India vs England | 2ನೇ ಟೆಸ್ಟ್​ ಗೆದ್ದು ಬೀಗಿದ ಟೀಂ ಇಂಡಿಯಾ.. ಮಿಂಚಿದ ಅಶ್ವಿನ್​, ಅಕ್ಷರ್​; 1-1 ರಿಂದ ಸರಣಿ ಸಮ..!

| Updated By: ಸಾಧು ಶ್ರೀನಾಥ್​

Updated on: Feb 17, 2021 | 10:10 AM

India vs England: 2ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್​, ಬೌಲಿಂಗ್​ನಲ್ಲೂ ಕಮಾಲ್​ ಮಾಡಿದರು. 2ನೇ ಇನ್ನಿಂಗ್ಸ್​ನಲ್ಲಿ 106 ರನ್ ಸಿಡಿಸಿದ ಅಶ್ವಿನ್​ 3 ವಿಕೆಟ್​ ಪಡೆದು ಮಿಂಚಿದರು.

India vs England | 2ನೇ ಟೆಸ್ಟ್​ ಗೆದ್ದು ಬೀಗಿದ ಟೀಂ ಇಂಡಿಯಾ.. ಮಿಂಚಿದ ಅಶ್ವಿನ್​, ಅಕ್ಷರ್​; 1-1 ರಿಂದ ಸರಣಿ ಸಮ..!
ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ
Follow us on

ಚೆನ್ನೈ: ಎಂ. ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ- ಇಂಗ್ಲೆಂಡ್‌ ನಡುವಿನ 4 ಟೆಸ್ಟ್​ ಪಂದ್ಯಗಳ ಸರಣಿಯ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್​ನ 2ನೇ ಇನ್ನಿಂಗ್ಸ್ ಆರಂಭದಿಂದಲೂ ಆರ್ಭಟ ತೋರಿದ ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡವನ್ನು ಕಡಿಮೆ ರನ್​ಗಳಿಗೆ ಆಲ್​ಔಟ್​ ಮಾಡುವದರಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್​, ಬೌಲಿಂಗ್​ನಲ್ಲೂ ಕಮಾಲ್​ ಮಾಡಿದರು. 2ನೇ ಇನ್ನಿಂಗ್ಸ್​ನಲ್ಲಿ 106 ರನ್ ಸಿಡಿಸಿದ ಅಶ್ವಿನ್​ 3 ವಿಕೆಟ್​ ಪಡೆದು ಮಿಂಚಿದರು. ಹಾಗೆಯೇ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅಕ್ಸಾರ್​ ಪಟೇಲ್​ 5 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಯಾದವ್​ 2 ವಿಕೆಟ್​ ಪಡೆದರೆ, ವೇಗದ ಬೌಲರ್​ಗಳಿಗೆ ಯಾವುದೇ ವಿಕೆಟ್​ ದಕ್ಕಲಿಲ್ಲ.

ಮೊದಲ ಇನ್ನಿಂಗ್ಸ್​ ಇಂಡಿಯಾ 329 ರನ್​..
ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್​ಗೆ 2ನೇ ಇನ್ನಿಂಗ್ಸ್​ನಲ್ಲಿ 482 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 164 ರನ್​ಗಳಿಗೆ ತನ್ನೇಲ್ಲಾ ವಿಕೆಟ್​ ಕಳೆದುಕೊಂಡು ಸರ್ವಪತನಗೊಂಡಿತು. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್​ ಶರ್ಮಾ (161 ರನ್​) ರಹಾನೆ (67 ರನ್​) ಹಾಗೂ ರಿಶಭ್​ ಪಂತ್​ (58 ರನ್​) ಅಬ್ಬರದ ಬ್ಯಾಟಿಂಗ್​ ನೆರವಿನಿಂದ 329 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ ತಂಡ 134 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್ ಪರ ಫೋಕ್ಸ್​ ಅವರು ಭಾರಿಸಿದ 42 ರನ್​ಗಳೇ ತಂಡದ ಅತ್ಯಧಿಕ ರನ್​ ಆಗಿತ್ತು.

ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಅಶ್ವಿನ್​ 5 ವಿಕೆಟ್​ ಪಡೆದು ಮಿಂಚಿದರೆ, ಉಳಿದಂತೆ ಇಶಾಂತ್​ ಶರ್ಮಾ ಹಾಗೂ ಅಕ್ಸಾರ್​ ಪಟೇಲ್​ ತಲಾ 2 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ವೇಗಿ ಸಿರಾಜ್​ ಸಹ 1 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 195 ರನ್​ಗಳ ಬೃಹತ್​ ಮುನ್ನಡೆ ಪಡೆಯಿತು. 5 ವಿಕೆಟ್​ ಪಡೆದು ಮಿಂಚಿದ ಅಶ್ವಿನ್​ ಮೊದಲ ಇನ್ನಿಂಗ್ಸ್​ನ ಮುನ್ನಡೆಗೆ ಪ್ರಮುಖ ಕಾರಣಕರ್ತರಾದರು.

286 ರನ್​ಗೆ 2ನೇ ಇನ್ನಿಂಗ್ಸ್ ಮುಗಿಸಿದ್ದ ಭಾರತ..
195 ರನ್​ಗಳ ಬೃಹತ್​ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಹೀಗಾಗಿ ಟೀಂ ಇಂಡಿಯಾ 100 ರನ್​ ಗಳಿಸುವಷ್ಟರಲ್ಲೇ ಪ್ರಮುಖ ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಕೊಹ್ಲಿ ಅರ್ಧಶತಕ ಹಾಗೂ ಆಲ್​ರೌಂಡರ್​ ಅಶ್ವಿನ್​ ಅವರ ಶತಕದ ನೆರವಿನಿಂದಾಗಿ 286 ರನ್​ ಗಳಿಸಿತು. ಕೊನೆಯ ವಿಕೆಟ್​ಗೆ ಅಶ್ವಿನ್​, ಸಿರಾಜ್​ ಜೊತೆಗೂಡಿ 49 ರನ್​ಗಳ ಜೊತೆಯಾಟ ಆಡಿದ್ದು 2ನೇ ಇನ್ನಿಂಗ್ಸ್​ನ ಮುಖ್ಯಾಂಶ ಆಗಿತ್ತು. ಆ ಸಮಯದಲ್ಲೇ ಅಶ್ವಿನ್​ ಶತಕ ಸಹ ಪೂರ್ಣಗೊಳಿಸಿದರು.

2ನೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಅಶ್ವಿನ್​ ಬೌಲಿಂಗ್​ನಲ್ಲೂ ಕಮಾಲ್​ ಮಾಡಿದರು. ಆರಂಭದಿಂದಲೂ ಇಂಗ್ಲೆಂಡ್ ದಾಂಡಿಗರನ್ನು ಕಾಡಿದ ಅಶ್ವಿನ್​ ಪ್ರಮುಖ 3 ವಿಕೆಟ್​ ತೆಗೆದು ಇಂಗ್ಲೆಂಡ್ ಬ್ಯಾಟಿಂಗ್​ ಬೆನ್ನೇಲುಬ್ಬನ್ನ ಮುರಿದರು. ಅಶ್ವಿನ್​ಗೆ ಉತ್ತಮ ಸಾಥ್​ ನೀಡಿದ ಅಕ್ಸಾರ್​ ಪಟೇಲ್​ ಮೊದಲ ಟೆಸ್ಟ್​ನಲ್ಲಿಯೇ 5 ವಿಕೆಟ್ ಪಡೆದು ಮಿಂಚಿದರು. ಈ ಇಬ್ಬರು ಸ್ಪಿನ್ನರ್‌ಗಳ ನೆರವಿನಿಂದ ಟೀಂ ಇಂಡಿಯಾ 317 ರನ್​ಗಳ ಭರ್ಜರಿ ಜಯ ಸಾದಿಸಿತು.

Published On - 12:40 pm, Tue, 16 February 21