ಶುಕ್ರವಾರದಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಸರಣಿಯ ಮೊದಲ ಟೆಸ್ಟ್ ಶುರುವಾಗಲಿದೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ಅಡುವ ಇಲೆವೆನ್ ಅಂತಿಮಗೊಳಿಸಲು ಅರೋಗ್ಯಕರ ತಲೆನೋವು ಶುರುವಾಗಿದೆ. ಮೊದಲೆರಡು ಟೆಸ್ಟ್ಗಳಿಗೆ ಆಯ್ಕೆಯಾಗಿರುವ 18 ಸದಸ್ಯರಲ್ಲಿ (ಕೆ ಎಲ್ ರಾಹುಲ್ ಅವರನ್ನು ಆಯ್ಕೆಗೆ ಪರಿಗಣಿಸುವುದು ಫಿಟ್ನೆಸ್ ಮೇಲೆ ಆಧಾರಗೊಂಡಿದೆ) ಯಾರನ್ನು ಆರಿಸುವುದು ಎಂಬ ಗೊಂದಲವನ್ನು ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರೀ ಎದುರಿಸುತ್ತಿದ್ದಾರೆ.
ಭಾರತದ ಮಾಜಿ ಆರಂಭ ಆಟಗಾರ ಮತ್ತು ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ವಾಸಿಮ್ ಜಾಫರ್ ತಮ್ಮ ಆಡುವ ಇಲೆವೆನ್ ಒಂದನ್ನು ರಚಿಸಿದ್ದಾರೆ. ಭಾರತದ ಟೀಮ್ ಮ್ಯಾನೇಜ್ಮೆಂಟ್ ಒಂದೆರಡು ಕ್ಲೂಗಳನ್ನು ಅವರಿಂದ ತೆಗೆದುಕೊಳ್ಳಬಹುದಾಗಿದೆ.
ಜಾಫರ್ ಟೀಮ್ ಹೀಗಿದೆ: ರೋಹಿತ್ ಶರ್ಮ, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಭ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್/ ಶಾರ್ದುಲ್ ಠಾಕೂರ್, ಇಶಾಂತ್ ಶರ್ಮ/ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ
ಎಡಗೈ ಸ್ಪಿನ್ನರ್ಗಳನ್ನು ಎದುರಿಸಿ ಆಡುವಲ್ಲಿ ಇಂಗ್ಲಿಷ್ ಅಟಗಾರರು ದೌರ್ಬಲ್ಯ ಹೊಂದಿರುವುದರಿಂದ ಅಕ್ಸರ್ ಪಟೇಲ್ರನ್ನು ಆಡಿಸಬೇಕು ಎಂದು ಜಾಫರ್ ಹೇಳುತ್ತಾರೆ. ಪಿಚ್ ಮತ್ತು ಚೆನೈಯಲ್ಲಿನ ಹವಾಮಾನವನ್ನು ಪರಿಗಣಿಸಿ ಕುಲ್ದೀಪ್ ಇಲ್ಲವೇ ಶಾರ್ದುಲ್ರನ್ನು ಅಡಿಸಬೇಕೆಂದು ಅವರು ಹೇಳುತ್ತಾರೆ. ಹಾಗೆಯೇ, ಇಶಾಂತ್ ಶರ್ಮ ಮ್ಯಾಚ್ ಫಿಟ್ ಆಗಿದ್ದರೆ ಸಿರಾಜ್ ಬದಲು ಅವರನ್ನೇ ಅಡಿಸುವುದು ಸೂಕ್ತ ಎಂದು ಜಾಫರ್ ಹೇಳಿದ್ದಾರೆ.
ಏತನ್ಮಧ್ಯೆ, ಇಂಗ್ಲೆಂಡಿನ ಸಹಾಯಕ ಬ್ಯಾಟಿಂಗ್ ಕೋಚ್ ಗ್ರಹಾಂ ಥೋರ್ಪ್, ಭಾರತದ ಶಕ್ತಿ ಈಗ ಕೇವಲ ಸ್ಪಿನ್ ಮಾತ್ರ ಆಗಿರದೆ, ವೇಗದ ಬೌಲರ್ಗಳೂ ಅಗಿದ್ದಾರೆ ಅಂತ ಹೇಳಿದ್ದಾರೆ.
‘ಭಾರತದ ಬೌಲಿಂಗ್ ಅಕ್ರಮಣದ ಬಗ್ಗೆ ಹೇಳುವುದಾದರೆ ಅದೀಗ ಕೇವಲ ಸ್ಪಿನ್ ಮೇಲೆ ಮಾತ್ರ ಅವಲಂಬನೆಗೊಂಡಿಲ್ಲ. ಅವರ ವೇಗದ ದಾಳಿಯೂ ಅತ್ಯತ್ತುಮವಾಗಿದೆ. ಹಾಗಾಗಿ ನಾವು ಕೇವಲ ಅವರ ಸ್ಪಿನ್ ದಾಳಿ ಕುರಿತು ಮಾತ್ರ ಯೋಚಿಸಿದರೆ ಎಡವಟ್ಟಾಗಲಿದೆ. ಅವರ ವೇಗದ ಬೌಲರ್ಗಳೂ ನಮಗೆ ತೊಂದರೆ ಕೊಡಬಹುದು’ ಎಂದು ವರ್ಚ್ಯುಯಲ್ ಸುದ್ದಿಗೋಷ್ಟಿಯೊಂದರಲ್ಲಿ ಥೋರ್ಪ್ ಹೇಳಿದರು.
ಚೆನೈಯಲ್ಲಿ ನಡೆಯುವ ಮೊದಲೆರಡು ಟೆಸ್ಟ್ಗಳಿಗೆ ಬಿಸಿಸಿಐ ಪ್ರಕಟಿಸಿರುವ ತಂಡ ಹೀಗಿದೆ:
ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್ (ಫಿಟ್ ಇದ್ದರೆ ಮಾತ್ರ), ರಿಷಭ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದುಲ್ ಠಾಕೂರ್, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ವೃದ್ಧಿಮಾನ್ ಸಹಾ, ಮಾಯಾಂಕ್ ಅಗರ್ವಾಲ್, ಹಾರ್ದಿಕ್ ಪಾಂಡ್ಯ
ಶುಭ್ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಆಗಮಿಸಿದ್ದಾರೆ, ಬೌಲರ್ಗಳೇ ಎಚ್ಚರ!
Published On - 10:18 pm, Tue, 2 February 21