ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 4 ಟೆಸ್ಟ್ ಸರಣಿಗಳ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ನೀಡಿದ 160 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್ಗಳನ್ನ ಕಳೆದುಕೊಳ್ಳಲು ಪ್ರಾರಂಭಿಸಿತು. ಕೇವಲ 65 ರನ್ಗಳಿಗೆ ಇಂಗ್ಲೆಂಡ್ ತಂಡದ ಪ್ರಮುಖ 6 ವಿಕೆಟ್ಗಳು ನೆಲಕ್ಕುರುಳಿತು. ಹೀಗಾಗಿ ಭಾರತಕ್ಕೆ ಇಂದೇ ಜಯದ ಮಾಲೆ ಬೀಳುವ ಎಲ್ಲಾ ಲಕ್ಷಣಗಳು ಕಂಡು ಬಂದಿತ್ತು. ಅದರಂತೆ ಭಾರತ ವಿಜಯ ಪತಾಕೆ ಹಾರಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ನೀಡಿದ್ದ 205 ರನ್ಗಳ ಅಲ್ಪಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಆರಂಭಿಕರಾದ ಗಿಲ್, ಪೂಜಾರ, ಕೊಹ್ಲಿ, ರಹಾನೆ, ಬೇಗನೆ ಪೆವಿಲಿಯನ್ ಸೇರಿದರು. ಆದರೆ ರೋಹಿತ್ ಜೊತೆಗೂಡಿದ ಪಂತ್ ಶತಕ ಸಿಡಿಸಿ ಮಿಂಚಿದರು. ರೋಹಿತ್ ಸಹ ಅಮೂಲ್ಯ 49 ರನ್ಗಳ ಕೊಡುಗೆ ನೀಡಿದರು. ಪಂತ್ ಜೊತೆ ಉತ್ತಮ ಆಟ ಆಡಿದ ಸುಂದರ್ ಅಜೇಯ 96 ರನ್ಗಳಿಸಿದರೆ, ಸುಂದರ್ಗೆ ಉತ್ತಮ ಸಾಥ್ ನೀಡಿದ ಅಕ್ಷರ್ 44 ರನ್ ಗಳಿಸಿದರು. ಅಂತಿಮವಾಗಿ ಭಾರತ 365 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಟಿಕೆಟ್ ಪಕ್ಕಾ
ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ನಲ್ಲಿ ಗೆಲುವಿನ ಸನಿಹದಲ್ಲಿರುವ ಟೀಂ ಇಂಡಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಸುಗಮವಾಗಿದೆ. ಒಂದು ವೇಳೆ ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದೆ ಇದ್ದರೂ ಕನಿಷ್ಠ ಪಕ್ಷ ಪಂದ್ಯವನ್ನು ಡ್ರಾ ಮಾಡಿಕೊಂಡರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಸಿಗುವ ಅವಕಾಶವಿತ್ತು. ಹೀಗಾಗಿ ಲಾರ್ಡ್ಸ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಕ್ಕಾಗಿ ಸೆಣಸಾಡಲಿದೆ.
ಗಾವಸ್ಕರ್ಗೆ ಉಡುಗೂರೆ..!
ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಕಾಲಿರಿಸಿ 50 ವರ್ಷ ತುಂಬಿದ ಸಂತಸದಲ್ಲಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ಗೆ ಈ ಟೆಸ್ಟ್ ಗೆಲುವು ಉಡುಗೂರೆ ಅಂತಲೇ ಬಿಂಬಿತವಾಗುತ್ತಿದೆ. ಈ ಹಿಂದೆ ಪಿಚ್ ಬಗ್ಗೆ ಸಾಕಷ್ಟು ಮಾಜಿ ಇಂಗ್ಲೆಂಡ್ ಆಟಗಾರರು ಟೀಕೆ ಮಾಡಿದ್ದಾಗ, ಗವಾಸ್ಕರ್ ಟೀಂ ಇಂಡಿಯಾದ ಬೆನ್ನಿಗೆ ನಿಂತಿದ್ದರು. ಅಲ್ಲದೆ ಟೀಕಾಕಾರರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದರು. ಹೀಗಾಗಿ ಈ ಟೆಸ್ಟ್ ಗೆಲುವು ಟೀಂ ಇಂಡಿಯಾ ಪಾಳಯಕ್ಕೆ ಎರೆಡೆರಡು ಖುಷಿ ನೀಡುತ್ತಿದೆ. ಮೊದಲನೆಯದು ಗವಾಸ್ಕರ್ ಅವರ ಸಾಧನೆಗೆ ಗೆಲುವಿನ ಉಡುಗೂರೆಯಾದರೆ, ಎರಡನೇಯದು ಪ್ರಧಾನಿ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸತತ ಎರಡನೇ ಜಯ ಸಾಧಿಸಿದ್ದಾಗಿದೆ.
ಭಾರತೀಯರಲ್ಲಿ ಮನೆಮಾಡಿದ ಖುಷಿ.. ಸೆಲೆಬ್ರೇಷನ್ಸ್ ಸ್ಟಾರ್ಟೆಡ್!
ಇಂಡಿಯಾ- ಇಂಗ್ಲೆಂಡ್ ನಡುವಿನ ಪಂದ್ಯವೆಂದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಅದು ಕಣ್ಣಿಗೆ ಹಬ್ಬವಿದ್ದಂತೆ. ಏಕೆಂದರೆ ಈ ಎರಡೂ ತಂಡಗಳ ನಡುವಿನ ಕದನಕ್ಕೆ, ಇಂಡಿಯಾ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯದಷ್ಟೇ ಹೈಪ್ ಇರುತ್ತದೆ. ಹೀಗಾಗಿ ಟೀಂ ಇಂಡಿಯಾದ ಈ ಗೆಲುವು ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ನೀಡುವುದಂತೂ ಗ್ಯಾರೆಂಟಿ.. ಅದಕ್ಕೇ ಅದಾಗಲೇ.. Celebrations have Started!
ಇದನ್ನೂ ಓದಿ:India vs England 4th Test Day 3: ಲಂಚ್ ವಿರಾಮದ ನಂತರ ಅಶ್ವಿನ್ ಡಬಲ್ ಸ್ಟ್ರೈಕ್ !
Published On - 1:47 pm, Sat, 6 March 21