Rishabh Pant: ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ಗೆ ಕೊರೋನಾ: ಭೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ

| Updated By: Vinay Bhat

Updated on: Jul 15, 2021 | 12:00 PM

India vs England: ಇತ್ತೀಚೆಗಷ್ಟೆ ಮುಕ್ತಾಯಗೊಂಡ ಯುರೋ 2020 ಟೂರ್ನಿ ವೀಕ್ಷಣೆಗೆ ಟೀಮ್ ಇಂಡಿಯಾ ಆಟಗಾರರಾದ ರಿಷಭ್ ಪಂತ್, ಜಸ್​ಪ್ರೀತ್ ಬುಮ್ರಾ ಮತ್ತು ಹನುಮಾ ವಿಹಾರಿ ತೆರಳಿಸಿದ್ದರು.

Rishabh Pant: ಇಂಗ್ಲೆಂಡ್​ನಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ಗೆ ಕೊರೋನಾ: ಭೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ
rishab pant
Follow us on

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿರುವ ಭಾರತ ಕ್ರಿಕೆಟ್ ತಂಡದಲ್ಲಿ ಕೊರೋನಾ ಆತಂಕ ಎದುರಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್​ಗೆ (Rishabh Pant) ಕೊರೋನಾ ಪಾಸಿಟಿವ್ (Corona Positive) ದೃಢಪಟ್ಟಿದೆ ಎಂದು ಸ್ಪೋರ್ಟ್ಸ್ Sports Tak ವರದಿ ಮಾಡಿದೆ. ಭಾರತೀಯ ಕ್ರಿಕೆಟ್​ನ 23 ಸದಸ್ಯರು ಆಂಗ್ಲರ ನಾಡಿಗೆ ತೆರಳಿದ್ದರು. 20 ದಿನಗಳ ವಿರಾಮದ ಬಳಿಕ ಎಲ್ಲರೂ ಬಯೋ ಬಬಲ್​ನಿಂದ ಹೊರಬಂದಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

ಅಲ್ಲದೆ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಯುರೋ 2020 ಟೂರ್ನಿ ವೀಕ್ಷಣೆಗೆ ಟೀಮ್ ಇಂಡಿಯಾ ಆಟಗಾರರಾದ ರಿಷಭ್ ಪಂತ್, ಜಸ್​ಪ್ರೀತ್ ಬುಮ್ರಾ ಮತ್ತು ಹನುಮಾ ವಿಹಾರಿ ತೆರಳಿಸಿದ್ದರು. ಕೋಚ್ ರವಿಶಾಸ್ತ್ರಿ ವಿಂಬಲ್ಡನ್ ಫೈನಲ್​ನಲ್ಲಿ ಕಾಣಿಸಿಕೊಂಡಿದ್ದರು. ಇದು ನಿಯಮದ ವಿರುದ್ಧವಾಗಿದ್ದು, ಬಿಸಿಸಿಐ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಮತ್ತೊಂದು ಮಾಹಿತಿಯ ಪ್ರಕಾರ ಪಂತ್​ಗೆ ಒಂದು ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಆದರೆ, ಈಗ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಬಿಸಿಸಿಐ ಈಬಗ್ಗೆ ಅಧಿಕೃತ ಮಾಹಿತಿ ಹೇಳಬೇಕಿದೆ.

ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಆರಂಭವಾಗಲಿದ್ದು, ಈ ಪ್ರಯುಕ್ತ ಇಡೀ ತಂಡ ಡರ್‌ಹ್ಯಾಮ್‌ನ ಬಯೋಬಬಲ್‌ನಲ್ಲಿ ಒಟ್ಟು ಸೇರಲಿತ್ತು. ಆದರೆ ಇಬ್ಬರು ಆಟಗಾರರಿಗೆ ಕೊರೋನಾ ಕಾಣಿಸಿಕೊಂಡಿದೆ. ಈ ಪೈಕಿ ಒಬ್ಬರು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಸೋಂಕಿರುವ ಮತ್ತೊಬ್ಬ ಆಟಗಾರ ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿಲ್ಲ.

ಭಾರತೀಯ ಆಟಗಾರರು ಜನದಟ್ಟನೆ ಇರುವ ಪ್ರದೇಶಕ್ಕೆ ತೆರಳಬಾರದು ಎಂದು ಬಿಸಿಸಿಐ ಖಡಕ್ ಆಗಿ ಸೂಚಿಸಿತ್ತು. ಆದರೂ ರಿಷಭ್ ಪಂತ್ ಮಾಸ್ಕ್ ಧರಿಸಿದರೆ ಅಭಿಮಾನಿಗಳ ಜೊತೆಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

 

Published On - 11:17 am, Thu, 15 July 21