India vs Australia Test Series 2020: ಭಾರತಕ್ಕೆ ಆಸರೆಯಾಗಿದ್ದ ಪೂಜಾರ ಔಟ್.
ಓಪನರ್ಗಳಾಗಿ ಪೃಥ್ವಿ ಷಾ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕೆ ಇಳಿದಿದ್ದರು. ಸ್ಟಾರ್ಕ್ ಬೌಲಿಂಗ್ನಲ್ಲಿ ಪೃಥ್ವಿ ಷಾ ಯಾವುದೇ ರನ್ ಗಳಿಸದೆ ಔಟ್ ಆದರು.
ಆಸ್ಟ್ರೇಲಿಯಾ-ಭಾರತ ನಡುವಣ ಮೊದಲ ಟೆಸ್ಟ್ ಅಡಿಲೇಡ್ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆಸ್ಟ್ರೇಲಿಯಾ ಶಾಕ್ ನೀಡಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರಾ ತಂಡಕ್ಕೆ ಆಸರೆ ಆದರು.
ಓಪನರ್ಗಳಾಗಿ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕೆ ಇಳಿದಿದ್ದರು. ಸ್ಟಾರ್ಕ್ ಬೌಲಿಂಗ್ನಲ್ಲಿ ಪೃಥ್ವಿ ಶಾ ಯಾವುದೇ ರನ್ ಗಳಿಸದೆ ಔಟ್ ಆದರು. ನಂತರ ಮಯಾಂಕ್ ಹಾಗೂ ಚೇತೇಶ್ವರ್ ಪೂಜಾರ ಪಂದ್ಯ ಕಟ್ಟಲು ಮುಂದಾದರು. ಆಗ ಕುಮ್ಮಿನ್ಸ್ ಬೌಲಿಂಗ್ಗೆ ಮಯಾಂಕ್ ಬೌಲ್ಡ್ ಆದರು.
ನಂತರ ಪಂದ್ಯ ಪ್ರವೇಶಿಸಿದ ವಿರಾಟ್, ಚೇತೇಶ್ವರ ಜೊತೆಗೂಡಿ ಪಂದ್ಯ ಕಟ್ಟೋಕೆ ಆರಂಭಿಸಿದರು. ಭಾರತ 100 ರನ್ ಗಳಿಸುತ್ತಿದ್ದಂತೆ ಚೇತೇಶ್ವರ್ ಪೂಜಾರ (46) ಕ್ಯಾಚ್ಗೆ ಔಟ್ ಆದರು. ವಿರಾಟ್ 100 ಬಾಲ್ಗಳಿಗೆ 35 ರನ್ ಬಾರಿಸಿದ್ದಾರೆ. ಸದ್ಯ, ರಹಾನೆ ಕಣಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಒಂದು ಹಾಗೂ ಪ್ಯಾಟ್ ಕುಮ್ಮಿಸ್ ಒಂದು ವಿಕೆಟ್ ಕಿತ್ತಿದ್ದಾರೆ.
ವಿರಾಟ್ ಕೊಹ್ಲಿ ಮೊದಲ ಟೆಸ್ಟ್ನ ನಾಯಕತ್ವ ವಹಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಉಪನಾಯಕರಾಗಿದ್ದಾರೆ. ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವೃದ್ಧಿಮಾನ್ ಸಾಹಾ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಪ್ಲೇಯಿಂಗ್ 11 ನಲ್ಲಿದ್ದಾರೆ.
ರಾಹುಲ್ಗಿಲ್ಲ ಸ್ಥಾನ: ಕನ್ನಡಿಗ ಕೆಎಲ್ ರಾಹುಲ್ ಮೊದಲ ಟೆಸ್ಟ್ನಲ್ಲಿ ಹೊರಗುಳಿದಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಕೆಲ್ ರಾಹುಲ್ ಆಡಿದ್ದಾರೆ. ಹೀಗಾಗಿ ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯತೆ ಇದೆ. ಅಲ್ಲದೆ, ಎರಡನೇ ಟೆಸ್ಟ್ನಿಂದ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಈ ಕಾರಣಕ್ಕೆ ಮೊದಲ ಟೆಸ್ಟ್ನಲ್ಲಿ ವಿಶ್ರಾಂತಿ ಕೊಡಲು ನಿರ್ಧರಿಸಲಾಗಿದೆ.
ಗುರುವಾರದಿಂದ ಮೊದಲ ಟೆಸ್ಟ್: ಭಾರತದ ಪ್ಲೇಯಿಂಗ್ 11 ಪ್ರಕಟ; ಕನ್ನಡಿಗ ಕೆಎಲ್ ರಾಹುಲ್ ಔಟ್!
Published On - 1:53 pm, Thu, 17 December 20