India vs England: ಒಂದೇ ಓವರ್​ನಲ್ಲಿ 3 ಸಿಕ್ಸರ್​ ಸಿಡಿಸಿದ್ದಕ್ಕೆ ಹಾರ್ದಿಕ್ ಮೇಲೆ ಸ್ಯಾಮ್ ಕರನ್ ಗರಂ.. ಪಾಂಡ್ಯ ಖಡಕ್ ರಿಯಾಕ್ಷನ್! ವಿಡಿಯೋ ನೋಡಿ

|

Updated on: Mar 27, 2021 | 12:00 PM

India vs England: 46 ನೇ ಓವರ್ ಬೌಲಿಂಗ್ ಮಾಡಲು ಬಂದ ಸ್ಯಾಮ್ ಕರನ್, ಓವರ್‌ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕಡೆಗೆ ನೋಡುತ್ತಾ ಏನನ್ನೋ ಹೇಳಿದರು

India vs England: ಒಂದೇ ಓವರ್​ನಲ್ಲಿ 3 ಸಿಕ್ಸರ್​ ಸಿಡಿಸಿದ್ದಕ್ಕೆ ಹಾರ್ದಿಕ್ ಮೇಲೆ ಸ್ಯಾಮ್ ಕರನ್ ಗರಂ.. ಪಾಂಡ್ಯ ಖಡಕ್ ರಿಯಾಕ್ಷನ್! ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ ಮತ್ತು ಸ್ಯಾಮ್ ಕರಣ್
Follow us on

ಪುಣೆ: ಟಿ 20 ಸರಣಿಯಲ್ಲಿ ನಡೆದ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ನಡುವಿನ ಜಗಳ ಕೊಂಚ ತಣ್ಣಗಾಗಿದೆ. ಆದರೆ 2ನೇ ಏಕದಿನ ಪಂದ್ಯದಲ್ಲಿ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಈ ಘಟನೆಯಲ್ಲಿರುವ ಒಂದೇ ಒಂದು ವ್ಯತ್ಯಾಸವೆಂದರೆ ಅದು ಈ ಬಾರಿ ಘಟನೆಯಲ್ಲಿ ಬಾಗಿಯಾದ ಎರಡೂ ಮುಖಗಳು ಬೇರೆಬೇರೆ ಅಷ್ಟೆ. ಉದಾಹರಣೆಗೆ, ವಿರಾಟ್ ಕೊಹ್ಲಿ ಬದಲಿಗೆ ಹಾರ್ದಿಕ್ ಪಾಂಡ್ಯ ಮತ್ತು ಜೋಸ್ ಬಟ್ಲರ್ ಬದಲಿಗೆ ಸ್ಯಾಮ್ ಕರನ್ ಈ ವಾಕ್ಸಮರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಮತ್ತು ಸ್ಯಾಮ್ ಕರನ್ ಅವರ ಈ ಹೊಸ ರಕಸ್ ಭಾರತದ ಇನ್ನಿಂಗ್ಸ್ ಸಮಯದಲ್ಲಿ ನಡೆಯಿತು.

ಬೌಲಿಂಗ್ ತುದಿಗೆ ಓಡಿಬಂದ ಪಾಂಡ್ಯ
ಭಾರತದ ಇನ್ನಿಂಗ್ಸ್‌ನ 46 ನೇ ಓವರ್ ನಡೆಯುತ್ತಿರುವ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸ್ಯಾಮ್ ಕರನ್ ನಡುವೆ ಮಾತಿನ ಚಕಮಕಿ ಆರಂಭವಾಯಿತು. 46 ನೇ ಓವರ್ ಬೌಲಿಂಗ್ ಮಾಡಲು ಬಂದ ಸ್ಯಾಮ್ ಕರನ್, ಓವರ್‌ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕಡೆಗೆ ನೋಡುತ್ತಾ ಏನನ್ನೋ ಹೇಳಿದರು. ಈ ಸಮಯದಲ್ಲಿ ಹಾರ್ದಿಕ್ ಇನ್ನೊಂದು ತುದಿಯಲ್ಲಿದ್ದರು. ಆದ್ದರಿಂದ, ಸ್ಯಾಮ್ ಕರನ್ ಹೇಳಿದ್ದು ಪಾಂಡ್ಯಗೆ ಸರಿಯಾಗಿ ಕೇಳಲಿಲ್ಲ. ಹೀಗಾಗಿ ಬೌಲಿಂಗ್ ತುದಿಗೆ ಓಡಿಬಂದ ಪಾಂಡ್ಯ, ನೀನು ಏನು ಹೇಳಿದೆ ಎಂದು ಸ್ಯಾಮ್ಗೆ ಕೇಳಲು ಪ್ರಾರಂಭಿಸಿದರು. ಕೊಂಚ ವಿಚಲಿತನಾದ ಸ್ಯಾಮ್ ಕರನ್ ಸ್ಥಳದಿಂದ ಕಾಲ್ಕಿತ್ತರು. ಈ ಇಬ್ಬರ ವಾಕ್ಸಮರ ಕಂಡ ಅಂಪೈರ್ ಕೂಡಲೇ ಇಬ್ಬರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸ್ಯಾಮ್ ಕರನ್ ಗರಂ ಆಗಲು 3 ಸಿಕ್ಸರ್​ ಕಾರಣ
ಯಾವಾಗಲೂ ಸೈಲೆಂಟ್​ ಆಗಿರುವ ಸ್ಯಾಮ್ ಕರನ್, ಇದ್ದಕ್ಕಿದ್ದಂತೆ ಹಾರ್ದಿಕ್ ಪಾಂಡ್ಯ ಮೇಲೆ ಗರಂ ಆಗಲು ಅದಕ್ಕೆ ಒಂದು ಬಲವಾದ ಕಾರಣವಿದೆ. ವಾಸ್ತವವಾಗಿ, ಕರನ್ ಓವರ್ನಲ್ಲಿ ಪಾಂಡ್ಯ 3 ಸಿಕ್ಸರ್‌ ಬಾರಿಸಿದರು. 46 ನೇ ಓವರ್ ಹಾಕಲು ಬಂದ ಸ್ಯಾಮ್ ಕರನ್ ಅವರ ಮೊದಲ, ಮೂರನೇ ಮತ್ತು 5 ನೇ ಎಸೆತಗಳನ್ನು ಪಾಂಡ್ಯ ಸೀದಾ ಸಿಕ್ಸರ್​ಗೆ ಅಟ್ಟಿದರು. ಆದರಿಂದ ಸ್ವಾಭಾವಿಕವಾಗಿ ತಾಳ್ಮೆ ಕಳೆದುಕೊಂಡ ಕರನ್, ಪಾಂಡ್ಯ ಮೇಲೆ ಕೋಪಗೊಂಡರು.

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಕ್ರೀಸ್‌ನಲ್ಲಿ ಅರ್ಧ ಗಂಟೆ ಕಳೆದರು. ಅವರು ಒಟ್ಟು 16 ಎಸೆತಗಳನ್ನು ಎದುರಿಸಿ 218.75 ಸ್ಟ್ರೈಕ್ ದರದಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ 35 ರನ್ ಗಳಿಸಿದರು. ಅದೇ ಸಮಯದಲ್ಲಿ ಸ್ಯಾಮ್ ಕರನ್ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ 7 ಓವರ್‌ಗಳಲ್ಲಿ 47 ರನ್ ಬಿಟ್ಟುಕೊಟ್ಟರು.

ಇದನ್ನೂ ಓದಿ:India vs England: ರಾಹುಲ್ ಶತಕ ಸಿಡಿಸಿದ ನಂತರ ಕಿವಿ ಮುಚ್ಚಿ ಸಂಭ್ರಮಿಸುವುದ್ಯಾಕೆ? ಕನ್ನಡಿಗನ ಸ್ಪಷ್ಟನೆಗೆ ನೀವು ಸಹ ಬೆರಗಾಗುತ್ತೀರಿ!

Published On - 11:58 am, Sat, 27 March 21