India vs England: ಆಂಗ್ಲರ ಅಬ್ಬರಕ್ಕೆ ಶರಣಾದ ಕೊಹ್ಲಿ ಪಡೆ, ಕುತೂಹಲ ಕೆರಳಿಸಿದೆ ನಾಳಿನ ಪಂದ್ಯ!
India vs England: ಬೆನ್ ಸ್ಟೋಕ್ಸ್ 99ರನ್ ಗಳಿಸಿ ಶತಕವನ್ನ ಮಿಸ್ ಮಾಡಿಕೊಂಡ್ರು. ಈ ಮೂಲಕ ಇಂಗ್ಲೆಂಡ್, 43.3ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಪುಣೆ: ಎರಡನೇ ಏಕದಿನ ಪಂದ್ಯದಲ್ಲಿ ರನ್ ಸುನಾಮಿಯೇ ಹರಿದುಬಂತು. ಭಾರತಕ್ಕೆ ದಿಟ್ಟ ಉತ್ತರ ನೀಡಿದ ಜಾನಿ ಬೈರ್ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ರನ್ ಮಾರುತವನ್ನೇ ಎಬ್ಬಿಸಿದ್ರು. ಭಾರತ ಬರೋಬ್ಬರಿ 337ರನ್ಗಳ ಬಿಗ್ ಟಾರ್ಗೆಟ್ ನೀಡಿದ್ರೂ, ಆಂಗ್ಲರ ಅಬ್ಬರಕ್ಕೆ ಕೊಹ್ಲಿ ಪಡೆ ಶರಣಾಯ್ತು. ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳೋ ತವಕದಲ್ಲಿದ್ದ ಟೀಂ ಇಂಡಿಯಾಕ್ಕೆ, ಆಂಗ್ಲರು ಮರ್ಮಾಘಾತ ನೀಡಿದ್ದಾರೆ. ಬೈರ್ಸ್ಟೋವ್ ಬಿರುಗಾಳಿ, ಸ್ಟೋಕ್ಸ್ ಸುಂಟರಗಾಳಿಗೆ ಬ್ಲೂಬಾಯ್ಸ್ ಮಂಕಾಗಿ ಹೋದ್ರು. ಬಿಗ್ ಸ್ಕೋರ್ ಕೆಲ ಹಾಕಿದ್ರೂ ಸಹ ಕೊಹ್ಲಿ ಬಾಯ್ಸ್, ಹೀನಾಯ ಸೋಲು ಕಂಡಿದ್ದಾರೆ.. ಈ ಮೂಲಕ ಆಂಗ್ಲರು ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದ್ದಾರೆ.
ಕೊಹ್ಲಿ-ಕನ್ನಡಿಗನ ಅಬ್ಬರ.. ಪಂತ್ ಪರಾಕ್ರಮ! ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ, ಬಟ್ಲರ್ ಪಡೆ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದ್ರು. ಕಳೆದ ಪಂದ್ಯದಲ್ಲಿ 98ರನ್ ಗಳಿಸಿದ್ದ ಶಿಖರ್ ಧವನ್ ಕೇವಲ4ರನ್ ಗಳಿಸಿ ಯುವ ಬೌಲರ್ ಟೊಪ್ಲೆಗೆ ವಿಕೆಟ್ ಒಪ್ಪಿಸಿದ್ರು. ಇನ್ನೂ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಬ್ಬರ 25ರನ್ಗೆ ಅಂತ್ಯವಾಯ್ತು. ಸ್ಯಾಮ್ ಕರ್ರನ್ ಬಾಲ್ನಲ್ಲಿ ಹಿಟ್ಮ್ಯಾನ್ ಅದಿಲ್ ರಶೀದ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರು.
ಮೂರನೇ ವಿಕೆಟ್ಗೆ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್, ಅತ್ಯಾದ್ಭುತ ಇನ್ನಿಂಗ್ಸ್ ಕಟ್ಟಿದ್ರು. 141ಎಸೆತಗಳನ್ನ ಕೊಹ್ಲಿ-ರಾಹುಲ್ ಜೋಡಿ, 121ರನ್ಗಳ ಜೊತೆಯಾಟವಾಡ್ತು. ಈ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ಭಾರತಕ್ಕೆ, ಭದ್ರಬುನಾದಿ ಹಾಕಿದ್ರು. ಅರ್ಧಶತಕ ಬಾರಿಸಿ ಶತಕದತ್ತ ಮುನ್ನಗ್ಗುತ್ತಿದ್ದ ಕಿಂಗ್ ಕೊಹ್ಲಿ, 66ರನ್ ಗಳಿಸಿದ್ದಾಗ ರಶೀದ್ ಸ್ಪಿನ್ ಮೋಡಿಗೆ ಬಲಿಯಾದ್ರು.
ಆಂಗ್ಲರ ಕರಾರುವಾಕ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ರು ವಿರಾಟ್ ಔಟಾಗ್ತಿದ್ದಂತೆ ಪುಣೆ ಅಂಗಳದಲ್ಲಿ ರಾಹುಲ್ ಜೊತೆಯಾದ ರಿಷಬ್ ಪಂತ್ ರನ್ ಸುನಾಮಿಯನ್ನ ಎಬ್ಬಿಸಿದ್ರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರನ್ ಬರವನ್ನ ಎದುರಿಸ್ತಿದ್ದ ಕನ್ನಡಿಗ ರಾಹುಲ್, ಆಂಗ್ಲರ ಕರಾರುವಾಕ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ರು. ಅಲ್ಲದೇ, ಏಕದಿನ ಕ್ರಿಕೆಟ್ನಲ್ಲಿ 5ನೇ ಶತಕ ಸಿಡಿಸಿ ಮಿಂಚಿದ್ರು. 114ಎಸೆತಗಳಲ್ಲಿ 7ಬೌಂಡರಿ, 2ಸಿಕ್ಸರ್ ಬಾರಿಸಿದ್ದ ರಾಹುಲ್, 108ರನ್ ಗಳಿಸಿ ಟೀಕಾಕಾರಿಗೆ ತಿರುಗೇಟು ಕೊಟ್ರು.
ಇನ್ನೂ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್, ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದು ಪರಾಕ್ರಮ ಮೆರೆದ್ರು. ಕೇವಲ 40ಎಸೆತ ಎದುರಿಸಿದ ಪಂತ್, 7ಸಿಕ್ಸರ್ಗಳ ನೆರವಿನಿಂದ 77ರನ್ ಗಳಿಸಿದ್ರು. ಹಾಗೇ ಹಾರ್ದಿಕ್ ಪಾಂಡ್ಯಾ 35ರನ್ಗಳ ಕೊಡುಗೆ ನೀಡಿದ್ರು. ಈ ಮೂಲಕ ಭಾರತ 6 ವಿಕೆಟ್ ಕಳೆದುಕೊಂಡು 336ರನ್ ಗಳಿಸ್ತು.
ಬೈರ್ಸ್ಟೋವ್ ಬಿರುಗಾಳಿ.. ಸ್ಟೋಕ್ಸ್ ಸುಂಟರಗಾಳಿ! 337ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ಗೆ, ಜೇಸನ್ ರಾಯ್ ಮತ್ತು ಜಾನಿ ಬೈರ್ಸ್ಟೋವ್ 110ರನ್ಗಳ ಜೊತೆಯಾಟದ ಕೊಡುಗೆ ನೀಡಿದ್ರು. ಜೇಸನ್ ರಾಯ್ 55ರನ್ ಗಳಿಸಿದ್ರೆ, ಬೈರ್ಸ್ಟೋವ್ 124ರನ್ ಗಳಿಸೋದ್ರೊಂದಿಗೆ ತಂಡದ ಗೆಲುವನ್ನ ಕನ್ಫರ್ಮ್ ಮಾಡಿದ್ರು. ಇನ್ನು ಬೆನ್ ಸ್ಟೋಕ್ಸ್ 99ರನ್ ಗಳಿಸಿ ಶತಕವನ್ನ ಮಿಸ್ ಮಾಡಿಕೊಂಡ್ರು. ಈ ಮೂಲಕ ಇಂಗ್ಲೆಂಡ್, 43.3ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.