India vs Australia Test Series 2020: ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ; ಏಳು ವಿಕೆಟ್​ ಪತನ

ಇಂದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ಓಪನರ್​ಗಳಾದ ಮ್ಯಾಥೀವ್​ ವೇಡ್​ ಹಾಗೂ ಜೋ ಬರ್ನ್ಸ್​ ತಲಾ 8 ರನ್​ಗಳನ್ನು ಗಳಿಸಲಷ್ಟೇ ಶಕ್ತವಾದರು. ಇನ್ನು ಪ್ರಮುಖ ಆಟಗಾರ ಎನಿಸಿಕೊಂಡಿರುವ ಸ್ಮಿತ್​ ಕೂಡ ಸಿಂಗಲ್​ ಡಿಜಿಟ್​ಗೆ ಔಟ್​ ಆದರು.

India vs Australia Test Series 2020: ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ; ಏಳು ವಿಕೆಟ್​ ಪತನ
ವಿರಾಟ್​ ಕೊಹ್ಲಿ

Updated on: Dec 18, 2020 | 3:10 PM

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟಾಸ್​ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಕಣಕ್ಕೆ ಇಳಿದಿರುವ ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 115 ರನ್​ಗಳಿಗೆ ಏಳು ವಿಕೆಟ್​ ಪತನವಾಗಿದೆ.

ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಪೃಥ್ವಿ ಶಾ ಡಕೌಟ್​ ಆದರೆ, ಮಯಾಂಕ್​ ಅಗರ್​ವಾಲ್​ 17 ರನ್​ಗೆ ಪತನ ಕಂಡರು. ನಂತರ ಪಂದ್ಯಕಟ್ಟಲು ಆರಂಭಿಸಿದ ಪೂಜಾರ ಹಾಗೂ ನಾಯಕ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತ 244 ರನ್​ಗಳಿಗೆ ಆಲ್​ಔಟ್​ ಆಯಿತು.

ಇಂದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ಓಪನರ್​ಗಳಾದ ಮ್ಯಾಥೀವ್​ ವೇಡ್​ ಹಾಗೂ ಜೋ ಬರ್ನ್ಸ್​ ತಲಾ 8 ರನ್​ಗಳನ್ನು ಗಳಿಸಲಷ್ಟೇ ಶಕ್ತವಾದರು. ಸ್ಟೀವ್​ ಸ್ಮಿತ್​ (1), ಹೆಡ್ (7)​, ಗ್ರೀನ್​ (11)  ಮಾರ್ನಸ್ ಲ್ಯಾಬುಸ್ಚಾಗ್ನೆ (47), ಕುಮ್ಮಿಸ್​(0) ಔಟ್​ ಆದರು. ಟಿಮ್​ ಪೇನ್​  ಸದ್ಯ,  ಸ್ಟಾರ್ಕ್​ ಹಾಗೂ ಟಿಮ್​ ಆಡುತ್ತಿದ್ದಾರೆ. ಭಾರತದ ಪರ ಆರ್​​. ಅಶ್ವಿನ್​ ಮೂರು ವಿಕೆಟ್​ ಕಿತ್ತರೆ, ವೇಗದ ಬೌಲರ್​ ಬೂಮ್ರಾ, ಯಾದವ್​ ತಲಾ 2 ವಿಕೆಟ್​ ಕಿತ್ತಿದ್ದಾರೆ.

ಮಧ್ಯಾಹ್ನದ ಟೀ ಬ್ರೇಕ್​​ ವೇಳೆಗೆ ಆಸ್ಟ್ರೇಲಿಯಾ 115 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಆಡುತ್ತಿದೆ. ಇನ್ನು ಉಳಿದಿರುವ ಮೂರು ವಿಕೆಟ್​ ಕೀಳಲು ಭಾರತ ರಣತಂತ್ರ ರೂಪಿಸುತ್ತಿದೆ.

India vs Australia Test Series 2020 | ಪೂಜಾರಾರನ್ನು ‘ಸ್ಟೀವ್’ ಅಂತ ಕರೆದು ಅಸಭ್ಯತೆ ಮೆರೆದ ಶೇನ್ ವಾರ್ನ್

Published On - 3:07 pm, Fri, 18 December 20

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us