India vs England: ಟೆಸ್ಟ್​ ಆರಂಭಕ್ಕೆ ಮೊದಲು ಟೀಮ್ ಮ್ಯಾನೇಜ್ಮೆಂಟ್​ಗೆ ಆರೋಗ್ಯಕರ ತಲೆನೋವು

ಭಾರತದ ಮಾಜಿ ಆರಂಭ ಆಟಗಾರ ಮತ್ತು ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ವಾಸಿಮ್ ಜಾಫರ್ ತಮ್ಮ ಆಡುವ ಇಲೆವೆನ್ ಒಂದನ್ನು ರಚಿಸಿದ್ದಾರೆ. ಭಾರತದ ಟೀಮ್ ಮ್ಯಾನೇಜ್ಮೆಂಟ್ ಒಂದೆರಡು ಕ್ಲೂಗಳನ್ನು ಅವರಿಂದ ತೆಗೆದುಕೊಳ್ಳಬಹುದಾಗಿದೆ.

India vs England: ಟೆಸ್ಟ್​ ಆರಂಭಕ್ಕೆ ಮೊದಲು ಟೀಮ್ ಮ್ಯಾನೇಜ್ಮೆಂಟ್​ಗೆ ಆರೋಗ್ಯಕರ ತಲೆನೋವು
ರವಿ ಶಾಸ್ತ್ರೀ ಮತ್ತು ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 02, 2021 | 10:18 PM

ಶುಕ್ರವಾರದಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಸರಣಿಯ ಮೊದಲ ಟೆಸ್ಟ್ ಶುರುವಾಗಲಿದೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ಅಡುವ ಇಲೆವೆನ್ ಅಂತಿಮಗೊಳಿಸಲು ಅರೋಗ್ಯಕರ ತಲೆನೋವು ಶುರುವಾಗಿದೆ. ಮೊದಲೆರಡು ಟೆಸ್ಟ್​ಗಳಿಗೆ ಆಯ್ಕೆಯಾಗಿರುವ 18 ಸದಸ್ಯರಲ್ಲಿ (ಕೆ ಎಲ್ ರಾಹುಲ್ ಅವರನ್ನು ಆಯ್ಕೆಗೆ ಪರಿಗಣಿಸುವುದು ಫಿಟ್ನೆಸ್ ಮೇಲೆ ಆಧಾರಗೊಂಡಿದೆ) ಯಾರನ್ನು ಆರಿಸುವುದು ಎಂಬ ಗೊಂದಲವನ್ನು ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರೀ ಎದುರಿಸುತ್ತಿದ್ದಾರೆ.

ಭಾರತದ ಮಾಜಿ ಆರಂಭ ಆಟಗಾರ ಮತ್ತು ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ವಾಸಿಮ್ ಜಾಫರ್ ತಮ್ಮ ಆಡುವ ಇಲೆವೆನ್ ಒಂದನ್ನು ರಚಿಸಿದ್ದಾರೆ. ಭಾರತದ ಟೀಮ್ ಮ್ಯಾನೇಜ್ಮೆಂಟ್ ಒಂದೆರಡು ಕ್ಲೂಗಳನ್ನು ಅವರಿಂದ ತೆಗೆದುಕೊಳ್ಳಬಹುದಾಗಿದೆ.

ಜಾಫರ್ ಟೀಮ್ ಹೀಗಿದೆ: ರೋಹಿತ್ ಶರ್ಮ, ಶುಭ್​ಮನ್ ಗಿಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಭ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್/ ಶಾರ್ದುಲ್ ಠಾಕೂರ್, ಇಶಾಂತ್ ಶರ್ಮ/ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ

ವಾಸಿಮ್ ಜಾಫರ್

ಎಡಗೈ ಸ್ಪಿನ್ನರ್​ಗಳನ್ನು ಎದುರಿಸಿ ಆಡುವಲ್ಲಿ ಇಂಗ್ಲಿಷ್ ಅಟಗಾರರು ದೌರ್ಬಲ್ಯ ಹೊಂದಿರುವುದರಿಂದ ಅಕ್ಸರ್ ಪಟೇಲ್​ರನ್ನು ಆಡಿಸಬೇಕು ಎಂದು ಜಾಫರ್ ಹೇಳುತ್ತಾರೆ. ಪಿಚ್ ಮತ್ತು ಚೆನೈಯಲ್ಲಿನ ಹವಾಮಾನವನ್ನು ಪರಿಗಣಿಸಿ ಕುಲ್ದೀಪ್ ಇಲ್ಲವೇ ಶಾರ್ದುಲ್​ರನ್ನು ಅಡಿಸಬೇಕೆಂದು ಅವರು ಹೇಳುತ್ತಾರೆ. ಹಾಗೆಯೇ, ಇಶಾಂತ್ ಶರ್ಮ ಮ್ಯಾಚ್ ಫಿಟ್ ಆಗಿದ್ದರೆ ಸಿರಾಜ್ ಬದಲು ಅವರನ್ನೇ ಅಡಿಸುವುದು ಸೂಕ್ತ ಎಂದು ಜಾಫರ್ ಹೇಳಿದ್ದಾರೆ.

ಏತನ್ಮಧ್ಯೆ, ಇಂಗ್ಲೆಂಡಿನ ಸಹಾಯಕ ಬ್ಯಾಟಿಂಗ್ ಕೋಚ್ ಗ್ರಹಾಂ ಥೋರ್ಪ್, ಭಾರತದ ಶಕ್ತಿ ಈಗ ಕೇವಲ ಸ್ಪಿನ್ ಮಾತ್ರ ಆಗಿರದೆ, ವೇಗದ ಬೌಲರ್​ಗಳೂ ಅಗಿದ್ದಾರೆ ಅಂತ ಹೇಳಿದ್ದಾರೆ.

‘ಭಾರತದ ಬೌಲಿಂಗ್ ಅಕ್ರಮಣದ ಬಗ್ಗೆ ಹೇಳುವುದಾದರೆ ಅದೀಗ ಕೇವಲ ಸ್ಪಿನ್ ಮೇಲೆ ಮಾತ್ರ ಅವಲಂಬನೆಗೊಂಡಿಲ್ಲ. ಅವರ ವೇಗದ ದಾಳಿಯೂ ಅತ್ಯತ್ತುಮವಾಗಿದೆ. ಹಾಗಾಗಿ ನಾವು ಕೇವಲ ಅವರ ಸ್ಪಿನ್ ದಾಳಿ ಕುರಿತು ಮಾತ್ರ ಯೋಚಿಸಿದರೆ ಎಡವಟ್ಟಾಗಲಿದೆ. ಅವರ ವೇಗದ ಬೌಲರ್​ಗಳೂ ನಮಗೆ ತೊಂದರೆ ಕೊಡಬಹುದು’ ಎಂದು ವರ್ಚ್ಯುಯಲ್ ಸುದ್ದಿಗೋಷ್ಟಿಯೊಂದರಲ್ಲಿ ಥೋರ್ಪ್ ಹೇಳಿದರು.

ಟೀಮ್ ಇಂಡಿಯಾ

ಚೆನೈಯಲ್ಲಿ ನಡೆಯುವ ಮೊದಲೆರಡು ಟೆಸ್ಟ್​ಗಳಿಗೆ ಬಿಸಿಸಿಐ ಪ್ರಕಟಿಸಿರುವ ತಂಡ ಹೀಗಿದೆ:

ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭ್​ಮನ್ ಗಿಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್ (ಫಿಟ್ ಇದ್ದರೆ ಮಾತ್ರ), ರಿಷಭ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದುಲ್ ಠಾಕೂರ್, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ವೃದ್ಧಿಮಾನ್ ಸಹಾ, ಮಾಯಾಂಕ್ ಅಗರ್​ವಾಲ್, ಹಾರ್ದಿಕ್ ಪಾಂಡ್ಯ

ಶುಭ್​ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಆಗಮಿಸಿದ್ದಾರೆ, ಬೌಲರ್​ಗಳೇ ಎಚ್ಚರ!

Published On - 10:18 pm, Tue, 2 February 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ