Ind vs Eng, 2nd Test, Day 4, LIVE Score: ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ, ಸರಣಿ 1-1 ಸಮ

| Updated By: Digi Tech Desk

Updated on: Feb 17, 2021 | 9:06 AM

India vs England Live Score: ಇಂಗ್ಲೆಂಡ್ ಇನ್ನಿಂಗ್ಸ್ ಲಂಚ್ ವಿರಾಮ ನಂತರ ಮೊದಲ ಬಾರಿಯ ಸ್ಕೋರಿಗಿಂತ ಕಮ್ಮಿ ಮೊತ್ತಕ್ಕೆ ಕೊನೆಗೊಳ್ಳುವಂತೆ ಭಾಸವಾಗಿತ್ತು. ವಿರಾಮದ ನಂತರ ಆಟ ಶುರವಾದಾಗ, ಪಟೇಲ್ ಮೊದಲ ಓವರಿನಲ್ಲೇ ಬೆಳಗ್ಗೆಯಿಂದ ಭಾರತೀಯ ಬೌಲರ್​ಗಳಿಗೆ ಪ್ರತಿರೋಧ ಒಡ್ಡುತ್ತಿದ್ದ ಜೋ ರೂಟ್​ ಅವರನ್ನು ಔಟ್ ಮಾಡಿದರು.

Ind vs Eng, 2nd Test, Day 4, LIVE Score: ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ, ಸರಣಿ 1-1 ಸಮ
Follow us on

ಚೆನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ  ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವನ್ನು ಅತಿಥೇಯರು ನಿರೀಕ್ಷೆಯಂತೆ 317 ರನ್​ಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ಪಂದ್ಯದ 4ನೇ ದಿನವಾಗಿದ್ದ ಇಂದು ಪ್ರವಾಸಿಗರು ಹೆಚ್ಚಿನ ಪ್ರತಿರೋಧ ತೋರದೆ 164 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡರು ಇದೇ ಮೊದಲ ಬಾರಿಗೆ ಟೆಸ್ಟ್ ಆಡುತ್ತಿರುವ ಅಕ್ಸರ್ ಪಟೇಲ್ ಶ್ರೇಷ್ಠಮಟ್ಟದ ಬೌಲಿಂಗ್ ಪ್ರದರ್ಶನ ನೀಡಿ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆಯುವ ಸಾಧನೆ ಮಾಡಿದರು. ಇಂದು ಬಿದ್ದ 7 ವಿಕೆಟ್​ಗಳಲ್ಲಿ ಅವರು 3ನ್ನು ಪಡೆದರೆ, ರವಿಚಂದ್ರನ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.  ​

ಇಂಗ್ಲೆಂಡ್ ಇನ್ನಿಂಗ್ಸ್ ಲಂಚ್ ವಿರಾಮ ನಂತರ ಮೊದಲ ಬಾರಿಯ ಸ್ಕೋರಿಗಿಂತ ಕಮ್ಮಿ ಮೊತ್ತಕ್ಕೆ ಕೊನೆಗೊಳ್ಳುವಂತೆ ಭಾಸವಾಗಿತ್ತು. ವಿರಾಮದ ನಂತರ ಆಟ ಶುರವಾದಾಗ, ಪಟೇಲ್ ಮೊದಲ ಓವರಿನಲ್ಲೇ ಬೆಳಗ್ಗೆಯಿಂದ ಭಾರತೀಯ ಬೌಲರ್​ಗಳಿಗೆ ಪ್ರತಿರೋಧ ಒಡ್ಡುತ್ತಿದ್ದ ಜೋ ರೂಟ್​ ಅವರನ್ನು ಔಟ್ ಮಾಡಿದರು. ಆಮೇಲೆ ಒಲ್ಲಿ ಸ್ಟೋನ್​​​ ಅವರನ್ನೂ ಪಟೇಲ್ ಔಟ್​ ಮಾಡಿದಾಗ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್​ ಸ್ಕೋರನ್ನು ಸಹ ದಾಟಲಾರದೆನಿಸಿತ್ತು.

ಆದರೆ, ಆ ಹಂತದಲ್ಲಿ ಲಾಂಗ್ ಹ್ಯಾಂಡಲ್ ಪ್ರಯೋಗಿಸಲಾರಂಭಿಸಿದ ಆಲ್​ರೌಂಡರ್ ಮೋಯಿನ್ ಅಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನೊಂದಿಗೆ ಕೇವಲ 18 ಎಸೆತಗಳಲ್ಲಿ 43 ರನ್ ಬಾರಿಸಿದರು.

ಇದಕ್ಕೆ ಮೊದಲು4 ನೇ ದಿನದಾಟ ಆರಂಭವಾದಾಗ, ನಿನ್ನೆ ಭರವಸೆ ಮೂಡಿಸಿದ್ದ 3ನೇ ಕ್ರಮಾಂಕದ ಆಟಗಾರ ಡಾಮಿನಿಕ್ ಸಿಬ್ಲೀ ಭಾರತದ ಏಸ್ ಸ್ಪಿನ್ನರ್ ಅವರ ಎಸೆತವೊಂದನ್ನು ಮುಂದೆ ನುಗ್ಗಿ ಮೈದಾನದಾಚೆ ಬಾರಿಸುವ ಪ್ರಯತ್ನದಲ್ಲಿ ಗುರಿ ತಪ್ಪಿದಾಗ ವಿಕೆಟ್​ಕೀಪರ್ ರಿಷಭ್ ಪಂತ್ ಸ್ಟಂಪ್ಡ್ ಮಾಡಿದರು.

ಸ್ವಲ್ಪ ಸಮಯದ ನಂತರ ಅಶ್ವಿನ್ ಅಪಾಯಕಾರಿ ಅಗಬಹುದಾಗಿದ್ದ ವಿಶ್ವದ ಅಗ್ರಮಾನ್ಯ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಟೆಸ್ಟ್ ಕ್ರಿಕೆಟ್​ನಲಲ್ಇ ಮತ್ತೊಮ್ಮೆ ಬಲಿ ಪಡೆದರು. ತಮ್ಮ ಟೆಸ್ಟ್​ ಕರೀಯರ್​ನಲ್ಲಿ ಸ್ಟೋಕ್ಸ್  ಅವರು ಇಂದು ಸೇರಿ ಒಟ್ಟು 10 ಬಾರಿ ಔಟ್ ಆಗಿದ್ದಾರೆ!

ಉಳಿದವರಂತೆ ಬೆನ್ ಫೋಕ್ಸ್ ಮತ್ತು ಒಲ್ಲೀ ಪೋಪ್ ಸಹ ವಿಕೆಟ್​ ಮೇಲೆ ಹೆಚ್ಚು ಹೊತ್ತು ನಿಲ್ಲದೆ ಕ್ರಮವಾಗಿ ಕುಲ್ದೀಪ್ ಯಾದವ್ ಮತ್ತು ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ಆಮೆಲೆ ಒಲ್ಲಿ ಸ್ಟೋನ್​ ಅವರನ್ನು ಪಟೇಲ್ ಎಲ್​ಬಿ ಬಲೆಗೆ ಕೆಡವಿದರು. ಅ ಎರಡನೇ ಇನ್ನೀಗ್ಸ್​ನಲ್ಲಿ ಪಟೇಲ್ ಬೌಲಿಂಗ್ ಅನಾಲಿಸಿಸ್ ಪ್ರಶಂಸಾರ್ಹವಾಗಿದೆ, 21-5 -50-5.

ತಾವಾಡಿದ ಮೊದಲ ಟೆಸ್ಟ್​ ಪಂದ್ಯದಲ್ಲೇ ಇನ್ನಿಂಗ್ಸ್​ ಒಂದರಲ್ಲಿ 5 ಇಲ್ಲವೇ ಸದಕ್ಕಿಂತ ಜಾಸ್ತಿ ವಿಕೆಟ್ ಪಡೆಯುವ ಸಾಧನೆ ಮಾಡಿದ ಭಾರತದ ಇತರ ಬೌಲರ್​ಗಳು:

5/64 ವಿವಿ ಕುಮಾರ್, ಪಾಕಿಸ್ತಾನದ ವಿರುದ್ಧ ದೆಹಲಿಯಲ್ಲಿ, 1960-61

6/103 ದಿಲಿಪ್ ದೋಷಿ, ಆಸ್ಟ್ರೇಲಿಯಾ ವಿರುದ್ಧ ಚೆನೈಯಲ್ಲಿ 1979-80

8/71 ಮತ್ತು 8/75 ನರೇಂದ್ರ ಹಿರ್ವಾನಿ, ವೆಸ್ಟ್​ ಇಂಡೀಸ್ ವಿರುದ್ಧ ಚೆನೈಯಲ್ಲಿ, 1987-88

5?71 ಅಮಿತ್ ಮಿಶ್ರಾ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ, 2008-09

6/47 ರವಿಚಂದ್ರನ್ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ, 2011-12

5/41-ಅಕ್ಸರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಚೆನೈಯಲ್ಲಿ,  2020-21

ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೆಯದರಲ್ಲಿ  53 ರನ್​ಗಳಿಗೆ 3 ವಿಕೆಟ್​ ಪಡೆದರು, ಉಳಿದೆರಡನ್ನು ಕುಲ್ದೀಪ್ ಯಾದವ್ ಪಡೆದರು.

ತಾನಾಡಿದ ಮೊದಲ ಟೆಸ್ಟ್​ನಲ್ಲೇ 16 ವಿಕೆಟ್​ ಪಡೆದಿದ್ದ ನರೇಂದ್ರ ಹಿರ್ವಾನಿ

ರನ್​ ಅಂತರದ ದೃಷ್ಟಿಯಿಂದ ನೋಡಿದರೆ, ಭಾರತಕ್ಕೆ ಇದು 5ನೇ ಅತಿದೊಡ್ಡ ಗೆಲುವಾಗಿದೆ. ಇದಕ್ಕೆ ಮೊದಲು 2015-16ರಲ್ಲಿ ಭಾರತ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾವನ್ನು 337 ರನ್​ಗಳಿಂದ ಸೋಲಿಸಿತ್ತು. 2016-17ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದೋರ್​ನಲ್ಲಿ 321 ರನ್​ಗಳ ಜಯ ಸಾಧಿಸಿತ್ತು.  2008-19ರ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮೊಹಾಲಿಯಲ್ಲಿ  320 ರನ್ ಅಂತರದಿಂದ ಪರಾಭವಗೊಳಿಸಿತ್ತು, 2019ರಲ್ಲಿ ವೆಸ್ಟ್​ ಇಂಡೀಸ್  ವಿರುದ್ಧ ನಾರ್ಥ್ ಸೌಂಡ್​​ನಲ್ಲಿ 318 ರನ್​ಗಳಿಂದ ಮಣಿಸಿತ್ತು ಮತ್ತು ಈಗ ಇಂಗ್ಲೆಂಡನ್ನು ಚೆನೈಯಲ್ಲಿ ಸೋಲಿಸಿದಂತೆ,  2017 ರಲ್ಲೂ ಶ್ರೀಲಂಕಾ ವಿರುದ್ಧ ಗಾಲ್​ನಲ್ಲಿ ಇಷ್ಟೇ ರನ್ (317)​ ಅಂತರದ ಜಯ ಸಾಧಿಸಿತ್ತು.

ಪಂದ್ಯದ ವ್ಯಕ್ತಿ ಪ್ರಶಸ್ತಿ ಅತ್ಯಂತ ಅರ್ಹರಾಗಿದ್ದ ರವಿಚಂದ್ರನ್ ಅಶ್ವಿನ್ ಅವರ ಪಾಲಾಯಿತು.

4 ಟೆಸ್ಟ್​ ಪಂದ್ಯಗಳ ಪ್ರಸಕ್ತ ಸರಣಿಯು 1-1 ರಿಂದ ಸಮವಾಗಿದೆ. ಉಳಿದೆರಡು ಟೆಸ್ಟ್​ಗಳನ್ನು ಆಡಲು ಎರಡು ತಂಡಗಳು ಅಹಮದಾಬಾದ್​ಗೆ ಪಯಣಿಸಲಿವೆ. ಮೂರನೇ ಟೆಸ್ಟ್​ ಫೆಬ್ರುವರಿ 24-28ವರೆಗೆ ನಡೆಯಲಿದ್ದು ಇದು ಹಗಲು-ರಾತ್ರಿಯ ಪಂದ್ಯವಾಗಿದೆ. ಕೊನೆಯ ಟೆಸ್ಟ್ ಮಾರ್ಚ್ 4-8ವರೆಗೆ ನಡೆಯಲಿದೆ.

 

 

 

 

 

Published On - 2:18 pm, Tue, 16 February 21