AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಕೋಚ್ ರವಿ ಶಾಸ್ತ್ರಿ ಹುರಿದುಂಬಿಸುವಿಕೆಯೊಂದಿಗೆ ಅಭ್ಯಾಸವಾರಂಭಿಸಿದ ಟೀಮ್ ಇಂಡಿಯಾ ಸದಸ್ಯರು

ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಬೀಗುತ್ತಿರುವ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರೀ ಭಾರತೀಯ ಆಟಗಾರರನ್ನು ಚೆನೈನ ಚೆಪಾಕ್ ಮೈದಾನದಲ್ಲಿ ಮಂಗಳವಾರದಂದು ಬರಮಾಡಿಕೊಂಡರು.

India vs England: ಕೋಚ್ ರವಿ ಶಾಸ್ತ್ರಿ ಹುರಿದುಂಬಿಸುವಿಕೆಯೊಂದಿಗೆ ಅಭ್ಯಾಸವಾರಂಭಿಸಿದ ಟೀಮ್ ಇಂಡಿಯಾ ಸದಸ್ಯರು
ಟೀಮಿನ ಸದಸ್ಯರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 02, 2021 | 4:04 PM

Share

ಭಾರತದಲ್ಲಿ ಕ್ರಿಕೆಟ್ ಸೀಸನ್ ಶುರವಾಗಿಬಿಟ್ಟಿದೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ರವಿವಾರ ಕೊನೆಗೊಂಡಿತು. ದಿನೇಶ್ ಕಾರ್ತೀಕ್ ನೇತೃತ್ವದ ತಮಿಳುನಾಡು ಕ್ರಿಕೆಟ್ ಸಂಸ್ಥೆ ಈ ಬಾರಿಯ ಚಾಂಪಿಯನ್​ಶಿಪ್ ಗೆದ್ದಿದೆ. ಅಂದಹಾಗೆ, ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಈ ವಾರ ಆರಂಭಗೊಳ್ಳಲಿದ್ದು, ಭಾರತದ ಜೊತೆ 4 ಟೆಸ್ಟ್, 3 ಒಡಿಐ ಮತ್ತು 5 ಟಿ20 ಪಂದ್ಯಗಳಲ್ಲಿ ಸೆಣಸಲು ಜೋ ರೂಟ್ ಅವರ ಆಂಗ್ಲರ ತಂಡ ಈಗಾಗಲೇ ಚೆನೈಗೆ ಆಗಮಿಸಿದ್ದು 6 ದಿನಗಳ ಕ್ಯಾರಂಟೈನ್ ಅವಧಿಯನ್ನು ಪೂರೈಸಿದೆ. ಇಂಗ್ಲಿಷ್ ಆಟಗಾರರು ಮಂಗಳವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.

ಟೀಮ್ ಇಂಡಿಯಾದ ಆಟಗಾರರು ಸಹ ಚೆನೈಗೆ ಆಗಮಿಸಿದ್ದು ಅವರ ಕ್ವಾರಂಟೈನ್ ಅವಧಿ ಕೂಡ ಮುಗಿದಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ ಸಹ ಇಂದಿನಿಂದ (ಮಂಗಳವಾರ) ನೆಟ್ಸ್​ ಅಭ್ಯಾಸದಲ್ಲಿ ಪಾಲ್ಗೊಂಡಿದೆ. ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಬೀಗುತ್ತಿರುವ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರೀ ಭಾರತೀಯ ಆಟಗಾರರನ್ನು ಚೆನೈನ ಚೆಪಾಕ್ ಮೈದಾನದಲ್ಲಿ ಬರಮಾಡಿಕೊಂಡು ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುವಂತೆ ಅವರನ್ನು ಹುರಿದುಂಬಿಸಲು ಒಂದು ಭಾಷಣವನ್ನೂ ಬಿಗಿದರು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಬಾರತ ಮತ್ತು ಇಂಗ್ಲೆಂಡ್ ಆಟಗಾರರ ಆರ್​ಟಿ-ಪಿಸಿಆರ್ ಟೆಸ್ಟ್​ಗಳನ್ನು ಮಾಡಲಾಗಿದ್ದು ಎಲ್ಲರ ರಿಸಲ್ಟ್ ನೆಗೆಟಿವ್ ಬಂದಿದೆ. ಹಾಗಾಗೇ, ಎರಡೂ ತೀವ್ರ ಸ್ವರೂಪದ ಅಭ್ಯಾಸವನ್ನು ಶುರುಮಾಡಿವೆ. ಎರಡು ರಾಷ್ಟ್ರಗಳ ನಡುವೆ ಮೊದಲ ಟೆಸ್ಟ್ ಶುಕ್ರವಾರದಿಂದ ಎಮ್ ಎ ಚಿದಂಬರಂ ಮೈದಾನದಲ್ಲಿ (ಇದನ್ನು ಚೆಪಾಕ್ ಅಂತಲೂ ಕರೆಯುತ್ತಾರೆ) ನಡೆಯಲಿದೆ.

ಓದುಗರಿಗೆ ಗೊತ್ತಿರುವಂತೆ ಎರಡನೇ ಟೆಸ್ಟ್ ಸಹ ಚೆಪಾಕ್ ಮೈದಾನದಲ್ಲಿ ನಡೆಯಲಿದ್ದು, ಮೂರು ಮತ್ತು ನಾಲ್ಕನೇ ಟೆಸ್ಟ್​ ಪಂದ್ಯಗಳು ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ (ಇದಕ್ಕೆ ಮೊದಲು ಇದು ಮೊಟೆರಾ ಸ್ಟೇಡಿಯಂ ಎಂದ ಕರೆಸಿಕೊಳ್ಳುತ್ತಿತ್ತು) ನಡೆಯಲಿವೆ.

ಇಂಗ್ಲೆಂಡ್ ತಂಡ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಭಾರತಕ್ಕೆ ಆಗಮಿಸಿದೆ. ಈ ಪ್ರವಾಸದಲ್ಲಿ ಟೀಮಿನ ಭಾಗವಾಗಿರದಿದ್ದ ಬೆನ್ ಸ್ಟೋಕ್ಸ್, ರೋರಿ ಬರ್ನ್ಸ್ ಮತ್ತು ಜೊಫ್ರಾ ಆರ್ಚರ್ ಟೀಮಗಿಂತ ಮುಂಚಿತವಾಗಿಯೇ ಭಾರತದಲ್ಲಿ ಕಾಲೂರಿದ್ದರಿಂದ ಅವರ ಕ್ವಾರಂಟೈನ್ ಅವಧಿ ಬೇಗ ಮುಗಿದು ಶನಿವಾರದಿಂದಲೇ ನೆಟ್ಸ್​ನಲ್ಲಿ ಪಾಲ್ಗೊಂಡಿದ್ದಾರೆ.

ಆಂದಹಾಗೆ, ಫೆಬ್ರುವರಿ 5 ರಿಂದ ಶುರುವಾಗಲಿರುವ ಮೊದಲ ಟೆಸ್ಟ್ ಖಾಲಿ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ಪೆಬ್ರುವರಿ 13ರಿಂದ ಆರಂಭಗೊಳ್ಳುವ ಎರಡನೇ ಟೆಸ್ಟ್ ಪಂದ್ಯಕ್ಕೆ ಸ್ಟೇಡಿಯಂ ಸಾಮರ್ಥ್ಯದ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ಕಲ್ಪಿಸಲಾಗುವುದೆಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆರ್ ಎಸ್ ರಾಮಸಾಮಿ ಹೇಳಿದ್ದಾರೆ. ಆದರೆ ಅಹಮದಾಬಾದಿನಲ್ಲಿ ನಡೆಯುವ ಎರಡೂ ಟೆಸ್ಟ್​ಗಳಿಗೆ ಸ್ಟೇಡಿಯಂ ಸಾಮರ್ಥ್ಯದಷ್ಟು ಟಿಕೆಟ್​ಗಳನ್ನು ಮಾರಾಟ ಮಾಡಲಾಗುವುದೆಂದು ಅಲ್ಲಿನ ಆಯೋಜಕರು ತಿಳಿಸಿದ್ದಾರೆ.

ಇಂಗ್ಲೆಂಡ್​ ಸರಣಿಗೂ ಮುನ್ನವೇ ವಿರಾಟ್​ ಕೊಹ್ಲಿಗೆ ನೋಟಿಸ್​: ಸಂಕಷ್ಟದಲ್ಲಿ ಟೀಂ ಇಂಡಿಯಾ ನಾಯಕ

Published On - 4:01 pm, Tue, 2 February 21

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ