AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Vs Australia Test Series 2020 | 20 ದಿನಗಳಲ್ಲಿ 15 ದಿನ ಪೂಜಾರಾ ಬ್ಯಾಟ್ ಮಾಡುವುದನ್ನು ನೋಡಲಿಚ್ಛಿಸುತ್ತೇನೆ: ಗಾವಸ್ಕರ್

ಮೊದಲ ಟೆಸ್ಟ್ ಮುಗಿದ ನಂತರ ವಿರಾಟ್​ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿರುವುದರಿಂದ ಎಲ್ಲರ ಗಮನ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರಾ ಅವರ ಮೇಲೆ ಕೇಂದ್ರೀಕೃತಗೊಂಡಿದೆ. ಅವರ ತಾಳ್ಮೆ ಮತ್ತು ಪ್ರಮಾದರಹಿತ ಬ್ಯಾಟಿಂಗ್ ಟೆಕ್ನಿಕ್ ಭಾರತಕ್ಕೆ ಮತ್ತೊಮ್ಮೆ ಪ್ರಯೋಜನಕಾರಿಯಾಗಲಿದೆ ಎಂದು ಮಾಜಿ ಆಟಗಾರರಾದ ಸುನಿಲ್ ಗಾವಸ್ಕರ್ ಮತ್ತು ಮ್ಯಾಥ್ಯೂ ಹೇಡೆನ್ ಹೇಳುತ್ತಾರೆ.

India Vs Australia Test Series 2020 | 20 ದಿನಗಳಲ್ಲಿ 15 ದಿನ ಪೂಜಾರಾ ಬ್ಯಾಟ್ ಮಾಡುವುದನ್ನು ನೋಡಲಿಚ್ಛಿಸುತ್ತೇನೆ: ಗಾವಸ್ಕರ್
ಚೇತೇಶ್ವರ ಪೂಜಾರಾ
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 17, 2020 | 8:17 PM

Share

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಟೆಸ್ಟ್ ಸರಣಿ ಇಂದು ಆರಂಭಗೊಂಡಿದ್ದು, ಕಾಮೆಂಟರಿ ಬಾಕ್ಸ್​ಗಳಲ್ಲಿ, ಚಾಟ್ ಶೋಗಳಲ್ಲಿ ಪಂದ್ಯ, ಆಟಗಾರರು, ಯಾವ ಬ್ಯಾಟ್ಸ್​ಮನ್ ಎದುರಾಳಿ ತಂಡಕ್ಕೆ ಅಪಾಯಕಾರಿಯಾಗಬಹುದು ಮೊದಲಾದವುಗಳನ್ನು ಚರ್ಚಿಸಲಾಗುತ್ತಿದೆ. ಕ್ರೀಡಾ ಚಾನೆಲ್ ಒಂದು ನಡೆಸುವ ಗೇಮ್ ಪ್ಲ್ಯಾನ್ ಶೋನಲ್ಲಿ ಇಂದು ಮಾಜಿ ಆರಂಭ ಆಟಗಾರರಾಗಿರುವ ಭಾರತದ ಸುನಿಲ್ ಗಾವಸ್ಕರ್ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡೆನ್ ಟೆಸ್ಟ್​ಗಳಲ್ಲಿ ಟೀಮ್ ಇಂಡಿಯಾದ ಅತ್ಯಂತ ನಂಬುಗೆಯ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರಾ ಕುರಿತು ಮಾತಾಡಿದರು.

ಮೊದಲ ಟೆಸ್ಟ್ ನಂತರ ವಿರಾಟ್ ಕೊಹ್ಲಿ ಸ್ವದೇಶಕ್ಕೆ ವಾಪಸ್ಸಾಗಲಿರುವುದರಿಂದ ಈ ಮಹಾನ್ ಆಟಗಾರರು ಪೂಜಾರಾ ಅವರ ಬಗ್ಗೆ ಮಾತಾಡಿದ್ದು ಸಹಜವಾಗಿತ್ತು. ಇವರಿಬ್ಬರ ಪ್ರಕಾರ ಭಾರತದ ನಂ.3 ಆಟಗಾರನೇ ಈ ಬಾರಿಯೂ ಸರಣಿಯ ಮೇಲೆ ಬಹಳ ಪ್ರಭಾವ ಬೀರಲಿರುವ ಆಟಗಾರನಾಗಲಿದ್ದಾನೆ.

‘ಪೂಜಾರಾ, ಲಾಕ್​ಡೌನ್ ಸಮಯದಲ್ಲಿ ಅಭ್ಯಾಸ ಮಾಡಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅದು ಅವರ ಬ್ಯಾಟಿಂಗ್ ಮೇಲೆ ಯಾವುದೇ ಪರಿಣಾಮ ಬೀರದು ಎನ್ನುವುದು ಮಾತ್ರ ನನಗೆ ಖಚಿತವಾಗಿ ಗೊತ್ತಿದೆ. ಈಗ ಆಸ್ಟ್ರೇಲಿಯಾದಲ್ಲಿ 20 ದಿನಗಳಷ್ಟು ಟೆಸ್ಟ್​ ಕ್ರಿಕೆಟ್ ನಡೆಯಲಿದೆ. ಈ 20 ದಿನಗಳ ಪೈಕಿ ಪೂಜಾರಾ 15 ದಿನಗಳ ಕಾಲ ಬ್ಯಾಟ್​ ಮಾಡುವುದನ್ನು ನಾನು ನೋಡಲಿಚ್ಛಿಸುತ್ತೇನೆ. ಮಾನಸಿಕವಾಗಿ ಸದೃಢ ಮತ್ತು ಅಗಾಧ ತಾಳ್ಮೆ ಹೊಂದಿರುವುದರಿಂದ ಅವರಿಗದು ಸಾಧ್ಯವಿದೆ. ಕ್ರೀಸಿಗೆ ಅಂಟಿಕೊಂಡು ದೀರ್ಘ ಸಮಯದವರೆಗೆ ಬ್ಯಾಟ್ ಮಾಡುವುದನ್ನು, ಎದುರಾಳಿ ಬೌಲರ್​ಗಳನ್ನು ಬಸವಳಿಯುವಂತೆ ಮಾಡುವುದನ್ನು ಅವರು ಇಷ್ಟಪಡುತ್ತಾರೆ. ಮತ್ತೊಂದು ಅಂಶವನ್ನು ನಾನು ಹೇಳಬಯಸುವೆ, ಅವರ, ಹೊಡೆತಗಳ ರೇಂಜ್ ಈಗ ವಿಸ್ತೃತಗೊಂಡಿದೆ’ ಎಂದು ಗಾವಸ್ಕರ್ ಹೇಳಿದರು.

ಸುನಿಲ್ ಗಾವಸ್ಕರ್

ಗಾವಸ್ಕರ್ ಅವರ ಅಭಿಪ್ರಾಯವನ್ನು ಪುಷ್ಠೀಕರಿಸಿದ ಹೇಡನ್, ಪೂಜಾರಾರ ತಾಳ್ಮೆ ಅಸ್ಟ್ರೇಲಿಯಾವನ್ನು ಸರಣಿಯುದ್ದಕ್ಕೂ ಕಾಡಲಿದೆಯೆಂದರು.

‘ಬದಲಾಗಿರುವ ಕ್ರಿಕೆಟ್​ನ ಸ್ವರೂಪ ನಮ್ಮನ್ನು ಕೇವಲ ಅಕ್ರಮಣಕಾರಿ ಬ್ಯಾಟಿಂಗ್, ಸ್ಟ್ರೈಕ್​ರೇಟ್​ಗಳ ಬಗ್ಗೆ ಮಾತಾಡಲು ಪ್ರೇರೆಪಿಸುತ್ತದೆ. ಕಡಿಮೆ ಸ್ಟ್ರೈಕ್​ರೇಟ್ ಹೊಂದಿರುವ ಬ್ಯಾಟ್ಸ್​ಮನ್​ಗಳನ್ನು ಕುರಿತು ಚರ್ಚೆಯಾಗುವುದೇ ಇಲ್ಲ. ಸೀಮಿತ ಓವರ್​ ಕ್ರಿಕೆಟ್​ನ ಪ್ರಭಾವ ಹಾಗಿದೆ, ಯಾರೇನೂ ಮಾಡಲಾಗದು. ಅದರೆ, ಪೂಜಾರಾ ಕೋಚಿಂಗ್ ಪುಸ್ತಕದಲ್ಲಿ ವ್ಯಾಖ್ಯಾನಿಸಿರುವ ಬ್ಯಾಟಿಂಗ್ ತಂತ್ರಜ್ಞತೆಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. 2018-19ರ ಸರಣಿಯಲ್ಲಿ ಅವರ ತಾಳ್ಮೆಯ ಮತ್ತು ಅಷ್ಟೇ ಕಲಾತ್ಮಕ ಬ್ಯಾಟಿಂಗ್ ಆಸ್ಸೀಗಳನ್ನು ಸರಣಿಯುದ್ದಕ್ಕೂ ಕಾಡಿತು. ಈ ಸರಣಿಯಲ್ಲೂ ಅವರು ಅದೇ ಪ್ರದರ್ಶನಗಳನ್ನು ಮುಂದುವರಿಸಿದರೆ, ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆಯಾದರೆ ಆಶ್ಚರ್ಯಪಡಬೇಕಿಲ್ಲ’ ಎಂದು ಹೇಡೆನ್ ಹೇಳಿದರು.

ಮ್ಯಾಥ್ಯೂ ಹೇಡೆನ್

‘ನಿಮಗೆ ಗೊತ್ತಿರುವಂತೆ ಆಸ್ಟ್ರೇಲಿಯಾದ ಜನ ಕಾಫಿ ಪ್ರಿಯರು. ಹಾಗಾಗಿ, ಪೂಜಾರಾ ಬ್ಯಾಟ್ ಮಾಡುವಾಗ ನಾವು ಸೇವಿಸುವ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಸೇರಿಸುವಂತೆ ಒಂದು ಅಭಿಯಾನವನ್ನು ಪ್ರಾರಂಭಿಸುವ ಇರಾದೆ ಇಟ್ಟುಕೊಂಡಿದ್ದೇವೆ’ ಎಂದು ಹಾಸ್ಯಭರಿತ ಧಾಟಿಯಲ್ಲಿ ಹೇಡೆನ್ ಹೇಳಿದರು.

2018-19 ರ 4-ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪೂಜಾರಾ ಮೂರು ಶತಕಗಳನ್ನೊಳಗೊಂಡ 521 ರನ್ ಗಳಿಸಿದ್ದರು.

India vs Australia Test Series 2020 | ಪ್ರಮುಖ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಭಾರತ: ಇಲ್ಲಿವೆ ಚಿತ್ರಗಳು

Published On - 7:39 pm, Thu, 17 December 20