕ್ಕ ಚಿಕ್ಕ ಪಾರ್ಟ್​ನರ್​ಶಿಪ್​ಗಳೊಂದಿಗೆ ಅವರು ಟೀಮಿನ ಸ್ಕೋರನ್ನು 200 ಗಡಿ ತಲುಪಿಸಿದರು ಮತ್ತು ಲೀಡಿನ ಮೊತ್ತವನ್ನು ಸಾಕಷ್ಟ್ಟು ತಗ್ಗಿಸಿದರು.

ಮೊಹಮ್ಮದ್ ಶಮಿ ಸಹ ಬೇರೆ ಬೌಲರ್​ಗಳಷ್ಟೇ ಉತ್ತಮವಾಗಿ ಬೌಲ್ ಮಾಡಿದಾಗ್ಯೂ ಅವರಿಗೆ ಒಂದೂ ವಿಕೆಟ್ ದಕ್ಕಲಿಲ್ಲ.

53 ರನ್​ಗಳ ಲೀಡ್​ನೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೃಥ್ವಿ ಶಾ ಮತ್ತೊಮ್ಮೆ ನಿರಾಶೆಗೊಳಿಸದರು. ಈ ಬಾರಿ ಸ್ಟಾರ್ಕ್ ಬದಲು ಪ್ಯಾಟ್ ಕಮ್ಮಿನ್ಸ್​ಗೆ ವಿಕೆಟ್ ಒಪ್ಪಿಸಿದರು. ಅವರು ಔಟಾದ ನಂತರ ರಾತ್ರಿ ಕಾವಲುಗಾರನಾಗಿ ಬುಮ್ರಾ ಅವರನ್ನು ಆಡಲು ಕಳಿಸಲಾಗಿದೆ. ದಿನದಾಟ ಕೊನಗೊಂಡಾಗ ಭಾರತದ ಸ್ಕೋರ್ 9/1, ಅದೀಗ 62 ರನ್​ಗಳಿಂದ ಮುಂದಿದೆ.

ಉಮೇಶ್ ಯಾದವ್

ನಾಳೆ ಮಧ್ಯಾಹ್ನ ಭಾರತೀಯ ಆಟಗಾರರು ಹೇಗೆ ಲೀಡನ್ನು ಹೆಚ್ಚಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾರೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.

ಇಂದು ಮಧ್ಯಾಹ್ನ 233/6 ಸ್ಕೋರಿನೊಂದಿಗೆ ಇನ್ನಿಂಗ್ಸ್ ಮುಂದುವರಿಸಿದ ಭಾರತದ ಬಾಲ ಉದ್ದ ಬೆಳೆಯಲಿಲ್ಲ. ಕೇವಲ 11 ರನ್ ಗಳಿಸುವಷ್ಟರಲ್ಲಿ ಅದು ಉಳಿದ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ 55ರನ್ ನೀಡಿ 4 ವಿಕೆಟ್ ಪಡೆದರೆ ಕಮ್ಮಿನ್ಸ್ 48ರನ್ ನೀಡಿ 3 ವಿಕೆಟ್ ಪಡೆದರು

ಇದುವರೆಗಿನ ಸಂಕ್ಷಿಪ್ತ ಸ್ಕೋರ್: ಭಾರತ 244 ಮತ್ತು 9/1, ಆಸ್ಟ್ರೇಲಿಯ: 191 (ಪೈನ್ 73*, ಲಬುಶೇನ್ 47, ಅಶ್ವಿನ್ 4/55, ಯಾದವ್ 3/40 ಮತ್ತು ಬುಮ್ರಾ 2/52

Published On - 7:43 pm, Fri, 18 December 20