India vs England: ಬೆಂಚ್​ ಕಾಯುವುದರಿಂದ ರಾಹುಲ್ ಫಾರ್ಮ್​ಗೆ ಮರಳುವುದಿಲ್ಲ.. ಕನ್ನಡಿಗನ ಪರ ಬ್ಯಾಟ್​ ಬೀಸಿದ ಗಂಭೀರ್​!

|

Updated on: Mar 22, 2021 | 5:55 PM

India vs England:ಕಳಪೆ ಫಾರ್ಮ್​ನಿಂದ ಬಳಲುತ್ತಿರುವವರನ್ನ ತಂಡದಿಂದ ಹೊರಗಿಟ್ಟರೆ ಅದು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ರಾಹುಲ್​ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ

India vs England: ಬೆಂಚ್​ ಕಾಯುವುದರಿಂದ ರಾಹುಲ್ ಫಾರ್ಮ್​ಗೆ ಮರಳುವುದಿಲ್ಲ.. ಕನ್ನಡಿಗನ ಪರ ಬ್ಯಾಟ್​ ಬೀಸಿದ ಗಂಭೀರ್​!
ಕೆ.ಎಲ್.ರಾಹುಲ್
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಮುಗಿದ ನಂತರ, ಈಗ ಏಕದಿನ ಸರಣಿಯತ್ತ ಕಣ್ಣು ಹಾಯಿಸಲಾಗಿದೆ. ವಿಶ್ವದ ನಂಬರ್ ಒನ್ ಮತ್ತು ನಂಬರ್ ಟೂ ಏಕದಿನ ತಂಡದ ನಡುವಿನ 3 ಪಂದ್ಯಗಳ ಸರಣಿಯು ಮಾರ್ಚ್ 23 ರ ಮಂಗಳವಾರದಿಂದ ಪುಣೆಯಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯು ಕ್ರಿಕೆಟ್​ ವಲಯದಲ್ಲಿ ಹೆಚ್ಚು ವಿಶೇಷವಾದುದಲ್ಲ. ಆದರೆ ಭಾರತೀಯ ತಂಡಕ್ಕೆ ಈ ಸರಣಿ ಬಹುಮುಖ್ಯವಾಗಿದೆ. ಟೀಂ ಇಂಡಿಯಾ ತನ್ನ ಕೆಲವು ಆಟಗಾರರ ಫಾರ್ಮನ್ನ ಅರ್ಥ ಮಾಡಿಕೊಳ್ಳಲು ಇದು ಸಹಾಯಕಾರಿಯಾಗಲಿದೆ.

ಏಕದಿನ ಸರಣಿಯಲ್ಲಿ ಈ ತೀರ್ಮಾನ ಬದಲಾಗಬಹುದು
ಅಂತಹ ಆಟಗಾರರಲ್ಲಿ ಒಬ್ಬನೆಂದರೆ, ಅದು ಕನ್ನಡಿಗ ಕೆ.ಎಲ್.ರಾಹುಲ್. ಟಿ 20 ಸರಣಿಯ ವೈಫಲ್ಯದ ನಂತರ ರಾಹುಲ್ ಸ್ಥಾನ ಟೀಂ ಇಂಡಿಯಾದಲ್ಲಿ ಅಪಾಯದಲ್ಲಿದೆ ಎಂದು ತೋರುತ್ತದೆ. ಆದರೆ ಏಕದಿನ ಸರಣಿಯಲ್ಲಿ ಈ ತೀರ್ಮಾನ ಬದಲಾಗಬಹುದು. ಇದಕ್ಕೆ ಪುಷ್ಠಿ ನೀಡುವಂತೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ರಾಹುಲ್​ಗೆ ಅವಕಾಶ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.

ಸೀಮಿತ ಓವರ್‌ಗಳಲ್ಲಿ ಪ್ರಸ್ತುತ ಟೀಂ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ಕೂಡ ಒಬ್ಬರು ಎಂದು ಪರಿಗಣಿಸಲಾಗಿದೆ. ಟಿ 20 ಪಂದ್ಯಗಳಲ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೆ, ಏಕದಿನ ಪಂದ್ಯಗಳಲ್ಲಿ ಅವರ ದಾಖಲೆಯೂ ಉತ್ತಮವಾಗಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನ ದೃಷ್ಟಿಕೋನದಿಂದ ರಾಹುಲ್ ತಂಡದಲ್ಲಿರುವುದು ಸಹ ಮುಖ್ಯವಾಗಿದೆ. ಇದನ್ನು ಗಮನಿಸಿದರೆ, ರಾಹುಲ್ ತಮ್ಮ ಕಳಪೆ ಫಾರ್ಮ್​ನಿಂದ ಹೊರಬಂದು ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಬೇಕಾಗಿದೆ.

ಎಲ್ಲಾ ಮೂರು ಪಂದ್ಯಗಳಲ್ಲೂ ಅವಕಾಶ ನೀಡಬೇಕು
ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಕೂಡ ರಾಹುಲ್​ ಪರ ಬ್ಯಾಟ್ ಬೀಸಿದ್ದಾರೆ. ಫಾರ್ಮ್ ಅನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ ಪಂದ್ಯಗಳನ್ನು ಆಡುವುದು ಎಂಬುದು ಗಂಭೀರ್​ ಅಭಿಪ್ರಾಯವಾಗಿದೆ. ಕಾರ್ಯಕ್ರಮವೊಂದರಲ್ಲಿ ಏಕದಿನ ಸರಣಿ ಬಗ್ಗೆ ಮಾತಾನಾಡಿದ ಗಂಭೀರ್, ಈ ಸರಣಿಯಲ್ಲಿ ರಾಹುಲ್ಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವವರನ್ನ ತಂಡದಿಂದ ಹೊರಗಿಟ್ಟರೆ ಅದು ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ರಾಹುಲ್​ಗೆ ಎಲ್ಲಾ ಮೂರು ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ ಎಂದರು. ಯಾರಾದರೂ ಕೆಟ್ಟ ಫಾರ್ಮ್​ನಿಂದ ಬಳಲುತ್ತಿದ್ದರೆ, ಅದನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ ಅವನಿಗೆ ಅವಕಾಶ ನೀಡುವುದು ಎಂದರು.

ಟಿ20 ಸರಣಿಯಲ್ಲಿ ಕೇವಲ 15 ರನ್
ಟಿ20 ಸರಣಿಯ ಮೊದಲು, ಈ ಸ್ವರೂಪಕ್ಕಾಗಿ ರಾಹುಲ್ ಅವರನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಎಂದು ಘೋಷಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ರಾಹುಲ್ ತಂಡದ ಆರಂಭಿಕ ಆಟಗಾರನಾಗಲಿದ್ದಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ ಸರಣಿಯಲ್ಲಿ ರಾಹುಲ್ ಸಂಪೂರ್ಣವಾಗಿ ವಿಫಲರಾದರು. ಮೊದಲ 4 ಪಂದ್ಯಗಳಲ್ಲಿ ರಾಹುಲ್‌ಗೆ ಅವಕಾಶ ನೀಡಲಾಯಿತು. ಇದರಲ್ಲಿ ಕೇವಲ 15 ರನ್ ಮಾತ್ರ ಅವರ ಬ್ಯಾಟ್‌ನಿಂದ ಹೊರಬಂದಿತು. ಜೊತೆಗೆ ಈ ಸಮಯದಲ್ಲಿ ಸತತ 2 ಬಾರಿ ಖಾತೆ ತೆರೆಯದೆ ರಾಹುಲ್​ ಔಟ್ ಆದರು. ಕೊನೆಯ ಪಂದ್ಯದಲ್ಲಿ ಕೊಹ್ಲಿ ಸ್ವತಃ ಓಪನಿಂಗ್‌ಗೆ ಬಂದು ರೋಹಿತ್ ಅವರೊಂದಿಗೆ ಅದ್ಭುತ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ:India vs England: ಮೊದಲ ಏಕದಿನ ಪಂದ್ಯ ಆರಂಭವಾಗುವ ಸಮಯ, ದಿನಾಂಕ, ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ