India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್​ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್

|

Updated on: Mar 12, 2021 | 8:08 PM

ಈ ಸರಣಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಆಯ್ಕೆ ಮಾಡಿರುವ ಟೀಮನ್ನು ನೋಡಿದ್ದೇಯಾದರೆ, 4ನೇ ಕ್ರಮಾಂಕದಲ್ಲಿ ಆಡಲು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ ಸಹ ಉಮೇದುವಾರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್​ ಹಾಗ್ ಅವರ ದೃಷ್ಟಿಯಲ್ಲಿ ಈ ಸ್ಥಾನಕ್ಕೆ ಮುಂಬೈನ ಸೂರ್ಯಕುಮಾರ ಯಾದವ್ ಬೇರೆಯವರಿಗಿಂತ ಜಾಸ್ತಿ ಸೂಟ್​ ಆಗುತ್ತಾರೆ.

India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್​ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್
ಸೂರ್ಯಕುಮಾರ್ ಯಾದವ್
Follow us on

ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ (ಶುಕ್ರವಾರ) ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುರುವಾಗಲಿರುವ5-ಟಿ20ಪಂದ್ಯಗಳ ಸರಣಿಯಲ್ಲಿ ಅತಿಥೇಯ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ ತಂಡದ ಇನ್ನಿಂಗ್ಸ್ ಯಾರು ಆರಂಭಿಸಲಿದ್ದಾರೆ ಅನ್ನುವುದನ್ನು ಈಗಾಗಲೇ ನಿರ್ಧಸಿರಬಹುದು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಆಡುವುದು ಶತಸಿದ್ಧ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆನ್ನುವುದು ಟೀಮ್ ಮ್ಯಾನೇಜ್ಮೆಂಟ್​ಗೆ ದೊಡ್ಡ ತಲೆನೋವಾಗಿದೆ.

ಸಾಮಾನ್ಯವಾಗಿ, ಈ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುತ್ತಾರೆ ಮತ್ತು ಇಂದಿನ ಪಂದ್ಯದಲ್ಲೂ ಅವರೇ ಆಡಿದರೆ ಆಶ್ಚರ್ಯಪಡಬೇಕಿಲ್ಲ. ಆದರೆ, ಈ ಸರಣಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಆಯ್ಕೆ ಮಾಡಿರುವ ಟೀಮನ್ನು ನೋಡಿದ್ದೇಯಾದರೆ, 4ನೇ ಕ್ರಮಾಂಕದಲ್ಲಿ ಆಡಲು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ ಸಹ ಉಮೇದುವಾರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್​ ಹಾಗ್ ಅವರ ದೃಷ್ಟಿಯಲ್ಲಿ ಈ ಸ್ಥಾನಕ್ಕೆ ಮುಂಬೈನ ಸೂರ್ಯಕುಮಾರ ಯಾದವ್ ಬೇರೆಯವರಿಗಿಂತ ಜಾಸ್ತಿ ಸೂಟ್​ ಆಗುತ್ತಾರೆ.

ತಮ್ಮ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಯಾದವ್ ಬಗ್ಗೆ ಮಾತಾಡಿರುವ ಬ್ರಾಡ್​, ‘ನಿಸಂದೇಹವಾಗಿ 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಬೇಕು. ಅವರು ಅಕ್ರಮಣಕಾರಿ ಆಟಗಾರರಾಗಿರುವ ಜೊತೆಗೆ 360 ಡಿಗ್ರೀ ಕ್ರಿಕೆಟರ್ ಆಗಿದ್ದಾರೆ. ಈ ಪ್ರಚಂಡ ಪ್ರತಿಭಾವಂತ ಆಟಗಾರನಿಗೆ ಬೌಲ್ ಮಾಡುವುದು ಕಷ್ಟ,’ ಎಂದು ಹೇಳಿದ್ದಾರೆ.

ಟಿ20 ಪಂದ್ಯಗಳಿಗೆ ಬೌಲರ್​ಗಳ ಆಯ್ಕೆಯೂ ಭಾರತದ ಟೀಮ್ ಮ್ಯಾನೇಜ್ಮೆಂಟ್​ಗೆ ತಲೆನೋವಾಗಬಹುದು. ಮೊಟೆರಾ ಪಿಚ್​ ಸಂಪೂರ್ಣವಾಗಿ ಸ್ಪಿನ್ನರ್​ಗಳಿಗೆ ನೆರವಾಗಿದ್ದು ಎಲ್ಲರಿಗೂ ಗೊತ್ತಿದೆ. ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಗೊಂಚಲುಗಳಲ್ಲಿ ವಿಕೆಟ್ ಪಡೆದರು. ಟಿ20 ಕ್ರಿಕೆಟ್​ಗೆ ಪಿಚ್​ ಭಿನ್ನವಾಗಿರಬಹುದು. ಯಾಕೆಂದರೆ ಸಾಮಾನ್ಯವಾಗಿ ಈ ಆವೃತ್ತಿಯ ಪಂದ್ಯಗಳಿಗಾಗಿ ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗ ಎನಿಸುವಂಥ ಪಿಚ್​ಗಳನ್ನು ತಯಾರಿಸುತ್ತಾರೆ. ಹಾಗಾದರೆ, ಭಾರತ ಯಾವ ಬೌಲಿಂಗ್ ಕಾಂಬಿನೇಷನ್ ಜೊತೆ ಮೈದಾನಕ್ಕಿಳಿಯಲಿದೆ? ಟಿ20 ಪಂದ್ಯಗಳಲ್ಲೂ ಮೂವರು ಸ್ಪಿನ್ನರ್​ಗಳು ಆಡಬಹುದೆ ಎನ್ನುವುದು ಕುತೂಹಲಕಾರಿ ವಿಷಯವಾಗಿದೆ. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಆರಿಸಲಾಗಿದೆ, ಅವರಿಗೆ ಆಡುವ ಅವಕಾಶ ಸಿಗಬಹುದೇ? ಅಥವಾ ಈ ಫಾರ್ಮಾಟ್​ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ದೀಪಕ್ ಚಹರ್ ಅವರನ್ನೇ ಮುಂದುವರಿಸಲಾಗುವುದೇ?

ಈ ಸಂದೇಹಗಳನ್ನು ನಿವಾರಿಸುವ ಪ್ರಯತ್ನವನ್ನು ಬ್ರಾಡ್ ಮಾಡಿದ್ದಾರೆ.

‘ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ಕಡಿಮೆ ಎತ್ತರದ ಬೌಲರ್​ಗಳಾಗಿದ್ದಾರೆ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್​ಗಿಂತ ಅವರಿಬ್ಬರೂ ಕುಳ್ಳರು. ಈ ಹಿನ್ನೆಲೆಯಲ್ಲಿ ಇಂಡಿಯ ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದರೆ ನನ್ನ ಆಯ್ಕೆ ಪಟೇಲ್ ಆಗಲಿದ್ದಾರೆ,’ ಎಂದು ಬ್ರಾಡ್ ಹೇಳಿದ್ದಾರೆ.

‘ಇಂಗ್ಲಿಷ್ ಆಟಗಾರರು ಪಟೇಲ್ ವಿರುದ್ಧ ಸ್ವೀಪ್​ ಶಾಟ್ ಆಡುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಅವರನ್ನು ಆಡಿಸುವುದೇ ಸೂಕ್ತ. ಇಂಡಿಯಾ ಮೂವರು ಸ್ಪಿನ್ನರ್​ಗಳೊಂದಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ಸೀಮರ್​ ಅಗಿ ಉಪಯೋಗಿಸಿದರೆ ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ,’ ಎಂದು ಬ್ರಾಡ್ ಹೇಳಿದ್ದಾರೆ.

ಇದನ್ನೂ ಓದಿ: India vs England: ಮೊದಲ T20 ಪಂದ್ಯದಲ್ಲಿ ರೋಹಿತ್​- ರಾಹುಲ್​ ಆರಂಭಿಕರಾಗಿ ಕಣಕ್ಕೆ.. ಕೊಹ್ಲಿಯ ಈ ನಿರ್ಧಾರಕ್ಕೆ ಕಾರಣವೇನು?

Published On - 8:08 pm, Fri, 12 March 21